ಸಂಜೆ ವಾಣಿ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ ಸಾಮಾಜಿಕ ಕಳಕಳಿಯ ಪತ್ರಿಕೆ

ಲಿಂಗಸುಗೂರು.ನ.೬-ಸಂಜೆ ವಾಣಿ ಪತ್ರಿಕೆಯು ಜನಸಾಮಾನ್ಯರ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆಯಾಗಿದೆ ಏಕೆಂದರೆ ಈ ಪತ್ರಿಕೆ ೧೯೮೨ರಿಂದ ಪ್ರಾರಂಭವಾಗಿದ್ದು ಅಂದಿನಿಂದ ಇಂದಿನವರೆಗೂ ಸಾರ್ವಜನಿಕ ವಲಯದಲ್ಲಿ ಜನ ಸಾಮಾನ್ಯರ ಪತ್ರಿಕೆಯಾಗಿ ಹೊರಹೊಮ್ಮುವ ಪ್ರಾಮಾಣಿಕ ಪತ್ರಿಕೆ ಈ ಪತ್ರಿಕೆ ಯಲ್ಲಿ ಬರುವ ಪ್ರತಿಯೊಂದು ತಾಜಾ ಸುದ್ದಿಗಳು ಜನರಿಗೆ ಉತ್ತಮ ವರದಿಗಳನ್ನು ನೀಡುವುದರ ಮೂಲಕ ಮನೆ ಮಾತಾಗಿಸುವಂತೆ ಮಾಡಿದೆ ಎಂದು ಸಂಜೆ ವಾಣಿ ಹೊರ ತಂದಿರುವ ದೀಪಾವಳಿ ಹಬ್ಬದ ವಿಶೇಕಾಂಕ ಬಿಡುಗಡೆ ಮಾಡುವ ಮೂಲಕ ಲಿಂಗಸುಗೂರು ತಾಲೂಕಿನ ಡಿವೈಎಸ್ಪಿ ಎಸ್‌ಎಸ್ ಹುಲ್ಲುರ ಹಾಗೂ ಸಿಪಿಐ ಮಹಾಂತೇಶ ಸಜ್ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರ ನಿವಾಸದಲ್ಲಿ ಸಂಜೆ ವಾಣಿ ಪತ್ರಕರ್ತರು ಬೇಟಿ ನೀಡಿ ಸಂಜೆ ವಾಣಿ ದೀಪಾವಳಿ ವಿಶೇಷಾಂಕ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರು ಇತ್ತಿಚಿನ ದಿನಗಳಲ್ಲಿ ಸಂಜೆ ವಾಣಿ ಪತ್ರಿಕೆಯಲ್ಲಿ ಬರುವ ಪ್ರತಿಯೊಂದು ತಾಜಾ ಸುದ್ದಿಗಳು ಅಧಿಕಾರಿಗಳಿಗೆ ನಡುಕ ಹುಟ್ಟುವಂತೆ ವರದಿ ಬಿತ್ತರಿಸುವ ಮೂಲಕ ಜಿಡ್ಡುಗಟ್ಟಿದ ಆಡಳಿತಕ್ಕೆ ಸಿಂಹಸ್ವಪ್ಪನ್ನವಾಗಿದೆ ಹಾಗೂ ಸ್ಥಳೀಯ ವಿಷಯಗಳನ್ನು ಕುರಿತು ಪತ್ರಿಕೆಯಲ್ಲಿ ಹೆಚ್ಚು ಪ್ರಕಟವಾದ ಮಾತ್ರ ಪತ್ರಿಕೆಗೆ ಬಹಳ ಹೆಸರು ಬರುತ್ತದೆ ಈಗಾಗಲೇ ಸಂಜೆ ವಾಣಿ ಪತ್ರಿಕೆ ರಾಜ್ಯದಲ್ಲಿ ಹೆಸರು ಮಾಡಿದೆ ಎಂದು ಮಾಜಿ ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಕರಿಯಪ್ಪ ವಜ್ಜಲ್ ಇವರು ಮಾತನಾಡಿ ತಾಲುಕಿನ ಸಂಜೆ ವಾಣಿ ಪತ್ರಕರ್ತರು ವಿವಿಧ ರೀತಿಯ ಹೊಸ ಹೊಸ ವರದಿ ಬಿತ್ತರಿಸುವ ಮೂಲಕ ಮನೆ ಮಾತಾಗಿದ್ದಾರೆ. ಎಂದು ದೀಪಾವಳಿ ವಿಶೇಷಾಂಕ ಬಿಡುಗಡೆ ಸಂದರ್ಭದಲ್ಲಿ ಹೇಳಿದರು.
ತಾಲೂಕಿನ ಖ್ಯಾತ ವೈದ್ಯರಾದ ಡಾ.ಎನ್‌ಎಲ್ ನಡುವಿನಮನಿ ಇವರು ಸಂಜೆ ವಾಣಿ ಪತ್ರಿಕೆ ಹೊರತಂದಿರುವ ದೀಪಾವಳಿ ವಿಶೇಷಾಂಕ ಬಿಡುಗಡೆ ಮಾಡಿ ಮಾತನಾಡಿದ ಅವರು ರಾಜ್ಯದಲ್ಲಿ ಸಂಜೆ ವಾಣಿ ಪತ್ರಿಕೆ ಕಳೆದ ೪೦ವರ್ಷಗಳಿಂದ ರಾಜ್ಯಾದ್ಯಂತ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ಆರ್ಥಿಕ ಮತ್ತು ಭ್ರಷ್ಟಾಚಾರ ಮಾಡುವ ಅಧಿಕಾರಿಗಳಿಗೆ ತಮ್ಮದೇ ಆದ ರೀತಿಯಲ್ಲಿ ವರದಿಗಳನ್ನು ಬಿತ್ತರಿಸಿ ಯಾವುದೇ ಕಾರಣಕ್ಕೂ ರಾಜಿ ಮುಲಾಜಿಲ್ಲದೆ ವರದಿ ಮಾಡುತ್ತಾ ಬಂದಿದೆ. ಹಾಗೂ ತಾಲೂಕಿನ ಸಂಜೆ ವಾಣಿ ಪತ್ರಕರ್ತರು ಕೂಡ ಯಾವುದೇ ಮುಲಾಜಿಲ್ಲದೆ ನೇರವಾಗಿ ವರದಿ ಮಾಡುವ ಮೂಲಕ ತಾಲೂಕಿನ ಜನರಲ್ಲಿ ಮನೆ ಮಾತಾಗಿದ್ದಾಗಿರೆ ಎಂದರೆ ತಪ್ಪಾಗಲಾರದು ಎನ್ನುವ ಮೂಲಕ ಪತ್ರಿಕೆ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳ ರೂವಾರಿ ಹೈದ್ರಾಬಾದ್ ಕರ್ನಾಟಕ ಹೋರಾಟಗಾರ ಸಾಹಿತ್ಯ ಸಂಸ್ಕೃತಿ ಆಸಕ್ತಿಯನ್ನು ಹೊಂದಿದ ಬಸವಂತರಾಯ ಕುರಿ ಮಾತನಾಡಿ ಒಂದು ಕಾಲದಲ್ಲಿ ಸಂಜೆ ವಾಣಿ ಪತ್ರಿಕೆ ಎಂದರೆ ಎಲ್ಲರ ರಾಜಕಾರಣಿಗಳ ಗಮನ ಸೆಳೆದ ಪತ್ರಿಕೆ ಯಾಗಿತ್ತು ಅದೇ ರೀತಿ ಇಂದಿಗೂ ಸಹ ಪತ್ರಿಕೆ ತನ್ನ ಗೌರವವನ್ನು ಕಾಪಾಡಿ ಕೊಂಡು ಬಂದಿದೆ ಸಂಜೆ ವಾಣಿ ಪತ್ರಿಕೆ ಜನ ಸಾಮಾನ್ಯರ ಹೃದಯವಂತ ವಿಶ್ವಾಸಾರ್ಹತೆ ಪತ್ರಿಕೆಯಾಗಿ ಹೊರಹೊಮ್ಮುವ ಪ್ರಾಮಾಣಿಕ ಪತ್ರಿಕೆಎಂಬುದು ಸಾರ್ವಜನಿಕರಕಲ್ಲಿ ಇಂದಿಗೂ ಜೀವಂತವಾಗಿದೆ ಎಂದು ದೀಪಾವಳಿ ವಿಶೇಷಾಂಕ ಬಿಡುಗಡೆ ಸಂದರ್ಭದಲ್ಲಿ ಬಸವಂತರಾಯ ಕುರಿ ಇವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಡಾ.ಸಿ ಶರಣಪ್ಪ ಲಿಂಗಸುಗೂರು, ಪಿಎಸ್‌ಐ ಪ್ರಕಾಶ್ ಡಂಬಳ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ, ಬಿಎ ನಂದಿಕೋಲಮಠ ಪೊಲೀಸ್ ಇಲಾಖೆ ಅಧಿಕಾರಿಗಳಾದ, ರಂಗಣ್ಣ ವಾಯ್ ರವಿ ಸೇರಿದಂತೆ ಪೋಲೀಸ್ ಅಧಿಕಾರಿಗಳು ಮತ್ತು ಸಂಜೆ ವಾಣಿ ಪತ್ರಕರ್ತರಾದ ದುರುಗಪ್ಪ ಹೊಸಮನಿ, ಈಶಾನ್ಯ ಟೈಂಸ್ ಪತ್ರಿಕೆ ವರದಿಗಾರ ಪಂಪಾಪತಿ, ಭಜಂತ್ರಿ ಬೀಮರಾಜ ಮಾಳಿ ವಾಸುದೇವ ಮಾಳಿ ಸೇರಿದಂತೆ ಇತರರು ದೀಪಾವಳಿ ವಿಶೇಷಾಂಕ ಬಿಡುಗಡೆ ಮಾಡುವ ಸಂದರ್ಭದಲ್ಲಿ ಇದ್ದರು.