ಸಂಡೂರು ತಾಲೂಕಿನಾದ್ಯಂತ ಅತ್ಯುತ್ತಮ ಮಳೆ


ಸಂಜೆವಾಣಿ ವಾರ್ತೆ
ಸಂಡೂರು :ಆ:4 ತಾಲೂಕಿನಾದ್ಯಂತ ಕೆಲ ಗ್ರಾಮಗಳಲ್ಲಿ ಮನೆ ಕುಸಿತ ಅಪಾರ ಪ್ರಮಾಣದ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ತಾಲೂಕಿನ ನಾರಾಯಣಪುರ. ಭುಜಂಗನಗರ.ಹೊಸದರೋಜಿ.ಮತ್ತಿತರ ಕಡೆ ರೈತರ ಜಮೀನಿಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಮೆಕ್ಕೆಜೋಳ ಬೆಳೆ ಹಾನಿಯಾಗಿದ್ದು ಸೈನಿಕ ಹುಳು ಬಾಧೆಯಿಂದ ತತ್ತರಿಸಿದ ರೈತ ಸಾಲಸೋಲ ಮಾಡಿ ಕ್ರಿಮಿನಾಶಕ ಸಿಂಪಡಿಸಿ ವಾರ ಕಳೆಯುವುದರೊಳಗೆ ಆರ್ಭಟಿಸಿದ ವರುಣನ ಆರ್ಭಟಕ್ಕೆ ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಕೃಷಿ ಅಧಿಕಾರಿ ಮಂಜುನಾಥರೆಡ್ಡಿ ಹಾನಿಗೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಂಡೂರು ಹೋಬಳಿಯಲ್ಲಿ 61.4 ಮಿಲಿಮೀಟರ್ ಚೋರನೂರು ಹೋಬಳಿ 32.6 ಮಿಲಿಮೀಟರ್ ವಿಠಲಾಪುರ 42.6 ಮಿಲಿಮೀಟರ್ ಕುರೇಕುಪ್ಪ 90 ಮಿಲಿ ಮೀಟರ್ ಮಳೆಬಿದ್ದ ವರದಿಯಾಗಿದ್ದು ತಾಲೂಕಿನ ನಾರಿಹಳ್ಳ ಜಲಾಶಯ ಭರ್ತಿಯಾಗಿ ಅಪಾರ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ ನದಿ ಪಾತ್ರದ ಜನರು ನದಿಗೆ ಇಳಿಯದಂತೆ ಎಚ್ಚರ ವಹಿಸಬೇಕೆಂದು ತಾಲೂಕಾಡಳಿತ ಸೂಚನೆ ನೀಡಿದೆ.
ಬೊಮ್ಮಘಟ್ಟ ಗ್ರಾಮದ ಸ್ಮಯೂರ್ ಉದ್ಯೂಗಿ ಕೃಷ್ಣಕುಮಾರ ತಂದೆ ಮಲಿಯಪ್ಪ (51 ) ಹರಿಯುವ ನೀರಿನಲ್ಲಿ ರಸ್ತೇ ದಾಡುವಾಗ ಬೈಕ ಸಮೇತ ಕೂಚ್ಚಿಕೂಂಡು ಹೂಗಿ ಅಂಕಮನಾಳ ಅರಣ್ಯದಲ್ಲಿ ಸಿಕ್ಕಿಕೂಂಡಿದ್ದ ರೈಲ್ವೆ ಸಿಬ್ಬಂದಿ ಬೆಳಗ್ಗೆ  ರೈಲ್ವೆ ಹಳಿ ಪಕ್ಕ ಬ್ರಿಡ್ಜಗೆ ಬೈಕ್ ಸಿಕ್ಕಿಹಾಕಿಕೂಂಡಿದ್ದನ್ನ ಗಮನಿಸಿದ್ದು ನಂತರ ಗ್ರಾಮಸ್ಥರಿಗೆ ತಿಳಿಸಿ ಹರಿಯುವ ನೀರಿನ ಪಕ್ಕಾ ಪೂದೆಗೆ ಮೃತದೇಹ ಸಿಕ್ಕಿಕೂಂಡಿದ್ದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಗುರುಬಸವರಾಜ್ ಮತ್ತು ತಂಡ ಪರಿಶೀಲಿಸಿತು. ಚೋರನೂರು ಹೋಬಳಿಯ ಡಿ.ಮಲ್ಲಾಪುರ.ಕಾಟಿನ ಕಂಬ, ಬಸಾಪುರ ಜಿ.ಎಲ್ ಹಳ್ಳಿ, ನಾಗೇನಹಳ್ಳಿ.ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದ್ದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Attachments area