ಸಂಡೂರು ಪುರಸಭೆ ಕಾಂಗ್ರೇಸ್ ತೆಕ್ಕೆಗೆ

ಸಂಡೂರು ನ 05: ಪಟ್ಟಣದ ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಚುನಾವಣಾ ಅಧಿಕಾರಿ ಹೆಚ್.ಜಿ. ರಶ್ಮಿ ಪೂರ್ಣ ಪ್ರಮಾಣದಲ್ಲಿ ತಯಾರಿ ನಡೆಸಿದ್ದರು, ಅದರೆ ಯಾವುದೇ ರೀತಿಯ ಸ್ಪರ್ಧೆ ಎರ್ಪಡದೆ ಕಾಂಗ್ರೇಸ್‍ಪಕ್ಷದ 17ನೇ ವಾರ್ಡನ ಸದಸ್ಯರಾದ ಅನಿತಾ ವಸಂತಕುಮಾರ್ ಅವರು ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾದರೆ, ಅದೇ ರೀತಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದ 9ನೇ ಅಭ್ಯರ್ಥಿ ವಿರೇಶ್‍ಸಿಂಧೆ ಮಾತ್ರ ನಾಮಪತ್ರ ಸಲ್ಲಿಸಿದರು ಯಾವುದೇ ಪ್ರತಿಸ್ಪರ್ಧಿಗಳಿಲ್ಲದೆ ಅವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಹೆಚ್.ಜಿ. ರಶ್ಮಿ ಘೋಷಿಸಿದರು.
ಈ ಸಂದರ್ಭದಲ್ಲಿ ಶಾಸಕ ಈ.ತುಕರಾಂ ಉಪಸ್ಥಿತರಿದ್ದು ಪುರಸಭೆ ಇಡೀ ಪಟ್ಟಣದ ಸಮಗ್ರ ಅಭಿವೃದ್ದಿಗೆ ಇರುವಂತಹ ಕೇಂದ್ರವಾಗಿದೆ, ಅದ್ದರಿಂದ ಕಾಂಗ್ರೇಸ್‍ಪಕ್ಷದ ಪ್ರತಿಯೊಬ್ಬ ಸದಸ್ಯರೂ ಸಹ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಪಟ್ಟಣದ ಪೂರ್ಣ ಅಭಿವೃದ್ದಿಯನ್ನು ಮಾಡಬೇಕು, ಪ್ರಮುಖವಾಗಿ ಕುಡಿಯುವ ನೀರು, ಬೀದಿ ದೀಪ, ಚರಂಡಿ, ಸ್ವಚ್ಚತೆಯನ್ನು ಕಾಪಾಡುವುದು ಅತಿ ಅಗತ್ಯವಾಗಿದೆ, ಅದಕ್ಕೆ ಬೇಕಾದ ಎಲ್ಲಾ ರೀತಿಯ ಅನುದಾನವನ್ನು ತಂದು ಕೊಡಲು ಸಿದ್ದನಿದ್ದೇನೆ, ಅದ್ದರಿಂದ ನಿಷ್ಠೆಯಿಂದ ಕೆಲಸ ಮಾಡಿದಾಗ ಜನರು ನಮ್ಮನ್ನು ಬೆಂಬಲಿಸುತ್ತಾರೆ, ಸದಾ ನೆನೆಯುತ್ತಾರೆ, ಇಲ್ಲವಾದಲ್ಲಿ ನಾವು ಅವರಿಂದ ದೂರಹೋಗುತ್ತೇವೆ, ಅಧಿಕಾರದಿಂದಲೂ ಸಹ ದೂರ ಉಳಿಯುತ್ತೇವೆ, ಅದ್ದರಿಂದ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಅನಿತಾ ಅವರು ಮತ್ತು ಉಪಾಧ್ಯಕ್ಷ ವಿರೇಶ್ ಅವರು ಶ್ರದ್ದೇಯಿಂದ ಕಾರ್ಯ ನಿರ್ವಹಿಸಿ ಎಂದರು.
ವಿಜಯದ ನಗೆಯನ್ನು ಬೀರಿದ ಎಲ್ಲಾ ಕಾಂಗ್ರೇಸ್ ಕಾರ್ಯಕರ್ತರು ಪಟ್ಟಣದ ವಿಜಯ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು, ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತ ಸದಸ್ಯ ಅಕ್ಷಯ ಲಾಡ್, ವಿಶ್ವಾಸ್ ಲಾಡ್, ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಏಕಾಂಬರಪ್ಪ, ಸಂಡೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸತೀಶ್ ಚಿತ್ರಿಕಿ, ಜೆ.ಬಿ.ಟಿ. ಬಸವರಾಜ, ಕಾಂಗ್ರೇಸ್ ಪಕ್ಷದಿಂದ ಆಯ್ಕೆಯಾದ ಎಲ್ಲಾ 12 ಜನ ಕಾಂಗ್ರೇಸ್ ಸದಸ್ಯರುಗಳು, ಮಾಜಿ ಸದಸ್ಯ ತಾಜ್ ಫಕೃದ್ದೀನ್, ಉಪಸ್ಥಿತರಿದ್ದರು.