ಸಂಡೂರಿನಲ್ಲಿ ಕೊಂಡಯ್ಯ ಪ್ರಚಾರ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.30: ಜಿಲ್ಲೆಯ ಸಂಡೂರು ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ನ ಎಂ.ಎಲ್.ಸಿ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ವಿವಿಧ ಮುಖಂಡರುಗಳೊಂದಿಗೆ ತೆರಳಿ ಪ್ರಚಾರ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಕೊಂಡಯ್ಯ ಅವರು, ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಒತ್ತು ನೀಡಲಿದೆ.
ನಿಮ್ಮ ಆಶಯಗಳಿಗೆ ತಕ್ಕಂತೆ ಈ ಬಾರಿಯೂ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಎಂ.ಎಲ್.ಸಿ ಅಲ್ಲಂ ವೀರಭದ್ರಪ್ಪ, ರಾಜ್ಯಸಭಾ ಸದಸ್ಯ ಡಾ|| ಸೈಯದ್ ನಾಸೀರ್ ಹುಸೇನ್, ಸಂಡೂರು ಶಾಸಕ ಈ.ತುಕಾರಾಂ, ಮಾಜಿ ಎಂ.ಎಲ್.ಸಿ ಕೆ.ಎಸ್.ಎಲ್.ಸ್ವಾಮಿ, ಮೊದಲಾದವರು ಇದ್ದರು.
ಪ್ರಮುಖವಾಗಿ ಇಂದಿಗೂ ಅಲ್ಲಿ ತುಕಾರಾಂ ಅವರು ಶಾಸಕರಾಗಿ ಆಯ್ಕೆಯಾಗುತ್ತಿರುವುದಕ್ಕೆ ಲಾಡ್ ಸಹೋದರರ ಸಹಕಾರವೇ ಕಾರಣ. ಆದರೆ ಇಂದಿನ ಸಭೆಯಲ್ಲಿ ಕೊಂಡಯ್ಯನವರ ಬದಲಿಗೆ ಪಱ್ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದ ಸಂತೋಷ್ ಲಾಡ್ ಆಗಲಿ, ಟಿಕೆಟ್ ಕೇಳಿದ್ದ ಅನಿಲ್ ಲಾಡ್ ಆಗಲಿ ಇರಲಿಲ್ಲ. ಇದು ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಪ್ರಚಾರಕ್ಕೆ ಹಿನ್ನಡೆ ಎಂದು ಮಾತನಾಡಲಾಗುತ್ತಿತ್ತು.
Attachments area