
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.28: ನಗರದಲ್ಲಿ ಇಂದು ಸಂಜೆ ಎಐಸಿಸಿ ನಾಯಕ ರಾಹುಲ್ ಗಾಂದಿ ಅವರಿಂದ ರೋಡ್ ಶೋ ಹಾಗೂ ಸ್ಟ್ರೀಟ್ ಕಾರ್ನರ್ ಮೀಟಿಂಗ್ ಹಮ್ಮಿಕೊಂಡಿದೆ.
ಸಂಜೆ 04.30 ಕ್ಕೆ ಪಕ್ಷದ ನಗರ ಮತ್ತು ಗ್ರಾಮೀಣ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಮಾಡಲು ಅವರು ವಿಮಾನ ನಿಲ್ದಾಣ ದಿಂದ ಟಿ.ಬಿ ಸ್ಯಾನಿಟೋರಿಯಂ ವರೆಗೆ ಕಾರಿನಲ್ಲಿ ಬಂದು ಅಲ್ಲಿಂದ
ಕೌಲ್ ಬಜಾರ್ ಮುಖ್ಯ ರಸ್ತೆ ಮೂಲಕ 1ನೇ ರೈಲ್ವೇ ಗೇಟ್ ವರೆಗೆ ಓಪನ್ ರೋಡ್ ಶೋ ನಡೆಸಲಿದ್ದಾರೆ.
ಅಲ್ಲಿಂದ ಮೋತಿ ಸರ್ಕಲ್ ವರಗೆ ಕಾರ್ ನಲ್ಲಿ ಬಂದು ಅಲ್ಲಿ ಸ್ಟ್ರೀಟ್ ಕಾರ್ನರ್ ಮೀಟಿಂಗ್ ಮಾಡಲಿದ್ದಾರೆ.
ಇವರೊಂದಿಗೆ ಪಕ್ಷದ ಮುಖಂಡ ಸುರ್ಜಿವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ .ಜಿಲ್ಲೆಯ ಅಭ್ಯರ್ಥಿಗಳು ವಿವಿಧ ಮುಖಂಡರು ಇರಲಿದ್ದಾರೆ.
ನಂತರ ರಾಯಲ್ ಸರ್ಕಲ್, ದುರುಗಮ್ಮ ದೇವಸ್ಥಾನ, ಎಸ್.ಪಿ ಸರ್ಕಲ್, ಇಂಫ್ರಂಟ್ರಿ ರಸ್ತೆ, ಸುದಾಕ್ರಾಸ್, ಹೊಸಪೇಟೆ – ಬಳ್ಳಾರಿ ಬೈಪಾಸ್, ಮಾರ್ಗವಾಗಿ ಜಿಂದಾಲ್ ವಿಮಾನ ನಿಲ್ದಾಣದಿಂದ ದೆಹಲಿಗೆ ತರೆರಳಲಿದ್ದಾರೆಂದು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜೆ.ಎಸ್.ಆಂಜನೇಯಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.