ಸಂಡೂರು ಕೆಆರ್ ಪಿ ಪಕ್ಷದ ಅಭ್ಯರ್ಥಿಯಾಗಿ ದಿವಾಕರ್ ನಾಮಪತ್ರ ಸಲ್ಲಿಕೆ ಪ್ರಯತ್ನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.15: ಜಿಲ್ಲೆಯ ಸಂಡೂರು ಕ್ಷೇತ್ರದ ಕೆಆರ್ ಪಿ ಪಕ್ಷದ ಅಭ್ಯರ್ಥಿಯಾಗಿ ಕೆ.ಎಸ್.ದಿವಾಕರ್ ಅವರು ಇಂದು ನಾಮಪತ್ರ ಸಲ್ಲಿಸುವ ಪ್ರಯತ್ನ ನಡೆಸಿದರು.
ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ನಾಮಪತ್ರ ತೆಗೆದುಕೊಂಡು ಚುನಾವಣಾ ಅಧಿಕಾರಿ ಕಚೇರಿಗೆ ತೆರಳಿದ್ದರು. ಆದರೆ ಕೆಲ ದಾಖಲೆಗಳ
ಕೊರತೆಯಿಂದ ನಾಮ ಪತ್ರ ಸಲ್ಲಿಸಲು ಸೂಚಿಸಿದ ಸಮಯಕ್ಕೆ ಕಾದಿದ್ದರಂತೆ.
ಕಳೆದ ಹಕವು ವರ್ಷಗಳಿಂದ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಬಯಸಿ ಪಜ್ಷ ಸಂಘಟನೆ ನಡೆಸಿದ್ದ ಇವರಿಗೆ ಆ ಪಕ್ಷ ಟಿಕೆಟ್ ನೀಡದೆ. ಕ್ಷೇತ್ರದ ಪರಿಚಯವೇ ಇಲ್ಲದ ಶಿಲ್ಪ ರಾಘವೇಂದ್ರ ಅವರಿಗೆ ಟಿಕೆಟ್ ನೀಡಿದ್ದರಿಂದ ಬೇಸತ್ತು. ತಮ್ಮ‌ಬೆಂಬಲಿಗರ ಆಶಯದಂತೆ  ದಿವಾಕರ್ ಅವರು ಕೆಆರ್ ಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ. 
ಇಂದು ಯಾವುದೇ ಗದ್ದಲ ಗಲಾಟೆ, ಮೆರವಣಿಗೆ ಇಲ್ಲದೆ ಸರಳವಾಗಿ ತೆರಳಿ ನಾಮಪತ್ರ ಸಲ್ಲಿಸುವ ಪ್ರಯತ್ನ ನಡೆದಿತ್ತು. ಎ.18 ರಂದು ಸಾವಿರಾರು  ಬೆಂಬಲಗರ ಜೊತೆ ಬೃಹತ್ ಮೆರವಣಿಗೆ ಮೂಲಕ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರಂತೆ.
ಇವರನ್ನು ಜನ ಆಯ್ಕೆ ಮಾಡುತ್ತಾರೋ, ಇಲ್ಲ ಇವರು  ಕಾಂಗ್ರೆಸ್ ನ ಸತತ ಗೆಲುವಿಗೆ  ಬ್ರೇಕ್ ಹಾಕ್ತಾರ ಎಂಬುದನ್ನು ಕಾದು ನೋಡಬೇಕಿದೆ.