ಸಂಡೂರು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ


ಸಂಜೆವಾಣಿ ವಾರ್ತೆ
ಸಂಡೂರು: ಏ:20: ಜನರ ಸೇವೆಯೇ ಜನಾರ್ಧನನ ಸೇವೆ ಎನ್ನುವ ರೀತಿಯಲ್ಲಿ ತುಕರಾಂ 15 ವರ್ಷಗಳಿಂದ ಸಂಡೂರು ತಾಲೂಕಿನ ಜನತೆಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ ಫಲವೇ ಇಂದು 40 ಸಾವಿರಕ್ಕು ಹೆಚ್ಚು ಕಾರ್ಯಕರ್ತರು ಸೇರಿರುವುದೇ ಸಾಕ್ಷಿ ಎಂದು ಮಾಜಿ ಸಚಿವ ಸಂತೋಷ್ ಎಸ್ ಲಾಡ್ ತಿಳಿಸಿದರು.
ಅವರು ಇಂದು ಪಟ್ಟಣದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶಾಸಕ ಈ.ತುಕರಾಂ ಅವರು ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಬೃಹತ್ ಮೆರವಣಿಗೆಯ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕಳೆದ 20 ವರ್ಷದಲ್ಲಿ 5 ವರ್ಷಗಳ ಕಾಲ ನಾನು, ನಂತರ 15 ವರ್ಷಗಳಲ್ಲಿ ಸಂಡೂರು ತಾಲೂಕಿಗೆ ಅತಿ ಹೆಚ್ಚು ಪ್ರೌಢಶಾಲೆ, ರಸ್ತೆ, ಕಾಲೇಜು, ಉದ್ಯೋಗ ಮೇಳಾ ರಸ್ತೆಗಳ ಅಭಿವೃದ್ದಿ ಮಾಡುವ ಮೂಲಕ ಜನರ ಜೀವನ ಮಟ್ಟ ಸುಧಾರಿಸುವಲ್ಲಿ ನಿರಂತರ ಶ್ರಮಿಸುತ್ತಿರುವ ತುಕರಾಂ ಯಾವುದೇ ದುರಾಭ್ಯಾಸಗಳಿಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡುತ್ತಿದ್ದು ಮತ್ತೋಮ್ಮೆ ನಿಮ್ಮ ಬೆಂಬಲ ನೀಡಬೇಕು ಎಂದರು.
ತುಕರಾಂ ಅವರು ತಮ್ಮ ಪತ್ನಿ, ಸಂತೋಷ್ ಲಾಡ್, ವಿಶ್ವಾಸ್ ಲಾಡ್, ಅಕ್ಷಯಲಾಡ್ ಸಮ್ಮುಖದಲ್ಲಿ ಮೆರವಣಿಗೆ ಸಾಗಿ ತಹಶೀಲ್ದಾರ್ ಕಛೇರಿಯಲ್ಲಿ ಚುನಾವಣಾಧಿಕಾರಿ ಶರಣಬಸಪ್ಪ ಅವರಿಗೆ ನಾಮಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಏಕಾಂಬರಪ್ಪ, ಚಿತ್ರಿಕಿ ಸತೀಶ್, ತಾಲೂಕಿನ ಎಲ್ಲಾ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.