ಸಂಡೂರು ಪುರಸಭೆ ಬಜೆಟ್ ಮಂಡನೆ


ಸಂಜೆವಾಣಿ ವಾರ್ತೆ
ಸಂಡೂರು: ಮಾ: 4: 40 ಲಕ್ಷದ 40 ಸಾವಿರ ರೂಪಾಯಿ ಪುರಸಭೆಯ ಆಸ್ತಿ ತೆರಿಗೆ 92.40 ಲಕ್ಷ ನೀರಿನ ತೆರಿಗೆ 62.40 ಲಕ್ಷ ಮಳಿಗೆ ಬಾಡಿಗೆ 22.50 ಲಕ್ಷ 15ನೇ ಹಣಕಾಸು ಅಯೋಗದ ಅನುದಾನ 249 ಲಕ್ಷ ಎಸ್.ಎಫ್.ಸಿ. ಮುಕ್ತ ನಿಧಿ 120 ಲಕ್ಷ ಎಸ್.ಎಫ್.ಸಿ. ವೇತನ ಅನುದಾನ 315 ಲಕ್ಷ ಎಸ್.ಎಫ್.ಸಿ. ವಿದ್ಯುತ್ ಅನುದಾನ, 460 ಲಕ್ಷ ಪುರಸಭೆಯ ಇತರೆ ಸೇವೆಗಳಿಂದ ಬರಬಹುದಾದ ಆದಾಯ 95. 80 ಲಕ್ಷಗಳು ಎಂದು ಪುರಸಭೆಯ ಅಧ್ಯಕ್ಷೆ ಅನಿತಾ ವಸಂತಕುಮಾರರವರು ತಿಳಿಸಿದರು.
ಅವರು ಪಟ್ಟಣದ ಪುರಸಭೆಯ ದಿ.ಕೆ.ಎಸ್. ವೀರಭದ್ರಪ್ಪನವರ ಸಭಾಂಗಣದಲ್ಲಿ 2022-23ನೇ ಸಾಲಿನ ಆಯ್ಯವ್ಯಯಪಟ್ಟಿ 2023-24ನೇ ಸಾಲಿನ ಆಯ್ಯವ್ಯಯದ ಪ್ರಮುಖ ಅಂಶಗಳ ಕುರಿತು ಮಾತನಾಡಿ, 2023-34ನೇ ಸಾಲಿನಲ್ಲಿ ಕಾಯ್ದಿರಿಸಿದ ವೆಚ್ಚಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ 4.40 ಲಕ್ಷ ಸಾರ್ವಜನಿಕ ಬೀದಿದೀಪಗಳ ಅಭಿವೃದ್ದಿ ಕುರಿತು 2.24 ಲಕ್ಷ ರಉದ್ರಭೂಮಿ ಹಾಗೂ ಪಾರ್ಕ್ ಗಳ ಅಭಿವೃದ್ದಿ 85 ಲಕ್ಷ ವಾಹನ ಮತ್ತು ಆಧುನಿಕ ಸಲಕರಣೆ 11.7 ಲಕ್ಷ ಕಟ್ಟಡ ಹಾಗೂ ಇತರೆ ನಾಗರೀಕ ವಿನ್ಯಾಸ ನಾಗರೀಕರ ವಿನ್ಯಾಸ 166.50 ಲಕ್ಷ  ಘನ ತ್ಯಾಜ್ಯ ವಸ್ತು ನಿರ್ವಾಹಣೆಗಾಗಿ 236.50 ಲಕ್ಷ ಕುಡಿಯುವ ನೀರು ಒಳಚರಂಡಿಗಾಗಿ 426.50 ಲಕ್ಷ ಪ.ಜಾತಿ/ ಪ.ಪಂ. ಇತರೆ ಹಿಂದುಳಿದ ಜನಾಂಗ ಮತ್ತು ಅಂಗವಿಕಲರ ಅಭಿವೃದ್ದಿಗಾಗಿ 51.03 ಲಕ್ಷ ವೇತನ ಪಾವತಿಗಾಗಿ 327.50 ಲಕ್ಷ ರೂ. ಕಾಯ್ದಿರಿಸಲಾಗಿದೆ.
2023-24ನೇ ಸಾಲಿನ ಸಂಭ್ಯವ್ಯ ಪ್ರಾರಂಭಿಕ ಶಿಲ್ಕು 11 ಕೋಟಿ 53 ಲಕ್ಷದ 46 ಸಾವಿರದ ಐದುನೂರು ಒಟ್ಟಾರೆ ಜಮಾ 19 ಕೋಟಿ, 94 ಲಕ್ಷದ 71 ಸಾವಿರದ ಐದುನೂರು 2023-24ನೇ ಸಾಲಿನಲ್ಲಿ ಒಟ್ಟಾರೆ ಪಾವತಿಗಾಗಿ ಕಾಯ್ದಿರಿಸಿದ ಮೊತ್ತ 30 ಕೋಟಿ 85 ಲಕ್ಷದ 78000 ರೂಪಾಯಿ. 2023-24ನೇ ಸಾಲಿನ ಉಳಿತಾಯ ಮೊತ್ತ 62,50, 000 ಅಗಿರುತ್ತದೆ ಎಂದು ತಿಳಿಸಿದರು.
ಪುರಸಭೆಯವರು ಬಜೆಟ್‍ನಲ್ಲಿ 10 ಲಕ್ಷದ 91 ಸಾವಿರದ 600ನೂರು ಡಿಫಿಷಿಟ್ ಇದೆ. ನೀವು ಪುರಸಭೆಯನ್ನು ಯಾವ ರೀತಿ ನಡೆಸುತ್ತೀರಿ ತೆರಿಗೆ ಕಟ್ಟಲು ಬಂದವರನ್ನು ವಾಪಾಸ್ಸು ಕಳಿಸುತ್ತೀರಿ, ಶೈಕ್ಷಣಿಕ ಪ್ರವಾಸವನ್ನು ಯಾವಾಗಲೂ ಕೈಗೊಂಡಿಲ್ಲ ಬಾಯಿಮಾತಿನಲ್ಲಿ ಪ್ರವಾಸದ ಬಗ್ಗೆ ಮಾತನಾಡುತ್ತೀರಿ ಅ ವಿಚಾರವನ್ನು ಡಿಲಿಟ್ ಮಾಡಿಬಿಡಿ ಎಂದು ಬಿಜೆಪಿಯ ನಾಮ ನಿರ್ದೇಶಕ ರವಿಕಾಂತ ಬೋಸ್ಲೆಯವರು ಅಧ್ಯಕ್ಷರಿಗೆ ಮನವಿ ಮಾಡಿದರೆ ಹಿರಿಯ ಬಿಜೆಪಿ ಸದಸ್ಯ ಮಾಳ್ಗಿ ರಾಮಪ್ಪನವರು ವಿರೋಧಿಸಿದರು. ಶೌಚಾಲಯದಲ್ಲಿ ನೀರಿನ ಸರಬರಾಜು ಇಲ್ಲ ಮೆಂಟೇನೆನ್ಸ್ ಇಲ್ಲ 20 ಲಕ್ಷ ಖರ್ಚು ಹೇಗೆ ಬಂತು ಕಾಂಗ್ರೇಸ್ ಪಕ್ಷದ ಕೆ.ವಿ. ಸುರೇಶ್ ಪ್ರಶ್ನೆ. 42 ಸಾವಿರ ರೂಪಾಯಿ ಮಾಳಿಗೆಯಿಂದ ಬಂದ ಬಾಡಿಗೆ ಬರಬೇಕಾಗಿದ್ದು ಸಾರ್ವಜನಿಕರು ತಡವಾಗಿ ಕಟ್ಟಿದರೆ ಬಡ್ಡಿ ಹಾಕುತ್ತೀರಿ, ವ್ಯವಾರಸ್ಥರಿಗೆ ಏನು ಆದಾಯ ಇಲ್ಲ ಯಾವ ರೀತಿ ಆದಾಯವಿಲ್ಲ ಅವರಿಗೆ ಎಲ್ಲಾ ತರಹದ ಸೌಲಭ್ಯ ಕೊಡುತ್ತೀರಿ ಇದರಲ್ಲಿ ಏನೋ ಕುತಂತ್ರವಿದ್ದು ಒಳಗಡೆ ಅಂತರಂಗ ವ್ಯವಹಾಋ ನಡೆಯುತ್ತಿದೆ. ಬಹಿರಂಗವಾಗಲಿ ಎಂದು ಕೆ.ವಿ. ಸುರೇಶ್   ಗುಡಿಗಿದರು, ಸಂಡೂರಿನಲ್ಲಿ 33 ಪಾರ್ಕಗಳಿವೆ 2 ಪಾರ್ಕಗಳು ಅಭಿವೃದ್ದಿ ಬಿಟ್ಟರೆ 31 ಪಾರ್ಕ ಅಭಿವೃದ್ಧಿಯಾಗಿಲ್ಲ ಸಂಘ ಸಂಸ್ಥೆಗಳಿಗೆ ಪಾರ್ಕನ ಹೊಣೆಗಾರಿಕೆ ನೀಡುವುದಾದರೆ 3 ಎನ್.ಜಿ.ಓ ಗಳು ಇವೆ ಅವವರಿಗೆ ಕೊಡಿ ನಾನು ಹೊಣೆ ಹೊರುತ್ತೇನೆ ಎಂದು ಬಿಜೆಪಿ ನಾಮ ನಿರ್ದೇಶಕ ಸದಸ್ಯ ರವಿಕಾಂತ ಬೋಸ್ಲೆ ಮನವಿ ಮಾಡಿದರು. ಕಾಂಗ್ರೇಸ್ ಪಕ್ಷದ ಎಲ್ ಹೆಚ್. ಶಿವಕುಮಾರ ಮಾತನಾಡಿ ಹಿರಿಯರನ್ನು ಮುಮದಿಟ್ಟುಕೊಂಡು ಬಜೆಟ್ ಮಂಡಿಸಿದರೆ ಚೆನ್ನಾಗಿರುತ್ತಿತ್ತು ಆದರೆ ಏಕಾ ಏಕಿ ಬಜೆಟ್ ಮಂಡಿಸಿದರೆ ಹೇಗೆ ಎಂದು ಬಿಜೆಪಿ ಹಿರಿಯ ಸದಸ್ಯ ಮಾಳ್ಗಿ ರಾಮಪ್ಪನವರನ್ನು ನೋಡಿ ವ್ಯಂಗವಾಡಿದರು. ಬಇಜೆಪಿಯ ಅಶಾನರಸಿಂಹ  ಮಾತನಾಡಿ ನಮ್ಮ ವಾರ್ಡನಲ್ಲಿ ಅನೇಕ ಸಮಸ್ಯೆಗಳು ಇವೆ ಬಗೆಹರಿಸುವವರು ಯಾರು? ಎಂದು ಪ್ರಶ್ನಿಸಿದರು. ಕೆ.ವಿ. ಸುರೇಶ್, ಕಾಂಗ್ರೇಸ್ ಸದಸ್ಯ ಮಾತನಾಡಿ, ಹಗರಿ ಪ್ರಭುರಾಜರವರು ಬಜೆಟ್‍ನ್ನು ಮಂಡಿಸಿದಷ್ಟು ಮಾಜಿ ಮುಖ್ಯಮಂತ್ರಿ ಸಿ9ದ್ದರಾಮಯ್ಯನವರು ಮಂಡಿಸಿಲ್ಲ ಎಂದು ತಮಾಷೆ ಮಾಡಿದಾಗ ಸಭೆಯಲ್ಲಿ ಕರತಾಡನ ಸ್ವೀಕರಿಸಿ ಅಲ್ಲಿಗೆ ಸಭೆ ಮುಕ್ತಾಯ ಮಾಡಿದರು.