ಸಂಡೂರು ಎಸ್ ಆರ್ ಎಸ್ ಶಾಲೆಗೆ ಶೇ. 100 ಫಲಿತಾಂಶ


ಸಂಜೆವಾಣಿ ವಾರ್ತೆ
ಸಂಡೂರು:ಮೇ: 17:  ಪಟ್ಟಣದ ಸಂಡೂರು ವಸತಿ ಶಾಲೆಯು (ಎಸ್ ಆರ್ ಎಸ್) ಐಸಿಎಸ್‍ಇ 10 ನೇ ತರಗತಿಯ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ.  ವಿದ್ಯಾರ್ಥಿಗಳು ಐಸಿಎಸ್‍ಇ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಶಾಲೆಯು ಸತತ 19 ವರ್ಷಗಳಿಂದಲೂ ಈ ಸಾಧನೆಯನ್ನು ಮಾಡುತ್ತ ಬಂದಿದೆ.  ಶಾಲೆಯ ವಿದ್ಯಾರ್ಥಿ ಪ್ರಜ್ವಲ್ ವಿರುಪಾಪುರ ಅವರು 96.50% ಪಡೆಯುವದರ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿಯಾದ ಕುಮಾರಿ ಲೊಲಿತ ಅವರು 95.50% ಪಡೆಯುವದರ ಮೂಲಕ ಎರಡನೆಯ ಸ್ಥಾನವನ್ನು, ವಿದ್ಯಾರ್ಥಿಯಾದ ವಿಜಯಕುಮಾರ ಪಿ ಪಾಟಿಲ ಅವರು 94.83% ಪಡೆಯುವದರ ಮೂಲಕ ಮೂರನೆಯ ಸ್ಥಾನವನ್ನು, ವಿದ್ಯಾರ್ಥಿನಿಯಾದ ಕುಮಾರಿ ಲಕ್ಷ್ಮೀ ಅಂತಪ್ಪ ಅವರು 94.17% ಪಡೆಯುವದರ ಮೂಲಕ ನಾಲ್ಕನೇಯ ಸ್ಥಾನವನ್ನು ಮತ್ತು ತನುಶ್ರೀ ಎಂ ಎಸ್  ಅವರು 94% ಪಡೆದು ಐದನೇ ಸ್ಥಾನವನ್ನುಗಳಿಸಿದ್ದಾರೆ. ಶಾಲೆಯ ಹದಿನಾಲ್ಕು  ವಿದ್ಯಾರ್ಥಿಗಳು 90% ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ. ಶಾಲೆಯ ಒಟ್ಟು  122 ವಿದ್ಯಾಥಿಗಳು  ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 66  ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ,  48 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.  ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬರ್ಹಿಜಿ ಅಜಯ ಘೋರ್ಪಡೆಯವರು ಮತ್ತು ಶಿವಪುರ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾದ ಆಶಿಯಾ ಬಾನು ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತ ಶಾಲೆಯ ಪ್ರಾಂಶುಪಾಲರಿಗೆ, ಶಿಕ್ಷಕ ವೃಂದಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

One attachment • Scanned by Gmail