ಸಂಡೂರಿನ ರಾಯರ ಮಠದಲ್ಲಿ  ಸಡಗರದ ಆರಾಧನಾ ಮಹೋತ್ಸವ


ಸಂಜೆವಾಣಿ ವಾರ್ತೆ
ಸಂಡೂರು :ಸೆ: 3:   ಪ್ರತಿವರ್ಷದಂತೆ ಈ ವರ್ಷದಲ್ಲಿಯೂ ಸಹ ಸಂಪ್ರದಾಯದಂತೆ ಮರಾಠ ಸಮಾಜದ ಹತ್ತಿರ ಇರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರರಾಯರ ಪುರ್ವಾರಾಧನೆ ಮಧ್ಯಾರಾಧನೆ, ಉತ್ತರಾಧನೆಗಳು ಸಂಭ್ರಮದಿಂದ ಜರುಗಿದವು, ಭಕ್ತರು ಸಡಗರದಲ್ಲಿ ಭಾಗವಹಿಸಿ ತಮ್ಮ ಭಕ್ತಿಯನ್ನು ಅರ್ಪಿಸಿದರು. ಶ್ರೀ ರಾಯರ ಮಠದಲ್ಲಿ ವಿಶೇಷವಾಗಿ ರಾಯರ ಅಷ್ಟೋತ್ತರ ಪರಾಯಣ ಸಹಿತ ಪಂಚಾಮೃತಾಭಿಷೇಕ ನೆರವೇರಿಸಲಾಯಿತು, ಹೂವಿನ ಅಲಂಕಾರ, ತುಳಸಿ, ಹಲವಾರು ರೀತಿಯ ಅಲಂಕಾರಗಳನ್ನು ಮಾಡುವ ಮೂಲಕ ವಿಶೇಷ ಪೂಜಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೆರವೇಋಇಸಲಾಯಿತು. ಮೂರು ದಿನದ ಆರಾಧನೆ ಕಾರ್ಯಕ್ರಮಕ್ಕೆ ಭಕ್ತರ ದಂಡು ದಂಡಾಗಿ ಆಗಮಿಸಿ ರಾಯರ ದರ್ಶನ ಪಡೆದು ಪುನೀತರಾದರು. ಸರ್ವ ಸೇವೆಗಳು ನೆರವೇರಿದ ನಂತರ ಮೂರು ದಿನವೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಎರವೇರಿತು. ಉತ್ತರಾಧನೆಯ ಪ್ರಯುಕ್ತ ರಾಯರ ಮಠದಲ್ಲಿ ರಥೋತ್ಸವ ಜರುಗಿತು. ಮೂರುದಿನದ ಕಾರ್ಯಕ್ರಮದಲ್ಲಿ ಶ್ರೀ ಮಠದ ವಿಚಾರಣಾ ಕರ್ತರು ವ್ಯವಸ್ಥಾಪಕರು ಪ್ರಮುಖರು ಉಪಸ್ಥಿತರಿರುವುದು ವಿಶೇಷವಾಗಿತ್ತು.
ವಾಯುಸ್ತುತಿ, ಪರಾಯಣ, ಅಷ್ಠೊತ್ತರ ನಾಮಾವಳಿ, ಮಹಾಪೂಜಾ, ಹಸ್ತೋದಕ, ನೈವೇದ್ಯ ಮಹಾಮಂಗಳಾರತಿ ಅದ್ಭುತವಾಗಿ ನೆರವೇರಿತು ಮೂರು ದಿನದ ಕಾರ್ಯಕ್ರಮದಲ್ಲಿ ಸ್ಥಳೀಯರಿಂದ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಬ್ರಾಹ್ಮೀ ಮೂಹೂರ್ತದಲ್ಲಿ ರಾಯ ಮಠದಲ್ಲಿ ಸುಪ್ರಭಾತ ಕೇಳಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ನಂತರ ರಾಯ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. 

One attachment • Scanned by Gmail