ಸಂಡೂರು ತಾಲೂಕಿನಾದ್ಯಂತ ಬಿರುಸಿನ ಕೋವ್ಯಾಕ್ಸಿನ ಲಸಿಕೆ ಅಭಿಯಾನ

ಸಂಡೂರು :ಏ:2: ತಾಲೂಕಿನಾದ್ಯಂತ ಇಂದು ಬಿರುಸಿನ ಕೋವ್ಯಾಕ್ಸಿನ್ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು, ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ವೀರೇಂದ್ರ ಕುಮಾರ್ ಅವರು ಮಾತನಾಡಿ ತಾಲೂಕಿನಾದ್ಯಂತ ಒಟ್ಟು 1773 ಕೋವ್ಯಾಕ್ಸಿನ್ ಲಸಿಕೆಯನ್ನು ಸಾರ್ವಜನಿಕರಿಗೆ ಹಾಕಲಾಯಿತು.
ಪ್ರಮುಖವಾಗಿ ಈ ಬಗ್ಗೆ ಜನರಿಗೆ ಅರಿವನ್ನು ಮೂಡಿಸುವುದರ ಜೊತೆಗೆ ಉತ್ತಮ ರೀತಿಯ ಸ್ಪಂದನೆ ಗ್ರಾಮೀಣ ಭಾಗದಿಂದ ಕಂಡು ಬಂದಿದೆ, ತಾಲೂಕಿನ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 302, ಚೋರುನೂರು ಕೇಂದ್ರದಲ್ಲಿ 488, ತಾರಾನಗರ ಕೇಂದ್ರದಲ್ಲಿ 509, ವಿಠ್ಠಲಾಪುರ ಕೇಂದ್ರದಲ್ಲಿ 103, ತೋರಣಗಲ್ಲಿನಲ್ಲಿ 40, ಸಂಡೂರು ಕೇಂದ್ರದಲ್ಲಿ 90, ಮೆಟ್ರಿಕಿ ಕೇಂದ್ರದಲ್ಲಿ 82, ಜಿಂದಾಲ್ ಕೇಂದ್ರದಲ್ಲಿ 60 ಎನ್.ಎಂ.ಡಿ.ಸಿ.ಯಲ್ಲಿ 60ಕ್ಕೂ ಹೆಚ್ಚು 45 ವರ್ಷ ಮೇಲ್ಪಟ್ಟ ಜನರು ಬಂದು ವ್ಯಾಕ್ಸಿನ್ ಹಾಕಿಸಿಕೊಂಡರು.
ಪಟ್ಟಣದಲ್ಲಿ ವಿರಕ್ತಮಠದ ಪ್ರಭುಮಹಾಸ್ವಾಮಿಗಳು ಹಾಗೂ ಯಶವಂತನಗರದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ಸ್ವಾಮಿಗಳು ಸಂಡೂರಿನ ಸರ್ಕಾರಿ ಅಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಂಡರು, ಅವರು ಪ್ರತಿಕ್ರಿಯಿಸಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಈ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಕರೋನಾ ಮಹಾಮಾರಿಯನ್ನು ಓಡಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು, ಅಲ್ಲದೆ ಕಡ್ಡಾಯವಾಗಿ ಮಾಸ್ಕ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಸಾರ್ವಜನಿಕರು ರೋಗ ಮುಕ್ತ ಸಮಾಜ ನಿರ್ಮಾನ ಮಾಡೋಣ ಎಂದರು.
ವೈದ್ಯರಾದ ಡಾ. ರಾಮಶೆಟ್ಟಿ, ಡಾ. ಕಿರಣ್, ಸಿಬ್ಬಂದಿಗಳಾದ ಕೊಟ್ರೇಶ್, ಇತರರು ಉಪಸ್ಥಿತರಿದ್ದರು.