ಸಂಜೆ ಬಸವೇಶ್ವರ ಪುತ್ಥಳಿ ಲೋಕಾರ್ಪಣೆ

ಚನ್ನಮ್ಮನ ಕಿತ್ತೂರ,ಮಾ 17: ಸಮೀಪದ ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ವಿಶ್ವಗುರು ಬಸವಣ್ಣವರ ಪುತ್ಥಳಿ ಇಂದು ಸಾಯಂಕಾಲ 5.30ಕ್ಕೆ ಗಾಮ ಪಂಚಾಯತಿ ಎದುರುಗಡೆ ಲೋಕಾರ್ಪಣೆಗೊಳ್ಳುವುದೆಂದು ಕಮೀಟಿಯ ಸದಸ್ಯ ಹಾಗೂ ಪಿಕೆಪಿಎಸ್ ಅಧ್ಯಕ್ಷ ಅಶೋಕ ಯಮಕನಮರಡಿ ಹೇಳಿದರು.
ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಸಾನಿಧ್ಯ ಮಡಿವಾಳ ರಾಜಯೋಗೀಂದ್ರ ಸ್ವಾಮಿಜೀ ಸಂಸ್ಥಾನ ಕಲ್ಮಠ ಕಿತ್ತೂರ. ನೇತೃತ್ವ, ಮೃತ್ಯಂಜಯ ಸ್ವಾಮಿಜೀ, ರಾಜಗುರು ಹಿರೇಮಠ ಗಂದಿಗವಾಡ ಹಾಗೂ ಚನ್ನ ಬಸವದೇವರು ಬೀಳ್ಕಿ, ಅಧ್ಯಕ್ಷತೆ ಅಶೋಕ ಯಮಕನಮರಡಿ, ಮೂರ್ತಿ ಲೋಕಾರ್ಪಣೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ದೀಪ ಪ್ರಜ್ವಲನೆ ಗಿರೀಶ ಹೊಸೂರ (ಆಯುಕ್ತ ಬೆಂಗಳೂರ ಮಹಾನಗರ ಪಾಲಿಕೆ,) ಮೂರ್ತಿ ಪೂಜೆ ವಿಠ್ಠಲ ಹಲಗೇಕರ (ಬಿಜೆಪಿ ಮುಖಂಡರು,) ಮುಖ್ಯ ಅತಿಥಿಗಳಾಗಿ ಸಂಸದೆ ಮಂಗಳಾ ಅಂಗಡಿ, ಮಾಜಿ ವಿ.ಪ.ಸ. ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ, ಗ್ರಾ.ಪಂ. ಅಧ್ಯಕ್ಷಣಿ ಮಲ್ಲವ್ವ ನಾಯ್ಕರ, ಮುಖಂಡರುಗಳಾದ ಪ್ರಮೋದ ಕೊಚೇರಿ, ಧನಶ್ರೀ ಸರದೇಸಾಯಿ, ಬಾಬಣ್ಣಾ ಪಾಟೀಲ, ಜ್ಯೋತಿಬಾ ರೆಮಾನೆ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ವೇಳೆ ಹಿರಿಯರಾದ ವೀರಭದ್ರಯ್ಯಾ ಚಿಕ್ಕಮಠ, ಕಿರಣ ಮೂಲಿಮನಿ ಸೇರಿದಂತೆ ಹಲವರಿದ್ದರು.