ಸಂಜೆ ಮಹಾ ರಥೋತ್ಸವ


ಬ್ಯಾಡಗಿ,ಏ.11: ಪಟ್ಟಣದ ಗುಮ್ಮನಹಳ್ಳಿ ರಸ್ತೆಯಲ್ಲಿರುವ ಶ್ರೀಸಂಗಮೇಶ್ವರ ದೇವರ ಮಹಾರಥೋತ್ಸವವು ದಿ.11ರಂದು ಸಂಜೆ 5ಗಂಟೆಗೆ ವಿಜೃಂಭಣೆಯಿಂದ ಜರುಗಲಿದೆ.
ಅಂದು ಸಂಜೆ ಶ್ರೀ ಸಂಗಮೇಶ್ವರ ದೇವರ ಮಹಾರಥೋತ್ಸವವು ಸಕಲ ವಾದ್ಯ ವೈಭವಗಳೊಂದಿಗೆ ಬಹು ಸಡಗರ ಸಂಭ್ರಮದಿಂದ ನಡೆಯಲಿದೆ. ರಾತ್ರಿ 8ಗಂಟೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ರಥೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಂಗಮೇಶ್ವರ ಟ್ರಸ್ಟ್ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.