ಸಂಡೂರು ಕೆರೆಗಳಿಗೆ ನೀರು
 ಕಾರ್ತಿಕ್ ಘೋರ್ಪಡೆಯವರ ಕನಸು ನನಸು: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.10: ಬರೀ ಮಳೆಗಾಲದಿಂದ ತುಂಬ ಬೇಕಿದ್ದ, ಸದಾ ಬರಗಾಲ ಎದುರಿಸುತ್ತಿದ್ದ  ಜಿಲ್ಲೆಯ ಸಂಡೂರು ತಾಲೂಕಿನ ಕೆರೆಗಳಿಗೆ ತುಂಗಭದ್ರ ನೀರು ತುಂಬಿಸುವ ಕಾರ್ತಿಕ ಘೋರ್ಪಡೆಯವರ ಕನಸು ನನಸಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅವರು ಇಂದು ಸಂಡೂರಿನ ಕಾರ್ತಿಕ ಘೋರ್ಪಡೆ ಅವರ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ. ಕೆರೆಗಳಿಗೆ ನೀರು ತುಂಬಿಸಿದರೆ. ತಾಲೂಕಿನ ಜನ ಎದಿರಿಸುತ್ತಿದ್ದ ಫ್ಲೋರೈಡ್ ಸಮಸ್ಯೆ ಬಗೆಹರಿಯಲಿದೆ.
ಇದಕ್ಕಾಗಿ ಘೋರ್ಪಡೆ ಅವರು ಯೋಜನೆ ಸಿದ್ದಪಡಿಸಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮುಂದೆ ಜಿಂದಾಲ್ ಏರ್ ಪೋರ್ಟ್ನನಲ್ಲಿ ಸಲ್ಲಿಸಿ ಯೋಜನೆ ಹೇಗೆ ಅನುಷ್ಟಾನ ಮಾಡಬಹುದು ಎಂದು ವಿವರಿಸಿ, ಮಾಜಿ ಸಂಸದೆ ಜೆ.ಶಾಂತಾ ಅವರ ಜೊತೆ ಒತ್ತಾಯ ಮಾಡಿದ್ದರು. ಅದು ಈಗ ಈಡೇರಿದೆ. ಸಚಿವ ಸಂಪುಟದ ಅನುಮೋದನೆ ಆಗಿ, ಮುಖ್ಯ ಮಂತ್ರಿಗಳು ಬಂದು ಕಾಮಗಾರಿಗೆ ಚಾಲನೆ ನೀಡಲಿದ್ದು. ಕರ್ನಾಟಕ ನೀರಾವರಿ ನಿಗಮದಿಂದ ಯೋಜನೆ ಸಿದ್ದವಾಗಿದ್ದು.  1.3 ಟಿಎಂಸಿ ನೀರು ತಂದು ಕೆರೆಗಳನ್ನು ತುಂಬಲಿದೆಂದರು.
ಸಧ್ಯ ಸಾರಿಗೆ ಸಂಸ್ಥೆಯಿಂದ ಸಾರಿಗೆ ವ್ಯವಸ್ಥೆ ಸುಧಾರಿಸಲು. 3600 ಬಸ್ ಖರೀದಿ ಮಾಡಿದೆ. ಕಲ್ಯಾಣ ಕರ್ನಾಟಕ್ಕೆ 800 ಬಸ್ ಖರೀದಿ ಮಾಡುತ್ತಿದೆಂದರು.20 ಕೋಟಿ ರೂ ವೆಚ್ಚದಲ್ಲಿ ಸಂಡೂರಿನಿಲ್ಲಿ  ಡಿಎಂಎಫ್ ನಿಧಿಯಿಂದ ಮಿನಿವಿಧಾನ ಸೌಧ ನಿರ್ಮಿಸಲಿದೆ.
 ಮಾಸ್ ಲೀಡರ್:
ಸಿದ್ದರಾಮಯ್ಯ ಅವರಷ್ಟು ದೊಡ್ಡವರು ನಾನಲ್ಲ.ಅವರು ಮಾಸ್ ಲೀಡರ್,  ಅವರ ವಿರುದ್ದವೇ ಸ್ಪರ್ಧೆ ಮಾಡಬೇಕು ಎಂದಿಲ್ಲ. ನಾನು  ಎಲ್ಲಿ ನಿಲ್ಲ ಬೇಕು ಎಂಬ ಬಗ್ಗೆ ಪಕ್ಷ ನಿರ್ಧರಿಸಲಿದೆ. ಮೊಳಕಾಲ್ಮುರು ಶಾಸಕನಾಗಿದ್ದೇನೆ. ಈ ಬಾರಿ ಸಂಡೂರು ಕ್ಷೇತ್ರವನ್ನು ಗೆಲ್ಲಬೇಕು ಎಂಬುದು ನಮ್ಮ ಆಶಯ, ನಾನು ನಿಲ್ಲಬೇಕು ಎಂದು ಜನ ಬಯಸಿದ್ದಾರೆ. ದಿವಾಕರ್ ಪ್ರಯತ್ನದಲ್ಲಿದ್ದಾರೆ ಚುನಾವಣೆ ಬಂದಾಗ ಪಕ್ಷ ತೀರ್ಮಾನಿಸಲಿದೆ. ಹೋಗುವುದು ಬೇಡ ಎಂದಷ್ಟೇ ಹೇಳಿವೆ ಎಂದರು.
ತಮ್ಮ ಬೆಂಬಲಿಗರು ಜನಾರ್ಧನರೆಡ್ಡಿ ಅವರ ಪಕ್ಷ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ. ನಮ್ಮ ಜನ ನಮ್ಮ ಕಡೆ ಇರುತ್ತಾರೆ. ಹೋಗುವಂತವರು ಹೋಗ್ತಾರೆ. ಜೊಳ್ಳು ಹೋಗುತ್ತವೆ. ಪಕ್ಷದ ಗಟ್ಟಿ ಕಾಳು ಇಲ್ಲಿರಲಿವೆ ಎಂದರು.