ಸಂಡೂರು ವಕೀಲ ನರಸಿಂಹಲು ವಿಧಿವಶ

ಸಂಡೂರು: ನ: 7: ಪಟ್ಟಣದ ಸುಭಾಷ್‍ನಗರದ 8 ಕೊಳಾಯಿ ಹತ್ತಿರ ಇರುವ ಸವಿತಾ ಸಮಾಜದ ಮುಖಂಡರು, ಸಿಪಿಐ ಪಕ್ಷದ ಧುರೀಣರು, ವಕೀಲರಾದ ಕೆ.ನರಸಿಂಹಲು (60) ಅನಾರೋಗ್ಯದಿಂದ ಬಳಲಿ ವಿಧಿವಶರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಇದ್ದಾರೆ, ಮೃತ ಅಂತ್ಯೆ ಕ್ರಿಯೆ ಪಟ್ಟಣದ ಸಾರ್ವಜನಿಕ ರುದ್ರಭೂಮಿಯಲ್ಲಿ ಸವಿತಾ ಸಮಾಜದ ವಿಧಿ ವಿಧಾನಗಳೊಂದಿಗೆ ಅಂತ್ಯೆಕ್ರಿಯೆ ನೆರವೇರಿತು. ಸವಿತಾ ಸಮಾಜದ ಮುಖಂಡರು ಮೃತರಿಗೆ ಸಂತಾಪವನ್ನು ಸೂಚಿಸಿದರು.