
ಸಂಜೆವಾಣಿ ವಾರ್ತೆ
ಸಂಡೂರು: ಜು: 10 ಸಂಡೂರು ತಾಲೂಕಿನ ತೋರಣಗಲ್ಲು ಹೋಬಳಿಯ ಜೆ.ಎಸ್.ಡಬ್ಲ್ಯೂ ಫೌಂಡೇಷನ್ ಸಹಭಾಗಿತ್ವದಲ್ಲಿ ಅನುಷ್ಕಾ ಫೌಂಡೇಷನ್ ವತಿಯಿಂದ ಸಂಡೂರಿನ ಸಆರ್ವಜನಿಕ ಆಸ್ಪತ್ರೆಯಲ್ಲಿ ಕ್ಲಬ್ ಪ್ರೂಟ್ ( ವಕ್ರಪಾದ ಸರಿಪಡಿಸುವ ) ಕ್ಲಿನಿಕನ್ನು ಆರಂಭಿಸಲಾಯಿತು. ಅನುಷ್ಕಾ ಫೌಂಡೇಷನ್ ಸಂಸ್ಥೆಯ ಅಧಿಕಾರಿ ಅಶೀಶ್ ಮಾತನಾಡಿ ಸಂಸ್ಥೆಯು ದೇಶದ 9 ರಾಜ್ಯಗಳ 124 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ದಏಶದಲ್ಲಿ ವಕ್ರಪಾದ ಸಮಸ್ಯೆಯನ್ನು ತೊಡೆದು ಹಾಕಲು ಸಂಸ್ಥೆ ಶ್ರಮಿಸುತ್ತಿದೆ ಎಂದು ತಿಳಿಸಿದರು. ಸಂಸ್ಥೆಯು ವಿವಿಧ ಸ್ಥಳೀಯ ಅಧಿಕಾರಿಗಳು ಮತ್ತು ವ್ಯದ್ಯಕೀಯ ಸಿಬ್ಬಂದಿ ಸಹಯೋಗದೊಂದಿಗೆ ಕ್ಲಬ್ ಪ್ಲೂಟ್‍ನಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕ್ಲಬ್‍ಪ್ಲೂಟ್‍ಜನುಮದಿಂದಲೇ ಬರುವ ದೋಷವಾಗಿದೆ. ಇಡೀ ದೇಶದಲ್ಲಿ 800 ನವಜಾತ ಶಿಶುಗಳಲ್ಲಿ ಒಂದು. ಶಿಶು ಕ್ಲಬ್‍ಪ್ಲೂಟ್‍ಸಮಸ್ಯೆಯಿಂದ ಬಳಲುತ್ತಿದೆ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಬಹುದು. ಅಜೀವ ಅಂಗವೈಕಲ್ಯವನ್ನು ತಪ್ಪಿಸಬಹುದು. ಜೆ.ಎಸ್. ಡಬ್ಲ್ಯೂ ಫೌಂಡೇಷನ್ ಸಂಸ್ಥೆಯಂತಹ ಪಾಲುದಾರರೊಂದಿಗೆ ಕೈಜೋಡಿಸುವ ಮೂಲಕ ಕ್ಲಬ್ ಪೂಟ್ ಸಮಸ್ಯೆ ನಿವಾರಣೆಗೆ ಫೌಂಡೇಷನ್‍ಶ್ರಮಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಜಿ.ಎಸ್. ಡಬ್ಲ್ಯೂ ಫೌಂಡೇಷನ್ ಅಧಿಕಾರಿಗಳಾದ ಪೆದ್ದನ್ನ, ದೇವರಾಜ, ಸಂಡೂರಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮಹ್ಮದ್ , ಚೇತನ್, ಡಾ. ಕಿರಣ ಕುಮಾರ ಉಪಸ್ಥಿತರಿದ್ದರು.
One attachment • Scanned by Gmail