ಸಂಜೆವಾಣಿ ಪತ್ರಿಕೆಯ ವಿನೂತನ ಕ್ಯಾಲೆಂಡರ್ ಬಿಡುಗಡೆ

ದಾವಣಗೆರೆ. ಡಿ.೩೧; ಪ್ರತಿಬಾರಿ ಸಂಜೆವಾಣಿ ಪತ್ರಿಕೆ ಹೊರತರುವ ಕ್ಯಾಲೆಂಡರ್ ವಿಶಿಷ್ಟ ಹಾಗೂ ವಿನೂತನವಾಗಿರುತ್ತದೆ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಹೇಳಿದರು.ಶಿರಮಗೊಂಡನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿಂದು ಸಂಜೆವಾಣಿ ಪತ್ರಿಕೆಯ ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.ಇಂದಿನ ಸುದ್ದಿಯನ್ನು ಇಂದೇ ಓದಿ ಎಂಬ ಮಾದರಿಯಲ್ಲಿ ಪತ್ರಿಕೆ ಮೂಡಿಬರುತ್ತಿದೆ.ಪತ್ರಿಕೆಯ ಬಳಗಕ್ಕೆ ಶುಭವಾಗಲಿ ಎಂದರು.ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಜಯ ಲಭಿಸಿಲ್ಲ.ಕೊರೊನಾ ಕಾರಣದಿಂದಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಈ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಿರೀಕ್ಷಿತ ಮಟ್ಟದಲ್ಲಿ ಜಯಪಡೆದಿಲ್ಲ.ಪ್ರಚಾರದ ಕೊರತೆಯೂ ಕಾರಣವಿರಬಹುದು.ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಮ್ಮ ನಿರೀಕ್ಷೆಯಂತೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ದಾವಣಗೆರೆ ಸಂಜೆವಾಣಿ ಬಳಗದ ಬಿ.ಎಂ.ಶಿವಕುಮಾರ್, ತೇಜಸ್ವಿನಿ ಪ್ರಕಾಶ್,ಶ್ರೀಧರ್,ಬಸವನಗೌಡ,ಹನುಮಂತು ಇದ್ದರು. Attachments area