ಸಂಡೂರು ಪುರಸಭೆಯ ಬಜೆಟ್ ಮಂಡನೆ

ಸಂಡೂರು: ಮಾ: 27 ಪ್ರತಿ ವರ್ಷದಂತೆ ಈ ಬಾರಿಯೂ ಅಣದರೆ 2021-22ನೇ 3,64,000/-ಸಾವಿರ ಮೊತ್ತದ ಉಳಿತಾಯ ಬಜೆಟ್ ಮಂಡನೆಯನ್ನು ಅಧ್ಯಕ್ಷೆ ಅನಿತಾ ವಸಂತಕುಮಾರ್ ಪ್ರಕಟಿಸಿದರು, 2021-22ನೇ ಸಾಲಿಗೆ ನೂತನ ಬಜೆಟ್ ಮಂಡನೆ ಮಾಡುತ್ತಿದ್ದು ಇದಕ್ಕೆ 14,20,50000/-ರೂಪಾಯಿಗಳನ್ನು ಅಂದಾಜು ಮಾಡುವ ಮೂಲಕ ವಿವರಗಳನ್ನು ಸಭೆಯ ಮುಂದೆ ಇಡಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಹೆಚ್.ಇಮಾಮ್ ಸಾಹೇಬ್ ತಿಳಿಸಿದರು.
ಅವರು ಪಟ್ಟಣದ ಪುರಸಭೆಯ ಕೆ.ಎಸ್. ವೀರಭದ್ರಪ್ಪ ಸಭಾಂಗಣದಲ್ಲಿ ಎಲ್ಲಾ ಸದಸ್ಯರ ವಿಶೇಷ ಬಜೆಟ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ಹಿಂದಿನ ವರ್ಷದಲ್ಲಿ ಮಾಡಿದ ಖರ್ಚು ಮತ್ತು ಈ ಬಾರಿ ಅಂದಾಜಿಸಲಾದ ಖರ್ಚುಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಸಭೆಯ ಮುಂದಿಡುತ್ತಿದ್ದು ಅದಕ್ಕೆ ಸದಸ್ಯರುಪೂರ್ಣ ಚರ್ಚಿಸಿ ಕ್ರಿಯಾಯೋಜನೆಗಳನ್ನು ಅನುಮೋದಿಸಬೇಕಾಗುವುದು ಎಂದರು.
ಪುರಸಭೆಯ ಅಭಿವೃದ್ದಿ ಅಧಿಕಾರಿ ಹಗರಿಪ್ರಭುರಾಜ ಅವರು ಇಡೀ ಬಜೆಟ್ ಪ್ರತಿಯನ್ನು ಎಲ್ಲಾ ಸದಸ್ಯರುಗಳಿಗೆ ನೀಡುವುದಲ್ಲದೆ ಅದರ ಪೂರ್ಣ ವಿವರವನ್ನು ಮಂಡಿಸಿದರು. 2,29,35,978/- ಬಂದ ಅದಾಯ , ಉಳಿತಾಯ 3,64,000/- ಮಾಡಿದ್ದು ಒಟ್ಟು 22571978/- ಬಜೆಟ್ ಅಗಿದೆ,
ಹಿಂದಿನ ವರ್ಷ 9,79,76,015/- ರೂಪಾಯಿಗಳ ವಾಸ್ತವಿಕ ಲೆಕ್ಕವನ್ನು ಅಂದಾಜಿಸಿದ್ದು ಚಾಲ್ತಿ ವರ್ಷದಲ್ಲಿ 8,14,77015 ರೂಪಾಯಿಗಳ ಅಂದಾಜು ವೆಚ್ಚವಲ್ಲದೆ ವರ್ಷದ ಡಿಸೆಂಬರ್ ವರೆಗಿನ ಲೆಕ್ಕದಲ್ಲಿ 2021-21ನೇ ಸಾಲಿನಲ್ಲಿ 12,50,54,330 ರೂಪಾಯಿಗಳ ಬಜೆಟ್ ಇಡಲಾಗಿತ್ತು ಈ ವರ್ಷ ಅಂದರೆ 2021-22ನೇ ಸಾಲಿಗೆ 14,20,50000/- ಅಂದಾಜಿಸಿಲಾಗಿದೆ.
ಅದರಲ್ಲಿ ಪ್ರಮುಖವಾಗಿ ಭೂಮಿ ಇತರೆ ಚಿತಗಾರ, ರುದ್ರಭೂಮಿ, ಕಟ್ಟಡಗಳು, ಲಘುವಾಹನಗಳು ಇತರೆ ವಾಹನಗಳು ಕಛೇರಿ ಉಪಕರಣಗಳು, ಕಛೇರಿ ಪೀಠೋಪಕರಣಗಳು, ಜೋಡಣೆಗಳು ಮತ್ತು ಸಲಕರಣೆಗಳು ಜೋಡಣೆಗಳು, ನಾಗರಿಕ ವಿನ್ಯಾಸಗಳು ಇತರೆ ಒಟ್ಟು 2ಕೋಟಿ 1 ಲಕ್ಷ ರೂಪಾಯಿಗಳ ಅಂಧಾಜು ವ್ಯಯ ಮಾಡಲಾಗುವುದು, ನಗರ ಮತ್ತು ಪಟ್ಟಣದ ಯೋಜನೆ ಅಡಿಯಲ್ಲಿ ಪಾರ್ಕ 45ಲಕ್ಷ, ನಾಗರೀಕ ವಿನ್ಯಾಸ 40 ಲಕ್ಷ, ರಸ್ತೆಗಳು ಪಾದಚಾರಿ ಮಾರ್ಗ 2ಕೋಟಿ 40ಲಕ್ಷ, ರಸ್ತೆ ಬದಿ ಚರಂಡಿಗಳು 1ಕೋಟಿ 75ಲಕ್ಷ, ಸ್ಥಿರಾಸ್ಥಿ ಇತರೆ 25ಲಕ್ಷಗಳ ಕಾರ್ಯ ಮಾಡಲಾಗುವುದು ಬೀದಿ ದೀಪ ಅಡಿಯಲ್ಲಿ 85ಲಕ್ಷ, ಇತರೆ 15ಲಕ್ಷ, ಮಳೆ ನೀರು ಚರಂಡಿ ಮಾರ್ಗ 15ಲಕ್ಷ, ಆರೋಗ್ಯ ಅಡಿಯಲ್ಲಿ ಯಂತ್ರೋಪಕರಣಗಳು ಬಳಕೆ 22ಲಕ್ಷ, ಇತರೆ ವಿನ್ಯಾಸ 5ಲಕ್ಷ, ನಾಗರೀಕ ವಿನ್ಯಾಸ 50ಲಕ್ಷ, ನೀರು ಸರಬರಾಜು ಅಡಿಯಲ್ಲಿ 85 ಲಕ್ಷ, ವಿತರಣೆಯಲ್ಲಿ 35ಲಕ್ಷ, ಯಂತ್ರೋಪಕರಣ 40 ಲಕ್ಷ, ಹಾಗೂ ಇತರೆ 56ಲಕ್ಷ, ಸರಬರಾಜು ಇತರೆ 40ಲಕ್ಷ ವ್ಯಯ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡ ಬಡತನ ನಿರ್ಮೂಲನೆ ಅಡಿಯಲ್ಲಿ ಕಟ್ಟಡ 3ಲಕ್ಷ, ಇತರೆ 2.5ಲಕ್ಷ, ರಸ್ತೆ ಬದಿ ಚರಂಡ 3ಲಕ್ಷ ಬಡತನ, ಕೊಳಗೇರಿ ನಿರ್ಮೂಲನೆ 5ಲಕ್ಷ, ಇತರೆ 50 ಸಾವಿರ ಒಟ್ಟು 14,20,50000/- ವೆಚ್ಚವನ್ನು ಮಾಡುವ ಬಗ್ಗೆ ಬಜೆಟ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯ ವಿರೋಧ ಪಕ್ಷದ ನಾಯಕನಾಗಿ ಬಿಂಬಿತವಾಗಿರುವ ಅಬ್ದುಲ್ ಮುನಾಫ್ ಅವರು ಪ್ರಶ್ನಿಸಿ ಶೌಚ್ಚಾಲಯಕ್ಕೆ ಬಹಳಷ್ಟು ಹಣ ಈ ಹಿಂದೆ ಖರ್ಚಾಗಿದೆ, ಈಗಲೂ ಇದೆ ಅದರೆ ಪಟ್ಟಣದಲ್ಲಿರುವ 16 ಸಾರ್ವಜನಿಕ ಶೌಚ್ಚಾಲಯಗಳಲ್ಲಿ ಕೇವಲ 4-5 ಮಾತ್ರ ಕಾರ್ಯನಿರ್ವಹಿಸುತ್ತಿವೆ, ಉಳಿದವು ಬಳಕೆಗೆ ಬಾರದಂತಾಗಿವೆ, ಏಕೆ, ಇದಕ್ಕೆ ಕಳೆದ 3 ತಿಂಗಳಿಂದಲೂ ಕೇಳುತ್ತಿದ್ದರೂ ಕೆಲಸವಾಗುತ್ತಿಲ್ಲ, ಅಲ್ಲದೆ ಕೋವಿಡ್ ಹೆಚ್ಚಾಗುತ್ತಿರುವುದರಿಂದ ಮತ್ತೋಮ್ಮೆ ಮಾರುಕಟ್ಟೆ ಟೆಂಡರ್ ಮಾಡದೇ ಇದ್ದರೆ ರೈತರಿಗೆ ಉಪಯೋಗ, ಇತರ ರೀತಿಯ ಅದಾಯ ಬರುವಂತೆ ಮಾಡಿ, ಅಲ್ಲದೆ ಪಟ್ಟಣದಲ್ಲಿ ಕಸದ ಸಮಸ್ಯೆ ಮಿತಿಮೀರಿದೆ, ಚರಂಡಿ ತೆಗೆಯುವವರೆ ಇಲ್ಲವಾಗಿದೆ ಎಂದರು ಪ್ರಶ್ನಿಸಿದರು, ಇದಕ್ಕೆ ಮುಖ್ಯಾಧಿಕಾರಿ ಮುಂದಿನ ಹಂತದಲ್ಲಿ ಕಾರ್ಯಮಾಡಲಾಗುವುದು ಎಂದು ಭರವಸೆ ನೀಡಿದರು.
ಸದಸ್ಯರಾದ ಬ್ರಹ್ಮಯ್ಯ, ಅಶೋಕ, ಇತರರು ಪ್ರಶ್ನಿಸಿ ಅಧಿಕಾರಿಗಳು ಎಣ್ಣೆ ಹಚ್ಚಿಕೊಂಡು ಕುಳಿತ್ತಿದ್ದಾರೆ, ದಯಮಾಡಿ ಅಧ್ಯಕ್ಷರೇ ಉತ್ತರಿಸಬೇಕು ಕಾರಣ ಕಸದ ಮೀತಿ ಮೀರದ ಬಗ್ಗೆ , ಶೌಚ್ಚಾಲಯ ಇಲ್ಲವಾಗಿರುವ ಬಗ್ಗೆ, ಪುಟ್ ಪಾತ್ ನಿರ್ವಹಣೆ ಬಗ್ಗೆ ಎಂದು ಖಾರವಾಗಿಯೇ ಪ್ರಶ್ನಿಸಿದರು.
ಸದಸ್ಯರಾದ ಹರೀಶ್, ಹಾಗೂ ಎಲ್.ಹೆಚ್. ಶಿವಕುಮಾರ್ ಅವರು ಪಟ್ಟಣದಲ್ಲಿ ಪಾರ್ಕ ಇವೆ ನಿರ್ವಹಣೆ ಇಲ್ಲವಾಗಿವೆ, ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು ಎಂದು ವೆಚ್ಚಮಾಡಿದ್ದೀರಿ ಫಲಾನುಭವಿಗಳ ಪಟ್ಟಿ ಕೊಡಬೇಕೆಂದು ಹರೀಶ್ ಒತ್ತಾಯಿಸಿದರು. ಇದಕ್ಕೆ ರಾಮಪ್ಪ ಧ್ವನಿಗೂಡಿಸಿದರು.
ಈ ಸಂದರ್ಭದಲ್ಲಿ ನಂದಿಹಳ್ಳಿ ಕ್ಷೇತ್ರದ ಸದಸ್ಯರಾದ ಹನುಮೇಶ್ ಎದ್ದು ನಿಂತು ಸ್ವಾಮಿ ಮೊದಲು ಮೂಲಭೂತ ಸೌಲಭ್ಯವಾದ ನೀರು, ಬೀದಿ ದೀಪ ಕೊಡಿ ಎಂದರು, ಹಟ್ಟಿ ರತ್ನಮ್ಮ, ದುರ್ಗಮ್ಮ, ಪಾರ್ವತಿ, ಲಕ್ಷ್ಮೀದೇವಿ, ಲಕ್ಷ್ಮೀ, ಯರ್ರಿಯಮ್ಮ, ತಿಪ್ಪಮ್ಮ, ದೀಪಾ.ಡಿ. ಆಶಾನರಸಿಂಹ, ಸಿರಾಜ್ ಹುಸೇನ್, ಸಂತೋಷ್‍ಕುಮಾರ್, ಕೆ.ವಿ.ಸುರೇಶ್, ಎಂ. ವತ್ಸಲಾ, ಲತಾ, ಇವರು ತಮ್ಮವಾರ್ಡ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಇದಕ್ಕೆ ಅನುದಾನ ನೀಡಲು ಮನವಿ ಮಾಡಿದರು.
ಸಭೆಯ್ಲಲಿ ಅಧ್ಯಕ್ಷೆ ಅನಿತಾ ವಸಂತಕುಮಾರ್, ಉಪಾಧ್ಯಕ್ಷ ಈರೇಶ್ ಸಿಂಧೆ ಕೆಲ ಪ್ರಶ್ನೆಗಳಿ ಉತ್ತರಿಸಿದರು, ಅಧಿಕಾರಿಗಳಾದ ಮಲ್ಲೇಶಪ್ಪ, ಗೀತಾ, ಅನ್ನಪೂರ್ಣ, ಖಾಜಾ ಹುಸೇನ್, ಅರುಣ್ ಪಾಟಿಲ್ ಶಿವರಂಜಿನಿ, ಜಗದೀಶ್ ಇತರರು ಉಪಸ್ಥಿತರಿದ್ದರು. ತಳವಾರ್ ವೆಂಕಟೆಶ್ ಇದ್ದರು.