ಸಂಡೂರು ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ.


ಸಂಜೆವಾಣಿ ವಾರ್ತೆ
ಸಂಡೂರು: ಏ15: ಪ್ರಜಾಪ್ರಭುತ್ವದ ಭದ್ರ ಬುನಾದಿ ಮತದಾನ ಅಂತಹ ಮತದಾರರು ಪ್ರತಿಮನೆಯಲ್ಲಿಯೂ ಸ್ವಾಗತಿಸುವ ಮೂಲಕ ಮತ ಹಾಕುತ್ತೇವೆ, ಈ ಬಾರಿ ಬದಲಾವಣೆ ಬಯಸಿದ್ದೇವೆ ಎಂದು ಸ್ವಯಂ ಪ್ರೇರಣೆಯಿಂದ ಜೆ.ಡಿ.ಎಸ್. ಪಕ್ಷಕ್ಕೆ ಸೇರುತ್ತಿರುವುದು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಹಾಗೂ ಬಿಜೆಪಿಗೆ ನಡುಕ ಉಂಟುಮಾಡಿದೆ ಎಂದು ಜೆ.ಡಿ.ಎಸ್. ಅಭ್ಯರ್ಥಿ ಎನ್. ಸೋಮಪ್ಪ ತಿಳಿಸಿದರು.
ಅವರು ಇಂದು ಪಟ್ಟಣದ ಕಛೇರಿಯಲ್ಲಿ ಚುನಾವಣಾ ಪ್ರಚಾರವನ್ನು ಕಾಲ್ನಡಿಗೆಯಲ್ಲಿಯೇ ತಾಲೂಕಿನ ಎಲ್ಲಾ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಅಂತಿಮವಾಗಿ ನಾಮಪತ್ರ ವನ್ನು ಸಲ್ಲಿಸಲು ಸಜ್ಜಾಗಿದ್ದು ಈ ಸಂದರ್ಭದಲ್ಲಿ ಮಾತನಾಡಿ ಪಕ್ಷಕ್ಕೆ ಬಾಹ್ಯ ಬೆಂಬಲವಾಗಿ ಅಮ್ಮ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಬಾಲಸುಬ್ರಹ್ಮಣ್ಯ ಅವರು ಸ್ವಯಂ ಸೇವೆ ಮಾಡುವ ಅಭ್ಯರ್ಥಿ ಸೋಮಣ್ಣನವರು ಸಂಡೂರಿಗೆ ಬೇಕು ಎಂದು ಅಗಮಿಸಿ ಬೆಂಬಲಿಸಿದ್ದನ್ನು ಕಂಡಾಗ ಹೆಮ್ಮ ಉಂಟಾಗುತ್ತಿದೆ, ಅದೇ ರೀತಿಯ ಹಲವಾರು ರೈತ ಸಂಘಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಸಹ ಬೆಂಬಲ ಸೂಚಿಸಿದ್ದಾರೆ, ಇದರಿಂದ ನಾವೇ ಗೆದ್ದು ಬಿಟ್ಟಿದ್ದೇವೆ ಎಂದು ಬೀಗುತ್ತಿರುವ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಗೆ ಮತದಾರ ಪ್ರಭು ತಕ್ಕ ಉತ್ತರ ನೀಡಲಿದ್ದಾರೆ, 15 ವರ್ಷ ಅಡಳಿತ ನಡೆಸಿದರೂ ಸಹ ನಿಜವಾದ ಬಡವರಿಗೆ ಮನೆ ಇಲ್ಲದಂತಹ ಗಡಿ ಗ್ರಾಮವಾದ ಶೆಲ್ಲಿಪ್ಪನಳ್ಳಿಯ ಮಹಿಳೆ ನೋವಿನಿಂದ ಹೇಳಿದ್ದನ್ನು ಕಂಡಾಗ ಬಹಳಷ್ಟು ದು:ಖವಾಗುತ್ತದೆ, ಅದ್ದರಿಂದ ಪ್ರಜೆಗಳು ಬದಲಾವಣೆ ಬಯಸಿದ್ದಾರೆ, ಅದ್ದರಿಂದ ಇದೇ ತಿಂಗಳು 19 ರಂದು ನಾಮ ಪತ್ರವನ್ನು ಸಲ್ಲಿಸುತ್ತಿದ್ದು ನೂರಾರು ಚಕ್ಕಡಿಗಳ ಮೇಲೆ ಅಭಿಮಾನಿಗಳ ಸಮ್ಮುಖದೊಂದಿಗೆ ನಾಮಪತ್ರ ಸಲ್ಲಿಸುತ್ತೇವೆ, ಈ ಸಂದರ್ಭದಲ್ಲಿ ಸಂಡೂರಿನ ಅರಾಧ್ಯ ದೈವ ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ ಹಾಗೂ ಲಕ್ಷ್ಮೀಪುರ ಗ್ರಾಮದ ಉಡುಚಲಾ ಪರಮೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಲಾಗುವುದು, ಯಾವುದೇ ರೀತಿಯಲ್ಲಿ ಪ್ರಜೆಗಳು ಬೆಂಬಲವನ್ನು ವ್ಯಕ್ತಪಡಿಸಿದ್ದು, ಕುಮಾರಣ್ಣನವರ ಪಂಚರತ್ನ ಯೋಜನೆಗಳನ್ನು ಪ್ರತಿ ಮನೆಗೆ ತಿಳಿಸಿದ್ದೇನೆ ಪಾದಯಾತ್ರೆಯ ಮೂಲಕ ಅಲ್ಲದೆ ಮತ್ತೋಮ್ಮೆ ಪ್ರತಿ ಮನೆಗೆ ಭೇಟಿ ನೀಡುವ ಮೂಲಕ ಜೋಳಿಗೆ ಹಾಕಿಕೊಂಡು ಮತಭಿಕ್ಷೆಯನ್ನು ಬೇಡುತ್ತೇನೆ, ರೈತರ, ನಿರುದ್ಯೋಗಿ ಯುವಕರ, ಮಹಿಳೆಯರ ಬಡವರ ಹಿತ ಕಾಯುವ ಕಾರ್ಯಕ್ಕೆ ಜನ ಬೆಂಬಲಿಸಲಿದ್ದಾರೆ, ಈ ಬಾರಿ ಬೆಜೆಪಿ ಗೊಂದಲದ ಗೂಡಾದರೆ, ಕಾಂಗ್ರೇಸ್ 15 ವರ್ಷ ಆಡಳಿತ ನಡೆಸಿದರೂ ಸಹ ಜನರಿಂದ ದೂರವಾಗಿದ್ದಾರೆ ಅದ್ದರಿಂದ ಜೆ.ಡಿ.ಎಸ್ ಗೆಲುವು ಖಚಿತ, ಕುಮಾರಣ್ಣನವರು ಮುಖ್ಯಮಂತ್ರಿಯಾಗುವುದರಲ್ಲಿ ಅನುಮಾನವೇ ಇಲ್ಲವೆಂದರು. ಪಕ್ಷದ ಪ್ರಚಾರಕ್ಕೆ ಅನಂದ ಗುರೂಜಿಯವರು, ಸಿ.ಎಂ. ಇಬ್ರಾಹಿಂ ಅವರು, ನಿಕಿಲ್ ಕುಮಾರಸ್ವಾಮಿಯವರು ಅಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಮ್ ಅದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಬಾಲಸುಬ್ರಹ್ಮಣ್ಯ ಅವರು ಮಾತನಾಡಿ ಸ್ವಚ್ಚ ಹಾಗೂ ಕೆಲಸಗಾರ ವ್ಯಕ್ತಿಯನ್ನು ಬೆಂಬಲಿಸುವುದಾಗಿ ಜಿಲ್ಲಾ ಮುಖಂಡರೊಂದಿಗೆ ಚರ್ಚಿಸಿ ಜೆ.ಡಿ.ಎಸ್.ನ ಎನ್. ಸೋಮಣ್ಣನವರಿಗೆ ಪೂರ್ಣ ಬಾಹ್ಯ ಬೆಂಬಲವನ್ನು ನೀಡುತ್ತಿದ್ದೇವೆ ಎಂದರು.
ಸಭೆಯಲ್ಲಿ ಮುಖಂಡರಾಧ ರಾಜುಖಾನ್, ಚಿನ್ನಾಪುರಿ, ಕಮತೂರು ಮಲ್ಲೇಶ್, ಎಂ. ಅಂಜಿನಪ್ಪ, ಖಾದರ್ ಭಾಷಾ, ಕೆ.ಕೆ. ಮೆಹಬೂಬ್ ಭಾಷಾ, ಯೂಸೂಫ್, ಕುಮಾರಸ್ವಾಮಿ, ಬಂಡ್ರಿ ನೆಲಕದುರೆ ಮೂಕಪ್ಪ, ಮೋತಲಕುಂಟೆ ತಿಪ್ಪೇಸ್ವಾಮಿ, ಕಾಳಿಂಗೇರಿ ನಾಗಪ್ಪ, ಗಂಗಣ್ಣ ಇತರ ಹಲವಾರು ಮುಖಂಡರು ಉಪಸ್ಥಿತರಿದ್ದರು.

One attachment • Scanned by Gmail