ಸಂಜೆವಾಣಿ ವರದಿಗೆ ಫಲಶ್ರುತಿ:ಕೊನೆಗೂ ನೀರಿನ ಘಟಕ ರಿಪೇರಿ

ಗಬ್ಬೂರು,ಏ.೨೯- ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎನ್.ಗಣೇಕಲ್ ಗ್ರಾಮದಲ್ಲಿ ಕೆಟ್ಟು ನಿಂತ ಶುದ್ಧ ನೀರಿನ ಘಟಕ ಕ್ಕೆ ಕೊನೆಗೂ ರಿಪೇರಿ ಮಾಡಿಸಿ ನೀರು ಬಿಡುವ ಚಾಲನೆಗೆ ಮುಂದಾಗಿದ್ದಾರೆ.
’ಪಿಡಿಒ ನಿರ್ಲಕ್ಷ್ಯ:ಕೆಟ್ಟು ನಿಂತ ಘಟಕ’ ಶೀರ್ಷಿಕೆಯಡಿ ನಿನ್ನೆ ’ಸಂಜೆವಾಣಿ’ ವರದಿ ಪ್ರಕಟಿಸಿತ್ತು.ವರದಿಗೆ ಎಚ್ಚೆತ್ತುಕೊಂಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ರೇಣುಕಾ ಅವರು ಇಂದು ಕೆಟ್ಟು ನಿಂತ ನೀರಿನ ಘಟಕ ರಿಪೇರಿ ಮಾಡಿಸುವ ಮೂಲಕ ಚಾಲನೆ ನೀಡಿದರು.
ಕೆಟ್ಟು ನಿಂತಿದ್ದಕ್ಕೆ ನೀರು ಕುಡಿಯಲು ಬಹಳ ತೊಂದರೆ ಅನುಭವಿಸಿದ್ದರು ಸಂಜೆವಾಣಿಯಲ್ಲಿ ಪ್ರಕಟಗೊಂಡ ವರದಿ ಬೆನ್ನಲ್ಲೇ ಕಾಮಗಾರಿ ಆರಂಭಿಸಿದರು.ಈಗ ಕೆಲಸ ಪೂರ್ಣಗೊಂಡಿದ್ದು,ಖುಷಿಯಾಗಿದೆ ಎಂದು ಎನ್. ಗಣೇಕಲ್ ಗ್ರಾಮಸ್ಥರಾದ ತುಕರಾಮ,ನರಸಪ್ಪ, ಬಸವಲಿಂಗಪ್ಪ ತಿಳಿಸಿದ್ದಾರೆ.