ಸಂಡೂರು ಘೋರ್ಪಡೆ, ಸತೀಶ್ ನೇತೃತ್ವದಲ್ಲಿಬಿಜೆಪಿ ಸೇರಿದ ಕಾಂಗ್ರೆಸ್  ಕೆಆರ್‌ಪಿಪಿಯ ಯುವ ಸಮೂಹ


(ಸಂಜೆವಾಣಿ ವಾರ್ತೆ)
ಸಂಡೂರು, ಮೇ.:  ಪಟ್ಟಣದ 22 ಮತ್ತು 23ನೇ ವಾರ್ಡ್ ನ  ಲಕ್ಷ್ಮೀಪುರದಲ್ಲಿ ಸಕ್ರಿಯವಾಗಿದ್ದ ನೂರಾರು ಜನ  ಕಾಂಗ್ರೆಸ್ ಮತ್ತು ಕೆಆರ್‌ಪಿಪಿ ಪಕ್ಷದ ಯುವ  ಮುಖಂಡರು ಬಿಜೆಪಿ ಮುಖಂಡರಾದ ಕಾರ್ತಿಕೇಯ ಘೋರ್ಪಡೆ ಮತ್ತು  ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಹಾಗೂ ಬಿಜೆಪಿ ಅಭ್ಯರ್ಥಿ ಶಿಲ್ಪ ರಾಘವೇಂದ್ರ ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಆಡಳಿತವನ್ನು ಒಪ್ಪಿಕೊಂಡು, ಬಿಜೆಪಿಯ ತತ್ವ – ಸಿದ್ಧಾಂತಗಳು ರಾಷ್ಟ್ರ ಪ್ರೇಮದಿಂದ ಕೂಡಿವೆ ಎಂದು ಪಕ್ಷ ಸೇರಲು ಆಸಕ್ತರಾಗಿದ್ದೇವೆ ಎಂದು ಪಕ್ಷ ಸೇರಿದ ಯುವ ಸಮೂಹ  ಹೇಳಿತು. 
ಪಕ್ಷ ಸೇರ್ಪಡೆಗೆ ಆಸಕ್ತಿ ತೋರಿದ ಯುವಶಕ್ತಿಯನ್ನು ಉದ್ದೇಶಿಸಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಮಾತನಾಡಿ    ‌‌‌ದೇಶದ ಅಭಿವೃದ್ಧಿಗೆ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ನಾಯಕತ್ವ ಅತ್ಯಗತ್ಯ ಎಂದು ಮನಗೊಂಡಿರುವ ಸಂಡೂರು ಪಟ್ಟಣದ ಯುವಶಕ್ತಿ ಪಕ್ಷವನ್ನು ಸ್ವಯಂಪ್ರೇರಣೆಯಿಂದ ಬಿಜೆಪಿ ಸೇರುತ್ತಿರುವುದು ಸ್ವಾಗತಾರ್ಹ ಎಂದರು.
ಬಿಜೆಪಿಗೆ ಸೇರಿದ ಅಜ್ಜಪ್ಪ ಮದ್ದನಿ, ವೀರಭದ್ರಪ್ಪ, ಬಸವರಾಜ್, ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಸುಭದ್ರವಾಗಿದೆ. ದೇಶದ ಭದ್ರತೆ, ಸುರಕ್ಷತೆ ಮತ್ತು ಏಕತೆಗಾಗಿ ಬಿಜೆಪಿಯನ್ನು ಬಲಪಡಿಸಲು ನಾವು ಪಕ್ಷವನ್ನು ಸೇರುತ್ತಿದ್ದೇವೆಂದರು. ವಾಡ ಮಾಜಿ ಅಧ್ಯಕ್ಷ ಶರಣಪ್ಪ ಸೇರಿ ಬಿಜೆಪಿಯ ಮುಖಂಡರು ಈ ಸಂದರ್ಭದಲ್ಲಿದ್ದರು.

One attachment • Scanned by Gmail