ಸಂಡೂರು : ಮೆಣಸಿನಕಾಯಿ ಬೆಳೆ ಮಧ್ಯೆ ಬೆಳೆದಿದ್ದ ಗಾಂಜಾ ವಶ

ಬಳ್ಳಾರಿ ನ 16 : ಜಿಲ್ಲೆಯ ಸಂಡೂರು ತಾಲೂಕಿನ ಬಸಾಪುರ ಗ್ರಾಮದ ಬಳಿ ಮೆಣಸಿನಕಾಯಿ ಬೆಳೆಯ ಮಧ್ಯೆ ಬೆಳೆದಿದ್ದ 7.20 ಲಕ್ಷ ರೂ ಮೌಲ್ಯದ ಗಾಂಜಾ ಗಿಡಗಳನ್ನ ಸಂಡೂರಿನ ಅಬಕಾರಿ ಅಧಿಕಾರಿಗಳು ಇಂದು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯನ್ನಾಧರಿಸಿ ರೈತರುಗಳಾದ ದೇವಣ್ಣ ಮತ್ತು ಬಾಲಯ್ಯ ಎಂಬುವರ ಹೊಲಗಳಲ್ಲಿ ಬೆಳೆದಿದ್ದ ಅಕ್ರಮ ಗಾಂಜಾ ಬೆಳೆಯನ್ನ ಜಪ್ತಿಮಾಡಿದ್ದಾರೆ.‌ 31 ಗಾಂಜಾ ಗಿಡಗಳನ್ನ ಬೆಳೆದಿದ್ದು, ಒಟ್ಟು 49 ಕೆಜಿ 240 ಗ್ರಾಂನಷ್ಟು ಬೆಳೆಯನ್ನ ವಸಪಡಿಸಿಕೊಂಡಿದೆ. ಗಾಂಜಾ ಬೆಳೆದಿದ್ದ ಜಮೀನುಗಳ‌ ಮೂಲ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಆರೋಪಿತರು ಪರಾರಿಯಾಗಿದ್ದಾರೆ.