
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.13 ಜಿಲ್ಲೆಯ ಸಂಡೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎಸ್.ದಿವಾಕರ್ ಅವರು ಟಿಕೆಟ್ ದೊರೆಯದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಫಿಕ್ಸ್ ಆಗಿದೆ.
ಕಳೆದ ಹಲವು ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ್ದ ನನ್ನನ್ನು ನಿರ್ಲಕ್ಷಿಸಿ. ಜನ ಸಂಪರ್ಕವೇ ಇಲ್ಲದವರಿಗೆ ಟಿಕೆಟ್ ನೀಡಿರುವುದರಿಂದ ಬೇಸರ ತಂದಿದೆ.
ಪಕ್ಷದಲ್ಲಿ ಕೆಲ ಮುಖಂಡರು ಒಳ ಒಪ್ಪಂದದಿಂದ ಕಾಂಗ್ರೆಸ್ ಗೆಲಿಸಲು ಟಿಕೆಟ್ ತಪ್ಪಿಸಿದ್ದಾರೆ. ಆದರೆ ಕಾರ್ಯಕರ್ತರು, ಬೆಂಬಿಲಗರು ನಮ್ಮ ಪರವಾಗಿದ್ದಾರೆ.
ನಾನು ಈವರಗೆ ಕ್ಷೇತ್ರದಲ್ಲಿ ಓಡಾಡಿ, ಜನರೊಂದಿಗೆ ಬೆರೆತು ಇಟ್ಟುಕೊಂಡಿರುವ ಸಂಪರ್ಕದ ಬಗ್ಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಮೂಲಕ ಪ್ರದರ್ಶಿಸಲಿದೆ.
ಈ ಬಾರಿ ನನ್ನ ಬಂಡಾಯದಿಂದ ಬಿಜೆಪಿಗೆ ಸೋಲು ಖಚಿತ ಎನ್ನುತ್ತಾರೆ ಕೆ.ಎಸ್.ದಿವಾಕರ್.
ಇತರೇ ಪಕ್ಷದವರು ಕರೆಯುತ್ತಿದ್ದಾರೆ. ಆದರೆ ನಿನ್ನೆ ದಿನ ಸಭೆ ನಡೆಸಿ ನನ್ನ ಬೆಂಲಿಗರ ಅಭಿಪ್ರಾಯದಂತೆ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿಯೇ ಸ್ಪರ್ಧೆ ಮಾಡಿ ಪಕ್ಷಕ್ಕೆ ನನ್ನ ಸೇವೆ ಏನೆಂಬುದನ್ನು ತೋರಿಸಲಿದೆಂದರು.
ಪಕ್ಷದಲ್ಲಿ ನಿಷ್ಟಾವಂತರಿಗೆ, ಪ್ರಾಣಿಕರಿಗೆ ಪರಿಗಣನೆ ಇಲ್ಲದಾಗಿದೆ. ಕೆಲವರ ಮಾತಿಗೆ ಮನ್ನಣೆ ಕೊಡುವುದು ಸರಿಯಲ್ಲ. ಕಾರ್ಯಕರ್ತರಿಗೆ ಮನ್ನಣೆ ಎಂದು ಹೇಳುತ್ತಲೇ, ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿ ಶ್ರೀಮಂತರ ಮಾತಿಗೆ ಮಣೆ ಹಾಕುವುದು ಸರಿಯಾದ ಕ್ರಮ ಅಲ್ಲ ಎಂದಿದ್ದಾರೆ. ಇಂದು ಸಂಜೆ ಒಳಗೆ ನಾಮಪತ್ರ ಸಲ್ಲಿಸುವ ದಿನಾಂಕ ಪ್ರಕಟಿಸಲಿದೆಂದು ದಿವಾಕರ್ ಹೇಳಿದ್ದಾರೆ.