
ಸಂಜೆವಾಣಿ ವಾರ್ತೆ
ಸಂಡೂರು: ಏ:12 ಸಂಡೂರು ಅರಣ್ಯ ಎರಡು ವಲಯದಡಿ ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದೆ ಕಾಡಿದೆ, ದಕ್ಷಿಣ ವಲಯದ ಭೈರವ ಅರ್ಥ, ರಾಜಾಪುರ, ಭುಜಂಗನಗರ, ಅಂಕಮನಾಳ್, ಗೊಲ್ಲಲಿಂಗಮ್ಮನಹಳ್ಳಿವ್ಯಾಪ್ತಿಯ ಅರಣ್ಯದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ, ಅದೇ ರೀತಿ ಉತ್ತರ ವಲಯದ ಜೋಗ, ತಾರಾನಗರ, ಮುರಾರಿಪುರ, ಸುಶೀಲಾನಗರ, ದೌಲತ್‍ಪುರ ವ್ಯಾಪ್ತಿಯಲ್ಲಿ ಬೆಂಕಿ ಬಿದ್ದು ಕಾಡು ನಾಶವಾಗಿದೆ, ಈ ಎರಡು ವಲಯದಗಳಿಂದ ಸುಮಾರು 700 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ನಾಶವಾಗಿದೆ. ಬೆಂಕಿ ಹಚ್ಚುವುದರಿಂದ ಹುಲ್ಲು ಹುಲುಸಾಗಿ ಬೆಳೆಯುವುದು ಎನ್ನುವುದು ಗ್ರಾಮಸ್ಥರ ನಂಬಿಕೆ ಈಗಾಗಿ ಕಡ್ಡಿಗೀರುವ ಕೆಲಸ ಮಾಡುತ್ತಾರೆ. ಅಲ್ಲದೆ ಕಾಡು ಪ್ರಾರಣಿಗಳು ಗ್ರಾಮದ ಒಳಗೆ ಬರಬಾರದು ಎನ್ನುವ ನಂಬಿಕೆಯಿಂದ ಕಿಡಿಗೇಡಿಗಳು ಬೀಡಿ ಸಿಗರೇಟು ಬಿಸಾಡುವುದರಿಂದ ಮತ್ತು ಕೆಲವು ಪ್ರಕರಣಗಳಲ್ಲಿ ಉದ್ದೇಶ ಪೂರ್ವಕವಾಗಿ ಜನ ವಿಕೃತಿ ಮೆರೆಯುತ್ತಾರೆ.
ಸಂಡೂರು ಅರಣ್ಯ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಕಾಡ್ಗಿಚ್ಚು ಪ್ರಕರಣ ಹೆಚ್ಚಾಗುತ್ತಿದ್ದು ಅಗ್ನಿಗೆ ಅಹುತಿಯಾಗುವ ಕಾಡಿನ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತಿದೆ ಫೆಬ್ರವರಿ ಆರಂಭದಿಂದ ಇಲ್ಲಿಯವರೆಗೆ 40ಕ್ಕಿಂತ ಹೆಚ್ಚು ಪ್ರಕರಣಗಳು ನಡೆದಿವೆ. ಖಸೆಂಬರ್ ತಿಂಗಳಿನಿಂದಲೇ ಪೈರ್‍ಲೈನ್ ಮಾಡಲಾಗಿದೆ. ಬೆಂಕಿ ಅನಾಹುತ ತಪ್ಪಿಸಲು ಸ್ಥಳೀಯ ಮೈನಿಂಗ್ ಕಂಪನಿ ಒದಗಿಸಿರುವ ಕಾರ್ಮಿಕರು ಅರಣ್ಯ ಇಲಾಖೆಯ ಸಿಬ್ಬಂದಿ ದಿನಗೂಲಿ ನೌಕರರ ಕ್ಷೇಮಾಭಿವೃದ್ದಿ ಸಂಘದ ಕಾರ್ಮಿಕರು ಸೇರಿದಂತೆ ನೂರಾರು ಜನ ಕಾವಲಿಗರಿದ್ದು ಕಾಡ್ಗಿಚ್ಚು ಪ್ರಕರಣಗಳನ್ನು ನಿಯಂತ್ರಸಲು ಸಾಧ್ಯವಾಗುತ್ತಿಲ್ಲ ಇತ್ತೀಚಿಗೆ ಕಾಡಿಗೆ ಬೆಂಕಿ ಇಟ್ಟ ಇಬ್ಬರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಅರಣ್ಯದಲ್ಲಿ ಬೆಂಕಿ ಬಿದ್ದರೆ ಸ್ಯಾಟಲೈಟ್ ಮೂಲಕ ಸಿಬ್ಬಂದಿಗೆ ತಿಳಿಸುವ ಕೆಲಸವನ್ನು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಮಾಡುತ್ತಿದೆ. ಅದರೂ ಸ್ಥಳಕ್ಕೆ ಸಿಬ್ಬಂದಿ ಧಾವಿಸುವ ಹೊತ್ತಿಗೆ ಬೆಂಕಿ ವ್ಯಾಪಿಸಿರುತ್ತದೆ.
ಸಮಸ್ಯೆಗೆ ಪರಿಹಾರ ಯಾರಿಂದ?: ಕಾಡ್ಗಿಚ್ಚು ತಡೆಗೆ ಜನರ ಸಹಭಾಗಿತ್ವ ಮತ್ತು ಸಹಕಾರದಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎನ್ನುವ ಅಂಶವನ್ನು ಉತ್ತರ ವಲಯ ಅರಣ್ಯಾಧಿಕಾರಿ ಅರ್. ಉಮೇಶ್ ರವರ ಅಭಿಪ್ರಾಯ