ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ವತಿಯಿಂದ ಶ್ರಮದಾನ


ಸಂಜೆವಾಣಿ ವಾರ್ತೆ
ಸಂಡೂರು :ಆ:15  ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಶ್ರೀಮತಿ ಲಕ್ಷ್ಮೀ ಎಸ್ ನಾನಾವಟೆ ಬಿ.ಇಡಿ ಕಾಲೇಜ್ ಹಾಗೂ ವಿಷ್ಣುಪಂತ ನಾನಾವಟೆ ಡಿಗ್ರಿ ಕಾಲೇಜ್ ಮತ್ತು ಭಾರತೀಯ ಸುರಾಜ್ಯ ಸಂಸ್ಥೆ ಕನ್ನೂರು, ವಿಜಯಪುರ ಜಿಲ್ಲೆಯ ಸಹಯೋಗದಲ್ಲಿ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಆಡಳಿತಾಧಿಕಾರಿಗಳಾದ ಕುಮಾರ ಎಸ್ ನಾನಾವಟೆಯವರು ಮಾತನಾಡುತ್ತಾ ಸಾರ್ವಜನಿಕ ಸ್ಥಳಗಳನ್ನು ನಾವೆಲ್ಲರೂ ನಮ್ಮ ಸ್ವತಃ ಸ್ಥಳದ ರೀತಿಯಲ್ಲಿ ಭಾವಿಸಿ, ನಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಂತೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ನಮ್ಮದು? ಏಕೆಂದರೆ ನಮ್ಮೆಲ್ಲರ ತೆರಿಗೆಯ ಸಂಗ್ರಹದ ಹಣದಿಂದ ಸಾರ್ವಜನಿಕ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಿರುವಂತಹ ಸ್ಥಳಗಳನ್ನು ಈ ರೀತಿ ಅಸ್ಥಿತಿನಿಂದಿಡುವುದು ನಮ್ಮ ಹಣವನ್ನು ನಾವೇ ಪೋಲು ಮಾಡಿದಂತೆ, ಆಗಾಗಿ ಸ್ವಚ್ಛತೆ ನಮ್ಮೆಲ್ಲರ ಕರ್ತವ್ಯವಾಗಬೇಕಾಗಿದೆ ಎಂದು ತಿಳಿಸಿದರು.
ಶ್ರೀಶೈಲೇಶ್ವರ ವಿದ್ಯಾಕೇಂದ್ರ ಕಾರ್ಯದರ್ಶಿಗಳಾದ ಚಿದಾಂಬರ್ ಎಸ್. ನಾನಾವಟೆಯವರು ಮಾತನಾಡುತ್ತಾ ನಮ್ಮ ಸಂಸ್ಥೆಯು ಸಮಾಜಿಕ ಕಳಕಳಿಯಿಂದ ನೆರೆ ಅವಳಿಯಿಂದ ಒಳಗಾದ ಸಂತ್ರಸ್ಥರಿಗೆ ಹಾಗೂ ಕೋವಿಡ್‍ನಿಂದ ವ್ಯಪಾರ ವಿಲ್ಲದೆ ಸಂಕಷ್ಟಕೊಳಾಗದ ರೈತರಿಗೆ, ಸಂಸ್ಥೆಯು ಸಹಾಯವನ್ನು ನೀಡಿದ್ದು ಪ್ರಸ್ತುವಾಗಿ ಆನೇಕ ಕಾಯಿಲೆಗಳಿಗೆ ಮನುಕುಲವು ಒಳಗಾಗಿ ಸಾವುಬದುಕಿನ ಮಧ್ಯೆ ಹೋರಾಟ ನಡೆಸುವ ಪರಿಸ್ಥಿತಿಯನ್ನು ಸಂಸ್ಥೆ ಮನಗಂಡು ಸ್ವಚ್ಛತೆಯಿದ್ದಲ್ಲಿ ಆರೋಗ್ಯವಿರುತ್ತದೆ ಎನ್ನುವ ಧ್ಯೆಯವಾಕ್ಯವನ್ನು ಇಟ್ಟುಕೊಂಡು ಇನ್ನುಮುಂದೆ ಪ್ರತಿತಿಂಗಳು ಒಂದು ದಿನವನ್ನು ಸ್ವಚ್ಛತಾ ಶ್ರಮದಾನಕ್ಕೆ ಮೀಸಲಿಟ್ಟು ಸಂಡೂರಿನ ಸುತ್ತಮುತ್ತ ಇರುವ ಗ್ರಾಮಗಳನ್ನು ಆಯ್ಕೆಮಾಡಿಕೊಂಡು ಆ ಗ್ರಾಮವನ್ನು ಸಂಪೂರ್ಣ ಶ್ರಮದಾನದೊಂದಿಗೆ ಸ್ವಚ್ಛತೆಯ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಜಾಗೃತಿ ಮೂಡಿಸುವ ಮಹತ್ ಕಾರ್ಯ ನಮ್ಮ ಸಂಸ್ಥೆಯದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಅನಿಲ್ ಕುಮಾರ್ ಜಿ, ಪುರಸಭೆಯ ಮುಖ್ಯಾಧಿಕಾರಿಗಳಾದ ಜಯಣ್ಣ ಕೆ. ಪುರಸಭೆ ಶಿವಾರಂಜಿನಿ, ಸಿಬ್ಬಂಧಿಗಳು ಹಾಗೂ ಪ್ರಾಂಶುಪಾಲರು, ಕಾಲೇಜಿನ ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಸಾರ್ವಜನಿಕ ಹೇಳಿಕೆ : ಎಲೆಮಾರುವ ವ್ಯಾಪಾರಿ ನಾಗರಾಜ, ಶ್ರೀಶೈಲೇಶ್ವರ ವಿದ್ಯಾಕೇಂದ್ರ ಕಾಲೇಜಿನ ವಿದ್ಯಾರ್ಥಿಗಳು ಪುರಸಭೆಯ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರ ಆವರಣದಲ್ಲಿ ಮಧ್ಯದ ಬಾಟಲಿ ಮತ್ತು ತ್ಯಜ್ಯ ವಸ್ತುಗಳನ್ನು ಸ್ವಚ್ಛ ಮಾಡುವುದರ ಜೊತೆಗೆ ನಮ್ಮೆಲ್ಲರಿಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ತಂದಿದ್ದಾರೆ ಇದು ಶಿಕ್ಷಣದ ಜೊತೆಗೆ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಬ್ದಾರಿಯನ್ನು ಉಂಟುಮಾಡಿದೆ.