ಸಂಜೆವಾಣಿ ವರದಿ ಫಲಶೃತಿ: ಟ್ರಾನ್ಸ್‍ಫಾರ್ಮರ್ ದುರಸ್ಥಿ

ಹನೂರು:ಏ:03: ವಿದ್ಯುತ್ ಟ್ರಾನ್ಸ್‍ಫಾರಂ ದುರಸ್ಥಿಗೊಳಿಸದಿರುವದರ ಬಗ್ಗೆ ಸಂಜೆವಾಣಿ ದಿನಪತ್ರಿಕೆ ವರದಿ ಮಾಡಿದ ಮರು ದಿನವೇ ಸಂಬಂಧಪಟ್ಟ ಸೆಸ್ಕ್ ಅಧಿಕಾರಿಗಳು ಟಿ.ಸಿ.ದುರಸ್ಥಿ ಕಾರ್ಯ ಕೈಗೊಂಡು ರೈತರಿಗೆ ವಿದ್ಯುತ್‍ನ್ನು ಒದಗಿಸುವ ಮೂಲಕ ಪತ್ರಿಕಾ ವರದಿಗೆ ಸ್ಪಂದಿಸಿದ್ದಾರೆ.
ಹನೂರು ಆರ್,ಎಸ್.ದೊಡ್ಡಿ ಸಮೀಪದ ಪೊಲೀಸ್ ಕ್ವಾಟ್ರಸ್ ಬಳಿಯ ಹತ್ತಾರು ಜಮೀನುಗಳಿಗೆ ವಿದ್ಯುತ್‍ನ್ನು ಪೂರೈಕೆ ಮಾಡುತ್ತಿದ್ದ ವಿದ್ಯುತ್ ಟ್ರಾನ್ಸ್‍ಫಾರಂ ಕೆಟ್ಟು ನಿಂತ ಪರಿಣಾಮ ಇಲ್ಲಿನ ಜಮೀನುಗಳಲ್ಲಿ ಬೆಳೆಯಲಾಗಿದ್ದ ಬೆಳೆಗಳು ಒಣಗುತ್ತಿರುವುದು ಸೇರಿದಂತೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರವಾಗಿರುವ ಬಗ್ಗೆ ರೈತರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪತ್ರಿಕೆ ವರದಿ ಪ್ರಕಟಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಸ್ಪಂದಿಸಿರುವ ಕೊಳ್ಳೇಗಾಲ ಕಾರ್ಯನಿರ್ವಾಹಕ ಅಧಿಕಾರಿ ಪ್ರೀತಮ್, ಹನೂರು ಸಹಾಯಕ ಕಾರ್ಯಪಾಲಕ ಅಭಿಯಂತರ ಶಂಕರ್, ಸಹಾಯಕ ಇಂಜಿನಿಯರ್ ಭಾಸ್ಕರ್ ಅವರು ಕಾರ್ಯೋನ್ಮುಖರಾಗಿ ವಿದ್ಯುತ್ ಸೌಕರ್ಯವನ್ನು ಒದಗಿಸುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.