ಸಂಡೂರಿನ ಬಿಕೆಜಿ ಗಣಿ ಕಂಪನಿಗೆ ಪ್ರಶಸ್ತಿ


ಸಂಜೆವಾಣ ವಾರ್ತೆ
ಸಂಡೂರು :ಮಾ: 3: ನಾಗ್ಪುರದ ನ್ಯಾಷನಲ್ ಫೈರ್ ಸರ್ವಿಸ್ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ (ಐಬಿಎಂ)ನ 75 ನೇಯ ವಾರ್ಷಿಕೋತ್ಸವದಲ್ಲಿ ಭಾರತ ಸರಕಾರದ ಗಣಿ ಸಚಿವಾಲಯವು ಮೆ|| ಬಿ ಕೆ ಜಿ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಎಂ.ಎಲ್.  ನಂ.2516 ಹದ್ದಿನ ಪಡೆ ಕಬ್ಬಿಣದ ಅದಿರು ಗಣಿಗೆ, 2021-2022ರ ಅವಧಿಯಲ್ಲಿ ಕೈಗೊಂಡ ಸುಸ್ಥಿರ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಶಂಸಿಸಿ ಫೈವ್ ಸ್ಟಾರ್ ರೇಟಿಂಗ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು ರಾಜ್ಯದ ಹಾಗೂ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ. ಪ್ರಹ್ಲಾದ ಜೋಶಿ ಅವರು ನಮ್ಮ ಸಂಸ್ಥೆಯ ಬಿ.ರುದ್ರಗೌಡ, ವ್ಯವಸ್ಥಾಪಕ ನಿರ್ದೇಶಕರು, ಹಿರಿಯ ಅಧಿಕಾರಿಗಳಾದ. ಪಿ ಶ್ರೀನಿವಾಸ ರಾವ್ , ಪ್ರಮೋದ ರಿತ್ತಿ ರವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಮೆ|| ಬಿ ಕೆ ಜಿ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅಳವಡಿಸಿಕೊಂಡ ಉತ್ತಮ ಅಭ್ಯಾಸಗಳು ಹಾಗು ಅನೇಕ ಸುಸ್ಥಿರ ಉಪ ಕ್ರಮಗಳ ಬಗ್ಗೆ ಈ ಸಂದರ್ಭದಲ್ಲಿ ಶ್ಲಾಘನೆ ವ್ಯಕ್ತಪಡಿಸಲಾಯಿತು
ಕೇಂದ್ರ ಗಣಿ ಸಚಿವಾಲಯವು ಮೆ|| ಬಿ ಕೆ ಜಿ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಎಂ.ಎಲ್.  ನಂ.2516 ಹದ್ದಿನ ಪಡೆ ಕಬ್ಬಿಣದ ಅದಿರು ಗಣಿಯ ಕಾರ್ಯಾಡಳಿತ, ವೈಜ್ಞಾನಿಕ ಗಣಿಗಾರಿಕೆ, ಸಾಮಾಜಿಕ ಕಾಳಜಿ, ಪರಿಸರ ಸ್ನೇಹಿ, ಅಭಿವೃದ್ಧಿ ಕಾರ್ಯಗಳು, ಉದ್ಯೋಗ, ಸಂಸ್ಥೆಯು ಉತ್ತಮ ಮಟ್ಟದಲ್ಲಿ ಗಣಿಯನ್ನು ನಡೆಸಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಸ್ಮಯೋರ್ ಸಂಸ್ಥೆಗೆ ಕೇಂದ್ರ ಸರಕಾರವು ಈ 5 ಸ್ಟಾರ್ (ಪಂಚತಾರಾ ಪ್ರಶಸ್ತಿ) ರೇಟಿಂಗ್ ಅವಾರ್ಡ್‍ನ್ನು ನೀಡಿದೆ ಇದರಿಂದ ಕಂಪನಿಯ ಸಿಬ್ಬಂದಿಯ ಶ್ರಮ ಹಾಗೂ ನಿರ್ವಹಣೆ ಬಹು ಮುಖ್ಯ ಎಂಬುದು ಕಂಡು  ಬರುತ್ತದೆ.