ಸಂಡೂರು : ಪೋಲಿಸ್ ಪರೇಡ್


ಸಂಜೆವಾಣಿ ವಾರ್ತೆ
ಸಂಡೂರು:ಏ: 7: ತಾಲೂಕಿನಾದ್ಯಂತ ಚುನಾವಣೆಯ ಚುರುಕು ಪ್ರಾರಂಭವಾಗಿದೆ, ಒಂದು ಕಡೆ ರಾಜಕಾರಣಿಗಳು ಪ್ರಚಾರ ಪ್ರಾರಂಭಿಸಿದರೆ ಸೂಕ್ತ ಬಂದೋ ಬಸ್ತು, ಅಕ್ರಮವನ್ನು ತಡೆಯಲು ಚುನಾವಣಾಧಿಕಾರಿಗಳ ನೇತೃತ್ವದಲ್ಲಿ 3 ತುಕಡಿಗಳ ಪಥ ಸಂಚಲನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಈ ಸಂದರ್ಭದಲ್ಲಿ 90 ಪೋಲಿಸ್, ಸಿ.ಅರ್.ಪಿ.ಎಫ್. ಹಾಗೂ ಇತರ 3 ತಂಡಗಳು ತಲಾ 30 ಸದಸ್ಯರನ್ನೊಳಗೊಂಡು ಪಥ ಸಂಚನಲ ನಡೆಸಿದರು, ಪಟ್ಟಣದ ಪೋಲಿಸ್ ಠಾಣೆಯಿಂದ ವಿಜಯ ವೃತ್ತದ ಮಾರ್ಗವಾಗಿ ಅನಂದ ಬಜಾರ್, ಕೆ.ಇ.ಬಿ. ವೃತ್ತ, ಕುಮಾರಸ್ವಾಮಿ ವೃತ್ತ, ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತದ ವರೆಗೆ ಪಥ ಸಂಚನಲ ನಡೆಸಿದರು.
ಈ ಸಂದರ್ಭದಲ್ಲಿ ಅಡಿಷನಲ್ ಎಸ್.ಪಿ, ಡಿ.ವೈ.ಎಸ್ಪಿ, ಸಿ.ಪಿ.ಐ., ತಾಲೂಕಿನ ಸಂಡೂರು, ತೋರಣಗಲ್ಲು, ಚೋರುನೂರು ಠಾಣೆಯ ಪಿ.ಎಸ್.ಐ. ಗಳೂ ಸಹ ಭಾಗಿಯಾಗಿದ್ದರು.
ಅಲ್ಲದೆ ಚುನಾವಣಾಧಿಕಾರಿ ಶರಣಬಸಪ್ಪ, ತಹಶೀಲ್ದಾರ್ ಗುರುಬಸವರಾಜ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಷಡಾಕ್ಷರಿ, ಪೋಲಿಸ್ ಸಿಬ್ಬಂದಿಗಳು ಭಾಗವಹಿಸಿದ್ದರು.