ಸಂಡೂರು ಕ್ಷೇತ್ರ:  ದಿವಾಕರ್ ಬಿಟ್ಟರೆ  ಬಿಜೆಪಿಗೆ ಪೆಟ್ಟು


ಸಂಜೆವಾಣಿ ವಾರ್ತೆ
ಸಂಡೂರು, ಮಾ.23: ಜಿಲ್ಲೆಯ ಕಾಂಗ್ರೆಸ್ ನ ಭದ್ರ ಕೋಟೆ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿರುವ ಕೆ.ಎಸ್.ದಿವಾಕರ್ ಅವರನ್ನು ಬಿಟ್ಟು. ಬೇರೆ ಅಭ್ಯರ್ಥಿ ಹಾಕಿದರೆ. ಅದು ಬಿಜೆಪಿಗೇ ಪೆಟ್ಟಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ  ಕ್ಷೇತ್ರದ ಬಿಜೆಪಿ ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು.
ಬಳ್ಳಾರಿ ಪಾಲಿಕೆಯಲ್ಲಿ ಸದಸ್ಯರಾಗಿ ಜನ ಸೇವೆ ಮಾಡಿದ್ದ ದಿವಾಕರ್ 2018 ರ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿ. ಅಲ್ಲಿನ ಜನರೊಂದಿಗೆ ಬೆರೆತು ಅನೇಕ ಕಾರ್ಯಕ್ರಮಳ ಮೂಲಕ ಗಮನ ಸೆಳೆದಿದ್ದರು.
ಆದರೆ ಅಂತಿಮವಾಗಿ ಬಿ.ಶ್ರೀರಾಮುಲು ಅವರು ಅಲ್ಲಿ ಅಭ್ಯರ್ಥಿಯಾಗಿ ಬಂದಿದ್ದರಿಂದ ಅನಿವಾರ್ಯವಾಗಿ ಸ್ಪರ್ಧೆಯಿಂದ ಹಿಂದಿ ಸರಿಯಬೇಕಾಯಿತು.
ಆಗ ಶ್ರೀರಾಮುಲು‌ ಅವರು ಮುಂಬರುವ ಚುನಾವಣೆಯಲ್ಲಿ  ನೀವು ಬೇರೊಂದು ಕ್ಷೇತ್ರದಿಂದ  ಕಣಕ್ಕಿಳಿಯಲು ವ್ಯವಸ್ಥೆ ಮಾಡಲುದೆಂದು ಸಂಡೂರಿನಿಂದ ಪ್ರಯತ್ನಿಸುವಂತೆ ಸೂಚನೆ ನೀಡಿದ್ದರಂತೆ. ಅವರ ಸೂಚನೆಯಂತೆ ಸಂಡೂರು ಕ್ಷೇತ್ರದಲ್ಲಿ ಸಂಚರಿಸಿ ಟಿಕೆಟ್ ಗೆ ಪ್ರಯತ್ನಿಸಿದರೂ ಕೊನೆಗೆ ರಾಘವೇಂದ್ರಗೆ ಟಿಕೆಟ್ ಸಿಕ್ಕಿತು.
ಸಂಡೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಈ.ತುಕರಾಂ ಅವರು ಶಾದಕರಾಗಿ, ಸಚಿವರಾಗಿ ಕಳೆದ 15 ವರ್ಷಗಳಿಂದ ಜನ ಸೇವೆ ಮಾಡುತ್ತಿದ್ದಾರೆ.
ಮೊದಲ ಚುನಾವಣೆಯಲ್ಲಿ 2008 ರಲ್ಲಿ 20 ಸಾವಿರಕ್ಕೂ ಮತಗಳ ಅಂತರದಿಂದ ಗೆದ್ದಿದ್ದ ಅವರು, 2013 ರ ಚುನಾವಣೆಯಲ್ಲಿ  34 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಕಾರಣ ಆಗ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಇರಲಿಲ್ಲ. ಆದರೆ 2018 ರಲ್ಲಿ ಕೊನೆ ಕ್ಷಣದಲ್ಲಿ ರಾಘವೇಂದ್ರ (ಮಂಜು) ಪ್ರಬಲ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಸಂಡೂರಿನ ರಾಜ ಮನೆತನದ ಕಾರ್ತಿಕ್ ಘೋರ್ಪಡೆ ಅವರು ಬೆಂಬಲಿಸಿದ್ದು ಸಹಕಾರಿಯಾಗಿ ತುಕರಾಂ ಅವರ ಗೆಲುವಿನ ಅಂತರವನ್ನು 14 ಸಾವಿರಕ್ಕೆ ಇಳಿಯುವಂತೆ ಮಾಡಿದರು.
ರಾಘವೇಂದ್ರ ಅವರ ಅಕಾಲಿಕ ಮರಣದಿಂದ ಬಿಜೆಪಿ ಅಭ್ಯರ್ಥಿಯಾಗಲು ರಾಮುಲು ಅವರ ಸೂಚನೆಯಂತೆ ದಿವಾಕರ್ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಇಳಿದರು. ಕ್ಷೇತ್ರದ ಪ್ರತಿ ಹಳ್ಳಿಗೂ ತೆರಳಿ ಯುವ ಸಮೂಹದ ಪಡೆಯನ್ನು ಕಟ್ಟಿದ್ದಾರೆ.
ಸಾಮೂಹಿಕ ವಿವಾಹ, ಕ್ರಿಕೆಟ್ ಪಂದಾವಳಿ, ಸಮೂಹಿಕ ಓಟ, ರಕ್ತದಾನ ಶಿಬಿರ, ಮಹಿಳೆಯರಿಗೆ ಉಡಿತುಂಬುವುದು,  ಹಳ್ಳಿಗಳ ಜಾತ್ರೆಗಳ ಆಚರಣೆ ಸೇರಿದಂತೆ  ಅನೇಕ ಕಾರ್ಯಕ್ರಮಗಳ ಮೂಲಕ ಜನ ಸಮೂಹದೊಂದಿಗೆ ಬೆರೆತು ಕ್ಷೇತ್ರದ ನಾಯಕರಾಗಿ ಹೊರಹೊಮ್ಮಿದ್ದಾರೆ.
ಅಷ್ಟೇ ಅಲ್ಲದೆ ಪಕ್ಷದ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.
ದಿವಾಕರ್ ಅವರಿಗೇ ಈ  ಬಾರಿಯ  ಟಿಕೆಟ್ ನೀಡುತ್ತಾರೆಂಬ ಮಾತುಗಳು ಇದ್ದವು. ಆದೇ ನಾನು ಸಂಡೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿರುವೆ ಎಂದು ಶ್ರೀರಾಮುಲು ಹೇಳಿದಾಗ ದಿವಾಕರ್ ಅವರು ಒಂದಿಷ್ಟು ವಿಚಲಿತರಾಗಿದ್ದರು. ಆದರೆ ಶ್ರೀರಾಮುಲು ಅವರು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ತಾವು ಸ್ಪರ್ಧೆ ಮಾಡುವುದಾಗಿ ಹೇಳಿದ್ದರಿಂದ ದಿವಾಕರ್ ಅವರ ಹಾದಿ ಸುಗಮವಾಗಿತ್ತು.
ಅದರೆ ಈ ಮಧ್ಯೆ ಸಂಸದ ವೈ.ದೇವೇಂದ್ರಪ್ಪ ಅವರು ಹರಪನಹಳ್ಳಿಯ ತಮ್ಮ ಮಗ ಅಣ್ಣಪ್ಪ ಅವರನ್ನು ಸಂಡೂರಿನಿಂದ ಕಣಕ್ಕಿಳಿಸಲು ಪ್ರಯತ್ನ ನಡೆಸಿದ್ದಾರಂತೆ. ನಿನ್ನೆ ದಿನ ಸಂಡೂರಿಗೆ  ಅಣ್ಣಪ್ಪ ಅವರನ್ನು ಈಗ ಕರೆತಂದು ಕ್ಷೇತ್ರದಲ್ಲಿ ಪರಿಚಯಿಸುವ ಪ್ರಯತ್ನ ನಡೆಸಿದ್ದಾರಂತೆ.
ಈಗ ಕೊನೆ ಕ್ಷಣದಲ್ಲಿ  ಬಂದರೆ ಮತದಾರ ಹೇಗೆ ಸ್ವಾಗತಿಸುತ್ತಾನೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಈ ಮಧ್ಯೆ ಸಚಿವ ಶ್ರೀರಾಮುಲು ಅವರು ತಮ್ಮ ಸಹೋದರಿ ಶಾಂತಾ ಅವರಿಗೆ ಸಂಡೂರು ಟಿಕೆಟ್ ಕೊಡಿಸುವ ಪ್ರಯತ್ನ ನಡೆಸಿದ್ದಾರಂತೆ. ಆದರೆ ಇದಕ್ಕೆ ಪಕ್ಷದ ಉನ್ನತ ನಾಯಕರೇ ಮತ್ತೆ ಮನೆ ಮಂದಿಗೆಲ್ಲ ಟಿಕೆಟ್ ಕೇಳಿದರೆ ಹೇಗೆ. ಈ ವರಗೆ ಅಲ್ಲಿ ಕೆಲಸ ಮಾಡಿದ ದಿವಾಕರ್ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆಂದು ತಿಳಿದು ಬಂದಿದೆ.
ಹೀಗೆ ಈವರಗೆ ಕ್ಷೇತ್ರದಲ್ಲಿ  ಓಡಾಡಿ  ಪಕ್ಷ  ಸಂಘಟನೆ ಮಾಡಿದ ದಿವಾಕರ್  ಯಾವುದೇ ಊರಿಗೆ ಹೋದರು ನೂರಾರು ಜನರು ತಕ್ಷಣ ಸೇರಿತ್ತಿದ್ದಾರೆ. ಅವರನ್ನು ಪರಿಗಣಿಸದೇ ಕೊನೆ ಗಳಿಗೆಯಲ್ಲಿ ಬೇರೆಯವರನ್ನು ಅಭ್ಯರ್ಥಿ ಮಾಡಿದರೆ ಜನರಿಗೆ ಅಭ್ಯರ್ಥಿಯನ್ನು ಪರಿಚಯಿಸುವುದು ಕಷ್ಟವಾಗಲಿದೆ. ಒಂದೊಮ್ಮೆ ಟಿಕೆಟ್ ನೀಡದಿದ್ದರೆ.  ದಿವಾಕರ್ ಪಕ್ಷೇತರರಾಗಿ  ಕಣಕ್ಕಿಳಿದರೆ ಕಾಂಗ್ರೆಸ್ ಗೆಲುವಿಗೇ ಸಹಕಾರಿತಾಗುತ್ತೆ ಎಂಬ ಮಾತುಗಳು ಕೇಳಿ ಬಂದಿವೆ.
ದಿವಾಕರ್ ಅವರಿಗೆ ಟಿಕೆಟ್ ತಪ್ಪಿಸಿದರೆ ಕಾಂಗ್ರೆಸ್ ಗೆಲುವಿಗೆ ಬಿಜೆಪಿಯ ಸ್ಥಳೀಯ ಮುಖಂಡರೆ ಒಳ ಒಪ್ಪಂದ ಮಾಡಿಕೊಂಡಂತಾಗುತ್ತದೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಹಾಗಾಗಿ ದಿವಾಕರ್ ಅವರಿಗೆ ಟಿಕೆಟ್ ನೀಡುವುದೇ ಉತ್ತಮ ಎಂಬ ಅನಿಸಿಕೆ ಕ್ಷೇತ್ರದ ಜನರ ಮತ್ತು ಮುಖಂಡರ ಅನಿಸಿಕೆಯಾಗಿದೆ.

 ನಾನು ಕ್ಷೇತ್ರದಲ್ಲಿ ಈವರಗೆ ನಡೆಸಿದ ಪಕ್ಷ ಸಂಘಟನೆಯನ್ನು ಪರಿಗಣಿಸಿ ಪಕ್ಷ ನನ್ನಗೆ ಟಿಜೆಟ್ ನೀಡುತ್ತೆ ಎಂಬ ಭರವಶೆ ಇದೆ.
ಕೆ.ಎಸ್.ದಿವಾಕರ್ ಸಂಡೂರು ಬಿಜೆಪಿ ಟಿಕೆಟ್ ಆಜಾಂಕ್ಷಿ.

ಸಂಡೂರು ಕ್ಷೇತ್ರದಲ್ಲಿ ಶ್ರೀರಾಮುಲು ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದೆ ಎಂದಾಗಲೇ ಸ್ಥಳೀಯರೆಲ್ಲ ಒಂದಾಗಿ ವಿರೋದ ವ್ಯಕ್ತಪಡಿಸಿದ್ದರು. ಹಾಗಿರುವಾಗ ಶಾಂತಾ ಅವರನ್ನು ತಂದರೂ ಕ್ಷೇತ್ರದ ಜನ ವಿರೋಧ ಮಾಡುವ ಸಾಧ್ಯತೆ ಇದೆ. ಕ್ಷೇತ್ರಕ್ಕೆ ಪರಿಚಯವಿಲ್ಲದ ಅಪ್ಪಣ್ಣನ್ನು ಒಪ್ಪಲಾರರು.  ಈಗಗಾಲೇ ದಿವಾಕರ ಅವರು ಹಲವು ವರ್ಷಗಳಿಂದ ಪಕ್ಷದ ಸಂಘಟನೆ ನಡೆಸಿದ್ದಾರೆ. ಸ್ಥಳೀಯ ಜನರೊಂದಿಗೆ ಬೆರೆತಿದ್ದಾರೆ. ಸ್ಥಳೀಯ ಒಪ್ಪಿಕೊಂಡಿರುವುದರಿಂದ ದಿವಾಕರ್ ಅವರಿಗೆ ಟಿಕೆಟ್ ನೀಡುವುದು ಸರಿ. ಇಲ್ಲದಿದ್ದರೆ ಪಕ್ಷಕ್ಕೆ ಕಷ್ಟ ಆಗುತ್ತದೆ.‌
ಗಾಳಿ ಶಂಕ್ರಪ್ಪ ಬಿಜೆಪಿ ಮುಖಂಡರು ಸಂಡೂರು ಕ್ಷೇತ್ರ.