ಸಂಡೂರು ಪುರಸಭೆ ವಿರೋಧ ಪಕ್ಷದ ನಾಯಕರಾಗಿ ಅಬ್ದುಲ್ ಮುನಾಫ್

ಸಂಡೂರು:ಮಾ:28: ಪುರಸಭೆಯ ದಿ.ಕೆ.ಎಸ್. ವೀರಭದ್ರಪ್ಪನವರ ಸಭಾಂಗಣದಲ್ಲಿ ನಡೆಯುವ ಪುರಸಭಾ ಕಲಾಪಗಳಿಗೆ ಭಾರತೀಯ ಜನತಾ ಪಕ್ಷದಿಂದ ಅಬ್ದುಲ್ ಮುನಾಫ್ ರವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆಂದು ಕೊಂಚಗೇರಿ ಹರೀಶ್, ಹಟ್ಟಿ ರತ್ನಮ್ಮ, ದುರ್ಗಮ್ಮ, ಲಕ್ಷ್ಮೀದೇವಿ, ಲಕ್ಷ್ಮೀ ಎರ್ರೆಮ್ಮ, ತಿಪ್ಪಮ್ಮ, ದೀಪಾ.ಡಿ. ರಾಮಪ್ಪ ಮಾಳಗಿ ಆಶಾನರಸಿಂಹ, ಪಾರ್ವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಪುರಸಭೆಯ ಮುಖ್ಯಾಧಿಕಾರಿ ಹೆಚ್. ಇಮಾಮ್ ಸಾಹೇಬ್ ಪುರಸಭಾ ಅಧ್ಯಕ್ಷೆ ಅನಿತಾ ವಸಂತಕುಮಾರ ರವರಿಗೂ ನೇಮ ಮಾಡಿರುವ ಬಗ್ಗೆ ಪತ್ರವನ್ನು ನೀಡಲಾಗಿದೆ.