ಸಂಡೂರು ಕ್ಷೇತ್ರದ 27 ಸಾವಿರ ಮತದಾರು ಪಟ್ಟಿಯಿಂದ ಹೊರಕ್ಕೆ


ಸಂಜೆವಾಣಿ ವಾರ್ತೆ
ಸಂಡೂರು:ಮಾ: 15: ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಲಕ್ಷದ ಇಪ್ಪತ್ತೊಂದು ಸಾವಿರದ ಎರಡುನೂರಾ ಎಂಬತ್ತುಮೂರು ಮತದಾರರಿದ್ದು ಅದರಲ್ಲಿ ಒಂದು ಲಕ್ಷದ ಹತ್ತು ಸಾವಿರದ ಎಂಟನೂರಾ ಐವತ್ತೊಂಭತ್ತು ಪುರುಷ, ಒಂದು ಲಕ್ಷದ ಹತ್ತು ಸಾವಿರದ ಎರಡುನೂರಾ ತ್ತೊಂಭತ್ತೆಂಟು ಇಪ್ಪತ್ತಾರು ಮಹಿಳೆ, 23 ತೃತೀಯ ಲಿಂಗಿ ಮತದಾರರಿದ್ದಾರೆ. ಸಂಡೂರು ತಾಲೂನಲ್ಲಿ ಶೇ: 100ಕ್ಕೆ 96 ರಷ್ಟು ಮತದಾರರನ್ನು ಆಧಾರ್ ಲಿಂಕ್ ಮಾಡಲಾಗಿದೆ. ಒಟ್ಟು ಮತದಾರರಲ್ಲಿ 27 ಸಾವಿರ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. 14000 ಡಬಲ್ ಅದವರು, 13 ಸಾವಿರ ಬೇರೆ ಕಡೆ ವರ್ಗಾವಣೆ ಗೊಂಡು ಹೋದ ಮತದಾರರನ್ನು ಪತ್ತೆ ಹಚ್ಚಿ ಮತದಾರರ ಪಟ್ಟಿಯಿಂದಕೈಬಿಡಲಾಗಿದೆ , ಮತದಾರರ ಪಟ್ಟಿ ಪರಿಷ್ಕರಣೆಯನ್ನು ಎಲ್ಲಾ ಪಕ್ಷದವರಿಗೆ ನೀಡಿದ್ದೇವೆ, ಅಧಿಕಾರಿಗಳಿಗೆ ಈಗಾಗಲೇ ಕಪ್ಪಲಕುಂಟೆ ರಸ್ತೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇನಲ್ಲಿ ತರಬೇತಿ ನೀಡಲಾಗುವುದು ಅಲ್ಲದೆ ಸ್ಟ್ರಾಂಗ್ ರೂಂ ನಲ್ಲಿ ಅಲ್ಲಿಯೇ ಮಾಡಲಾಗುವುದು, ಬಿ.ಎಲ್.ಓ ಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಸಂಡೂರಿನ ತಹಶೀಲ್ದಾರರು ಚುನಾವಣಾಧಿಕಾರಿಗಳು ಆದ ಕೆ.ಎಂ. ಗುರುಬಸವರಾಜ ತಿಳಿಸಿದರು.
ಅವರು ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ತಹಶೀಲ್ದಾರ್ ಕಛೇರಿಯಲ್ಲಿ ಮಾಧ್ಯಮದ ಮಿತ್ರರನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಬಾರಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ: 74 ರಷ್ಟು ಮತದಾನವಾಗಿತ್ತು ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ 6300 ಜನ ನೂತನ ಮತದಾರರನ್ನು ಸೇರ್ಪಡೆಯಾಗಿದ್ದಾರೆ. ಸಂಡೂರಿನಲ್ಲಿ ಇಲ್ಲಿಯವರೆಗೆ 249 ಬೂತ್‍ಗಳಿದ್ದು 1400 ಮತದಾರರಿಗಿಂತ ಹೆಚ್ಚಾದ ಕಾರಣ ಒಂದು ಬೂತನ್ನು ಹೆಚ್ಚಿಸಿ ಒಟ್ಟು 250 ಮತಗಟ್ಟೆಗಳನ್ನು ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ 67 ಚಪ್ಪರದಳ್ಳಿಯಲ್ಲಿ ಹೊಸ ಬೂತ್ ತೆರೆಯಲಾಗಿದೆ ಪ್ರತಿಯೊಂದು ಬೂತ್‍ಗೆ 6 ಸಿಬ್ಬಂದಿಗಳಂತೆ ಒಟ್ಟು 1500 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ, ಅಲದೆ ಸೆಕ್ಟರಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಯೊವೃದ್ಧರಿಗೆ ಮನೆಯಲ್ಲಿಯೇ ಪೋಸ್ಟಲ್ ಮತದಾನ ಮಾಡಲು ಅವಕಾಶ ನೀಡಲಾಗುವುದು59 ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಗುರುತಿಸಲಾಗಿದೆ. ನೂತನ ಮತದಾರರ ಸೆರ್ಪಡೆಗೆ 01.04.2023ರ ವರಗೆ ಅವಕಾಶ ನೀಡಲಾಗಿದೆ.
ಸರ್ಕಾರಿ ನೌಕರರಿಗೆ, ಸೇನೆಯಲ್ಲಿ ಸೇವೆ ಸಲ್ಲಿಸುವವರಿಗೆ 55 ಮತದಾರರಿಗೆ ಅನ್ ಲೈನ್ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. 2645 ಅಂಗವಿಕಲಮತದಾರರು, 2507 ಮತದಾರರು 80 ವರ್ಷ ದವರಿದ್ದಾರೆ 90 ರಿಂದ 99 ವರ್ಷದ 531 ಮತದಾರರಿದ್ದಾರೆ. 100 ವರ್ಷ ಮೇಲ್ಪಟ್ಟವರು 42 ಮತದಾರರಿದ್ದಾರೆ, ಎಲ್ಲಾ ಮತಗಟ್ಟೆಗಳಲ್ಲಿ ಶೌಚಾಲಯ, ಕುಡಿಯುವ ನೀರುನ ವ್ಯವಸ್ಥೆ ಮಾಡಲಾಗಿದೆ, ರ್ಯಾಂಪ್ ವ್ಯವಸ್ಥೆ, 104 ಕೇವಲ ಒಂದು ಮತಗಟ್ಟೆ, ಕೇಂದ್ರದಲ್ಲಿ 2 ಮತಗಟ್ಟೆ, 32 ಕೇಂದ್ರದಲ್ಲಿ , 10 ಮತಗಟ್ಟೆಯಲ್ಲಿ 3, 5 ಮತಗಟ್ಟೆಯಲ್ಲಿ 4ಲಿ 5 ಮತಗಟ್ಟೆಗಳಲ್ಲಿ 5 ರಲ್ಲಿ 6 ಮತಗಟ್ಟೆಗಳು, ಕುರೇಕುಪ್ಪದಲ್ಲಿ ಒಂದೇ ಕಡೆ 6 ಮತಗಟ್ಟೆಗಳಿವೆ 4 ಕಡೆ ಚೆಕ್ ಪೋಸ್ಟ್ ಸ್ಥಾಪಿಸಿದ್ದು ಅಬಕಾರಿ, ಪೋಲಿಸ್ ಕಂದಾಯ ಇಲಾಖೆ ಅಧಿಕಾರಿಗಳನ್ನು ನೇಮಕಮಾಡಲಾಗಿದೆ.
5 ಕಡೆ ಕಟ್ಟಡಗಳು ಶಿಥಿಲಗೊಂಡಿರುವುದರಿಂದ ಸ್ಥಳಾಂತರ ಮಾಡಲಾಗಿದೆ. ಕುಡುತಿನಿಯಲ್ಲಿ ಅರ್.ಎಸ್.ಎಸ್. ಕಟ್ಟಡದಿಂದ ಹರಗಿನಡೋಣಿ ಪ್ರೌಢಶಾಲೆ, ಜಿಗೇನಳ್ಳಿಯಲ್ಲಿ ಹಿರಿಯಪ್ರಥಮಿಕ ಶಾಲೆಯಿಂದ ಹೊಸ ಕಟ್ಟಡಕ್ಕೆ, ತೋರಣಗಲ್ಲಿನ ಬೈಪಾಸ್ ರಸ್ತೆಯಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ದಕ್ಷಿಣ ಮತ್ತು ಉತ್ತರಕ್ಕೆ ಸ್ಥಳಾಂತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೇಸ ಪಕ್ಷದ ತಾಲೂಕು ಅಧ್ಯಕ್ಷ ಚಿತ್ರಿಕಿ ಸತೀಶ್, ಜೆ.ಡಿ.ಎಸ್. ಪಕ್ಷದಿಂದ ಹೊನ್ನೂರಸಾಬ್, ಅಮ್ ಅದ್ಮಿ ಪಕ್ಷದಿಂದ ತಾಲೂಕು ಅಧ್ಯಕ್ಷ ಬಾಲಸುಬ್ರಮಣೈಂ, ಈ ಸಂದರ್ಭದಲ್ಲಿ ತುಮಟಿ ತಾಂಡದಲ್ಲಿ 700 ಮತದಾರರಿದ್ದಾರೆ, ರಾಜಾಪುರದಲ್ಲಿ 600 ಮತದಾರರಿದ್ದು ಪ್ರತ್ಯೇಕ ಮತಗಟ್ಟೆಗಳ ವ್ಯವಸ್ಥೆಯಾಗಬೇಕೆಂದು ಬಿಜೆಪಿ ಮಂಡಲ ಉಪಾಧ್ಯಕ್ಷ ಮಂಜುನಾಥ ತಹಶೀಲ್ದಾರರಿಗೆ ತಿಳಿಸಿದರು. ಸಭೆಯಲ್ಲಿ ಸಿ.ಪಿ.ಐ., ಸಿ.ಪಿ.ಐ.ಎಂ. ಪಕ್ಷಗಳ ಗೈರು ಹಾಜರಿ ಎದ್ದು ಕಾಣುತಲಿತ್ತು.