ಸಂಡೂರಿನಲ್ಲಿ ಯೋಗ ದಿನಾಚರಣೆ


ಸಂಜೆವಾಣಿ ವಾರ್ತೆ
ಸಂಡೂರು: ಜು: 22 ನಿತ್ಯವೂ ಸಹ ವಾಕಿಂಗ್ ಮಾಡುವ ಸದಾಭಿರುಚಿಯವರು ಸೇರಿಕೊಂಡು ಸಂಘವನ್ನು ಮಾಡುವ ಮೂಲಕ ಇಂದು ಆರೋಗ್ಯ ರಕ್ಷಣೆಯ ಬಗ್ಗೆ ನಿರಂತರವಾದ ಚಿಂತನೆ, ಸ್ವಚ್ಚತೆಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘ ತನ್ನದೇ ಅದ ಕಾರ್ಯವನ್ನು ನಿರ್ವಹಿಸುತ್ತಿದೆ, ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರತಿಯೊಬ್ಬ ಸದಸ್ಯರೂ ಸಹ ಭಾಗಿಯಾಗಿ ಯೋಗ ಮಾಡುವ ಮೂಲಕ ಸಮಾಜಕ್ಕೆ ವಿಶೇಷ ಸಂದೇಶವನ್ನು ತಿಳಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಕಾರ್ಯದರ್ಶಿ ಕೆ.ಕುಮಾರಸ್ವಾಮಿ ತಿಳಿಸಿದರು.
ಅವರು ಇಂದು ಪಟ್ಟಣದ ಶಿವಪುರ ಕೆರೆಯ ಹತ್ತಿರದ ಸಾರ್ವಜನಿಕ ಜಿಮ್ ಅವರಣದಲ್ಲಿ ಶಿವಪುರ ಕೆರೆ ವಾಕರ್ಸ್ ಅಶೋಷಿಯೇಷನ್ ವತಿಯಿಂದ ಅಂತರಾಷ್ಟೀಯ ಯೋಗ ದಿನಾಚರಣೆಗೆ ಯೋಗ ದಿನಾಚರಣೆಯನ್ನು ಕುರಿತು ಮಾತನಾಡಿ ಪ್ರತಿಯೊಬ್ಬರೂ ಸಹ ದೈಹಿಕ ಕಸರತ್ತನ್ನು ಮಾಡುತ್ತಾರೆ, ಅದರೆ ಯೋಗ ಎಲ್ಲರೂ ಸಹ ಮಾಡಬಹುದಾಗಿದೆ, ಅದ್ದರಿಂದ ಇಲ್ಲಿ ಕಿರಿಯರಿಂದ ಹಿಡಿದು ಹಿರಿಯ ಜೀವಿಗಳು ಭಾಗಿಯಾಗುವ ಮೂಲಕ ಶುದ್ದ ಸಮಾಜ ನಿರ್ಮಾಣ ಮತ್ತು ಆರೋಗ್ಯವಂತ ಸಮಾಜ ಕಟ್ಟೋಣ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು ಸತ್ಯನಾರಾಯಣ, ಕಾರ್ಯದರ್ಶಿ ಕೆ. ಕುಮಾರಸ್ವಾಮಿ, ಪ್ರಕಾಶ್ ಉಪಾಧ್ಯಕ್ಷರು, ಬದರಿನಾಥ ಜಾಧವ್, ಹಾಗೂ ಪರಶುರಾಮ ವಣಕೇರಿ ನೇತೃತ್ವದಲ್ಲಿ    ಅಂಕಮನಾಳ್ ರಾಜಣ್ಣ, ವಾಮದೇವ, ಜಿಲಾನ್ ಭಾಷಾ, ಅಶೋಕ ಶೆಟ್ಟಿ, ವಿಜಯಕುಮಾರ್, ರೋಷನ್, ಸುರೇಶ್‍ಗೌಡ್, ಇತರರು ಉಪಸ್ಥಿತರಿದ್ದರು. ಪ್ರಮುಖವಾಗಿ ಬದರಿನಾಥ ಜಾಧವ್ ಅವರು ಪ್ರಾಣಯಾಮ, ಪೂರಕ, ರೇಚಕ, ಕುಂಬಕಗಳ ಬಗ್ಗೆ ಮಾಹಿತಿ ನೀಡಿದರು.