ಸಂಜೆವಾಣಿ ವರದಿಗೆ ಸ್ಪಂದನೆ ದೋತರಬಂಡಿ ಸೇತುವೆಗೆ ಶಾಸಕರ ದೌಡು

ಮಾನ್ವಿ:ಸೆ.16 ಕಳೆದ ಕೆಲವು ದಿನಗಳಿಂದ ತಾಲ್ಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಧೋತರಬಂಡಿ ಸೇತುವೆ ಕೊಚ್ಚಿ ಹೋಗಿದ್ದು ಸಂಜಾ ವಾಣಿ ಪತ್ರಿಕೆಯಲ್ಲಿ ವಿಶೇಷ ವರದಿಯಾಗಿತ್ತು
ವಿಶೇಷ ವರದಿಗೆ ಸ್ಪಂದಿಸಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ನಿನ್ನೆ ದೋತ್ರಬಂಡಿ ಸೇತುವೆಗೆ ದೌಡಾಯಿಸಿದರು.
ತಾಲ್ಲೂಕಿನ ದೋತರಬಂಡಿ ಗ್ರಾಮದ ಸೇತುವೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಆಗಮಿಸಿ ಮಳೆಗೆ ಕೊಚ್ಚಿ ಹೋದ ಸೇತುವೆಯನ್ನು ವೀಕ್ಷಣೆ ಮಾಡಿ ಅಲ್ಲಿದ್ದ ಜಿಲ್ಲಾ ಪಂಚಾಯಿತಿ ಎಂಜಿನಿಯರುಗಳಿಗೆ ತಾತ್ಕಾಲಿಕವಾಗಿ ಸೇತುವೆಯನ್ನು ದುರಸ್ತಿಗೊಳಿಸಲು ಅಂದಾಜು ಪತ್ರಿಕೆಯನ್ನು ತಯಾರಿಸಿ ಎಂದು ಹೇಳಿ ಬರುವ ಅಧಿವೇಶನದಲ್ಲಿ ಈ ಸೇತುವೆ ಬಗ್ಗೆ ಮಾತನಾಡಿ ಈ ಸೇತುವೆಯನ್ನು ಹೊಸದಾಗಿ ನಿರ್ಮಾಣ ಮಾಡಲು ಅದು ರಿಂದ ಆರು ಕೋಟಿ ಅನುದಾನವನ್ನು ಮಂಜೂರು ಮಾಡಿಸುತ್ತೇನೆ ಎಂದು ಹೇಳಿದರು.
ನಂತರ ತಡಕಲ್ ಕ್ಯಾಂಪ್ಗೆ ಹೋಗುವ ತೆರೆ ಹಳ್ಳ ಸೇತುವೆಯನ್ನು ದುರಸ್ತಿಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಮುಖಂಡರಾದ ರಾಜಾ ರಾಮಚಂದ್ರ ನಾಯಕ್, ಮಲ್ಲಿಕಾರ್ಜುನ ಗೌಡ ಬಲ್ಲಟಗಿ, ಖಲೀಲ್ ಖುರೇಷಿ, ಶ್ರೀಧರ ಸ್ವಾಮಿ, ಬಸನಗೌಡ ಉಟಕನೂರು, ಮಮ್ಮದ ಸ್ಮೈಲ್, ಪಾಷಾಸಾಬ್, ಗೋಪಾಲ ನಾಯಕ ಹರವಿ, ಲಕ್ಷ್ಮೀಪತಿ ತಡಕಲ್, ದೇವೇಗೌಡ ಉದ್ಬಾಳ, ಶೇಖರಪ್ಪ ಉಟಕನೂರು ಉಪಸ್ಥಿತರಿದ್ದರು.