
ಸಂಜೆವಾಣಿ ವಾರ್ತೆ
ಸಂಡೂರು: ಏ:20: ಅತಿ ಹೆಚ್ಚು ಆಡಳಿತ ನಡೆಸಿದ ಕಾಂಗ್ರೇಸ್ ಪಕ್ಷದಿಂದ ಪ್ರಜೆಗಳು ಭ್ರಮನಿರಸನಹೊಂದಿದ್ದಾರೆ, ಕುಮಾರಣ್ಣನವರ ಕಾರ್ಯ ಪ್ರತಿ ಮನೆಯ ಸದಸ್ಯರು ಇಂದಿಗೂ ಸ್ಮರಿಸುತ್ತಿದ್ದಾರೆ, ಅವರ ಪಂಚರತ್ನ ಯೋಜನೆಯನ್ನು ಅರಿತಿದ್ದಾರೆ, ಅಲ್ಲದೆ ರಾಜ್ಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ ಪರಿಣಾಮ ಸಂಡೂರು ಕ್ಷೇತ್ರದ ಜನತೆ ಈ ಬಾರಿ ಜೆ.ಡಿ.ಎಸ್. ಪಕ್ಷದ ಕೈ ಹಿಡಿಯಲಿದ್ದಾರೆ ಎಂದು ಜೆ.ಡಿ.ಎಸ್. ಅಭ್ಯರ್ಥಿ ಎನ್. ಸೋಮಪ್ಪ ತಿಳಿಸಿದರು.
ಅವರು ಇಂದು ಪಟ್ಟಣದಲ್ಲಿ ಬೃಹತ್ ಮೆರವಣಿಗೆಯ ಮೂಲಕ ಸಾಗಿ ಪತ್ನಿ ಸಮೇತರಾಗಿ ಅಗಮಿಸಿ ತಹಶೀಲ್ದಾರ್ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಅಗಮಿಸಿ ತಮ್ಮ ಪಕ್ಷದ ಶಕ್ತಿ ಪ್ರದರ್ಶನ ಮತ್ತು ಮೆರವಣಿಗೆ ಅದ್ದೂರಿಯಾಗಿ ನಡೆಸಿ ನಂತರ ಚುನಾವಣಾಧಿಕಾರಿ ಶರಣಬಸಪ್ಪ ಅವರಿಗೆ ನಾಮಪತ್ರ ಸಲ್ಲಿಸಿದರು.
One attachment • Scanned by Gmail