
ಸಿರವಾರ,ಮಾ.ಂ೩-ಕೊನೆ ಭಾಗಕ್ಕೆ ೩ ಅಡಿ ನೀರು ಸಂಜೆ ಒಳಗಾಗಿ ಕೊನೆ ಭಾಗಕ್ಕೆ ಬರದಿದ್ದರೆ, ಪಕ್ಷಾತೀತವಾಗಿ ಕರೆ ನೀಡಿದ ಹೋರಾಟದಲ್ಲಿ ಸಾವಿರಾರು ರೈತರೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರಿಗೆ ಹೇಳಿದರು.
ರಾಜಾ ವೆಂಕಟಪ್ಪ ನಾಯಕ ಅವರು ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಅವರನ್ನು ಭೇಟಿ ಮಾಡಿ ತುಂಗಭದ್ರಾ ಎಡದಂಡೆ ಕಾಲುವೆಯ ಮಾನವಿ ಮತ್ತು ಸಿರವಾರ ತಾಲೂಕಿನ ಕೆಳಭಾಗದ ರೈತರಿಗೆ ಸಮರ್ಪವಾಗಿ ನೀರು ಹರಿಸಬೇಕು. ಕಳೆದ ಒಂದು ತಿಂಗಳಿಂದ ಕೆಳಭಾಗದ ರೈತರಿಗೆ ನೀರು ಇಲ್ಲದೆ ಬೆಳೆದ ಬೆಳೆಗಳು ಸಂಪೂರ್ಣವಾಗಿ ಒಣಗಿಹೋಗಿವೆ. ಅಧಿಕಾರಿಗಳು ನೀರು ಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ.
ಭತ್ತ,ಮೆಣಸಿನಕಾಯಿ,ಹತ್ತಿ,ಮೆಕ್ಕೆ ತೆನೆ, ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ ಆದ್ದರಿಂದ ಅಧಿಕಾರಿಗಳು ಇಂದು ಸಂಜೆ ಒಳಗಾಗಿ ಕೆಳಭಾಗದ ರೈತರಿಗೆ ನೀರು ಒದಗಿಸುವಲ್ಲಿ ವಿಫಲವಾದರೆ ರೈತರ ಜೊತೆಗೂಡಿ ಉಗ್ರವಾದ ಹೋರಾಟವನ್ನು ಮಾಡುತ್ತೇನೆಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಮುಖ್ಯ ಅಭಿಯಂತರಾದ ದುರುಗಪ್ಪ,ಆದೀಕ್ಷ ಅಭಿಯಂತರಾದ ರಮೇಶ,ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸನಗೌಡ,ವಿಜಯಲಕ್ಷ್ಮಿ,ಸಹ ಕಾರ್ಯನಿರ್ವಾಹಕ ಅಧಿಕಾರಿಗಳಾದ ತಿಮ್ಮಪ್ಪ ಹಿರೇಕೊಟ್ನಕಲ,ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ, ನಾಗರಾಜ ಭೋಗಾವತಿ,ವೆಂಕಟೇಶ ನಾಯಕ ಮದ್ಲಾಪೂರ,ಶರಣಪ್ಲ ಗೌಡ ಮದ್ಲಾಪೂರ,ಅಮರೇಶ ಗೌಡ ಖಾರಾಬಾದಿನ್ನಿ,ರವಿ ಪಾಟೀಲ ಉಪಸ್ಥಿತರಿದ್ದರು