ಸಂಡೂರು ಭಾಗದ 4 ಗಣಿ ಸರ್ವೇ ಮುಕ್ತಾಯಇಂದು ಬಳ್ಳಾರಿ ಭಾಗದ ಸರ್ವೇ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,2-  ಸುಪ್ರೀಂ ಕೋರ್ಟಿನ ಆದೇಶದನ್ವಯ ಸಿಇಸಿ ಸೂಚನೆಯಂತೆ  ಕರ್ನಾಟಕ ಆಂಧ್ರದ ಗಡಿಗೆ ಹೊಂದಿಕೊಂಡಿರುವ 7 ಬಿ1 ಕೆಟಗರಿಯ ಗಣಿಪ್ರದೇಶಗಳ ಪೈಕಿ ಸಂಡೂರು ತಾಲೂಕು   ವ್ಯಾಪ್ತಿಯ  4   ಗಣಿಪ್ರದೇಶಗಳ ಎರೆಡೂ ರಾಜ್ಯಗಳ ಅಧಿಕಾರಿಗಳಿಂದ ಕಳೆದ ನಾಲ್ಕು ದಿನಗಳಿಂದ ನಡೆದಿರುವ ಜಂಟಿ  ಸರ್ವೆ ಕಾರ್ಯ ನಿನ್ನೆ  ಪೂರ್ಣಗೊಂಡಿದೆ. ಇಂದು ಬಳ್ಳಾರಿ ಭಾಗದ ಹೊನ್ನಳ್ಳಿ ಮತ್ತು ಓಬಳಾಪುರಂ ನಡುವಿನ ಗಡಿ ಭಾಗದ ಮೂರು ಗಣಿಗಳ ಸರ್ವೇ ಕಾರ್ಯ ಆರಂಭಗೊಂಡಿದೆ.
 ಸರ್ವೆ   ಕಾರ್ಯ   ನಡೆಸುತ್ತಿರುವ ಸೂರತ್ಕಲ್‍ನ   ತಾಂತ್ರಿಕ   ತಂಡ,   ಅಂತರಾಜ್ಯಗಳ ಭೂದಾಖಲೆಗಳ   ಇಲಾಖೆ,   ಅರಣ್ಯ,   ಗಣಿ   ಮತ್ತು   ಭೂ ವಿಜ್ಞಾನ   ಇಲಾಖೆಗಳ   ಅಧಿಕಾರಿಗಳು,   ಮೇ   29   ರಂದು ಗಣಿಪ್ರದೇಶಗಳ   ಸರ್ವೆ   ಕಾರ್ಯ   ಆರಂಭಿಸಿದ್ದು, ನಿಗದಿತ   ಶೆಡ್ಯೂಲ್‍ನಂತೆ   ನಾಲ್ಕು   ದಿನಗಳಲ್ಲಿ ಜೂ.1ರೊಳಗೆ   ಸಂಡೂರು   ತಾಲೂಕಿನ   ಮೆಹಬೂಬ್ ಟ್ರಾನ್ಸ್‍ಪೋರ್ಟ್   ಕಂಪನಿ(ಎಂಬಿಟಿ),   ಎನ್.ರತ್ನಯ್ಯ(ಎನ್ ಆರ್),   ಹಿಂದ್ ಟ್ರೇಡರ್ಸ್(ಹೆಚ್ ಟಿ) ಮತ್ತು  ಟಿ.ನಾರಾಯಣರೆಡ್ಡಿ (ಟಿಎನ್ ಆರ್)   ಗಣಿ ಪ್ರದೇಶಗಳನ್ನು ಸರ್ವೆ ಮಾಡಿದ್ದಾರೆ.
ಉಳಿದ  ವಿಭೂತಿಗುಡ್ಡ ಮೈನಿಂಗ್ (ವಿಜಿಎಂ), ಬಳ್ಳಾರಿ ಮೈನಿಂಗ್ ಕಾರ್ಪೊರೇಷನ್ (ಬಿಎಂಸಿ), ಸುಗ್ಗಲಮ್ಮ ಗುಡ್ಡ ಗಣಿ ಪ್ರದೇಶಗಳ   ಸರ್ವೆ   ಕಾರ್ಯ  ಇಂದಿನಿಂದ  ನಡೆಯಲಿದೆ.  ಜೂ.6 ರೊಳಗೆ   ಏಳು   ಗಣಿಪ್ರದೇಶಗಳ  ಸರ್ವೆ ಕಾರ್ಯವನ್ನು ಪೂರ್ಣಗೊಳಿಸಲಿದ
ಗಣಿಗಾರಿಕೆ ಸ್ಥಗಿತಗೊಂಡು  ಒಂದು ದಶಕ ಕಳೆದಿರುವುದರಿಂದ ಗಣಿಪ್ರದೇಶದಲ್ಲೆಲ್ಲ ಮುಳ್ಳುಕಂಟಿಗಳು ಬೆಳೆದು, ರಸ್ತೆಗಳೆಲ್ಲವೂ ಮುಚ್ಚಿ ಹೋಗಿವೆ. ಇದರಿಂದ ಸರ್ವೆ ಕಾರ್ಯಕ್ಕೆ ಒಂದಷ್ಟು ತೊಂದರೆಯಾಗುತ್ತಿದ್ದು, ಇಳಿಜಾರು ಪ್ರದೇಶವಾದ್ದರಿಂದ  ಸರ್ವೇ ಅಧಿಕಾರಿಗಳಿಗೆ ತುಸು ಕಷ್ಟ ಅನುಭವಿಸಬೇಕಾಗಿದೆ. 
ಸರ್ವೆ ವೇಳೆ ಸ್ಥಳದಲ್ಲಿದ್ದ ಗಣಿ ಮಾಲೀಕರಿಂದಲೂ ಅಧಿಕಾರುಗಳು  ಗಣಿಗಾರಿಕೆಗೆ ನೀಡಿದ್ದ ಪ್ರದೇಶವೆಷ್ಟು? ಎಲ್ಲಿಂದ ಎಲ್ಲಿಯವರೆಗೆ? ಎಂಬಿತ್ಯಾದಿ ಮಾಹಿತಿಯನ್ನು ಪಡೆದಿದ್ದಾರೆ. 
 ಸುಪ್ರೀಂ ಕೋರ್ಟ್‍ಗೆ ವರದಿ;
ಜಂಟಿ ಸರ್ವೆ ನಡೆಸುತ್ತಿರುವ ಸೂರತ್ಕಲ್‍ನ ಎನ್‍ಐಟಿಕೆ ತಾಂತ್ರಿಕ ತಂಡ, ಸರ್ವೆ ಕುರಿತ ಮಾಹಿತಿಯನ್ನು ಸಿಇಸಿಗೆ ನೀಡಲಿದೆ. ಸಿಇಸಿ ಸಭೆ ನಡೆಸಿ ವರದಿ ಸಿದ್ಧಪಡಿಸಿ ಸುಪ್ರೀಂಕೋರ್ಟ್‍ಗೆ ಸಲ್ಲಿಸಲಿದೆ. ಸುಪ್ರೀಂಕೋರ್ಟ್ ಈ ವರದಿಯನ್ನು ಪರಿಗಣಿಸಿ, ಪರಿಶೀಲಿಸಿ ಬಿ1 ಕೆಟಗರಿಯ ಏಳು ಗಣಿಪ್ರದೇಶಗಳ ಮುಂದಿನ ಸ್ಥಿತಿಗತಿ  ಕುರಿತು ಆದೇಶ ನೀಡಲಿದೆ.