ಸಂಜೆ ವಾಣಿ ವರದಿಗೆ ಎಚ್ಚತ್ತುಕೊಂಡ ಜೇಸ್ಕಾಂ ಅಧಿಕಾರಿಗಳು ಕೊನೆಗೂ ತೆರವು ಗೊಳಿಸಿದ ವಿದ್ಯುತ ಟ್ರಾನ್ಸ್ ಫಾರಂ

ಹುಸೇನ ಮುಲ್ಲಾ
ಕರಜಗಿ:ಜ.25:ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ವ್ಯಾಪ್ತಿಗೆ ಬರುವ ಸರಕಾರಿ ಉರ್ದು ಪ್ರೌಢ ಶಾಲೆಯ ಪಕ್ಕದಲ್ಲಿರು ವಿದ್ಯುತ ಟ್ರಾನ್ಸ್ ಫಾರಂ ದಿಂದಾಗಿ ಪ್ರಾಣ ಭಯದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವದನ್ನು ಕಂಡು ಜನೆವರಿ 18 ರಂದು ಜಸ್ಕಾಂ ಅಧಿಕಾರಿಗಳು ನಿರ್ಲಕ್ಷ ವಹಿಸಿ ಮಕ್ಕಳ ಜೀವದ ಜೊತೆ ಚಲ್ಲಾಟ ಎಂಬ ಶೀರ್ಷಿಕೆ ಅಡಿ ಸಂಜೆವಾಣಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು ವರದಿ ಬಂದ ಮೇಲೆ ಎಚ್ಚೆತ್ತುಕೊಂಡ ಜೇಸ್ಕಾಂ ಇಲಾಖೆಯ ಅಧಿಕಾರಿಗಳು ಬುಧವಾರದಂದು ವಿದ್ಯುತ ಟ್ರಾನ್ಸ್ ಫಾರಂ ಬೇರೆಕಡೆ ಸ್ಥಳಾಂತರಿಸುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಜೆಸ್ಕಾಂ ಅಧಿಕಾರಿಗಳು ಅನುಕೂಲ ಮಾಡಿಕೊಟ್ಟಿದ್ದಾರೆ. ಜೀವ ಭಯದಲ್ಲಿ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದಂತಾಗಿತ್ತು


ನಮ್ಮ ಶಾಲೆಯ ಪಕ್ಕದಲ್ಲಿ ವಿದ್ಯುತ ಟ್ರಾನ್ಸ್ ಫಾರಂ ಇರುವದರಿಂದ ಮಕ್ಕಳು ಜೀವ ಭಯದಲ್ಲೇ ವಿದ್ಯಾಭ್ಯಾಸ ಮಾಡುತಿದ್ದರು ಇದರಿಂದ ಹಲವು ಬಾರಿ ಸಂಭಂದ ಪಟ್ಟ ಅಧಿಕಾರಿಗಳಿಗೆ ಹೇಳಿದರು ಕೂಡಾ ಯಾವುದೇ ಪ್ರಯೋಜನ ಆಗಿರಲಿಲ್ಲ ಆದರೆ ಜನೆವರಿ 18ರಂದು ಸಂಜೆವಾಣಿ ಪತ್ರಿಕೆಯಲ್ಲಿ ವರದಿ ಬಂದ ಮೇಲೆ ಅಧಿಕಾರಿಗಳು ಸ್ಪಂದಿಸಿ ವಿದ್ಯುತ ಟ್ರಾನ್ಸ್ ಫಾರಂ ತೆರವು ಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಇದರಿಂದಾಗಿ ಸಂಜೆವಾಣಿ ಪತ್ರಿಕೆಗೆ ನಮ್ಮ ಶಾಲೆಯ ಪರವಾಗಿ ದನ್ಯವಾದ ಸಲ್ಲಿಸುತ್ತೇವೆ

ಸರಕಾರಿ ಉರ್ದು ಪ್ರೌಢ ಶಾಲೆಯ
ಮುಖ್ಯ ಗುರುಗಳು
ಆನಂದ ಕುಂಬಾರ