ಸಂಜೆವಾಣಿ ಪತ್ರಿಕೆಯ ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು,ಮುಧೋಳ್ ಬಸ್ಟಾಂಡ್ ಸ್ವಚ್ಛವಾಯಿತು:ವಿದ್ಯುತ್ ಟಿಸಿಗಳಿಗೆ ಹೊಸ ಬೇಲಿ ಬಂತು

ಸೇಡಂ,ಜ,13: ತಾಲೂಕಿನ ಮುಧೋಳ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವಂತ ಬಸ್ಟಾಂಡ್ ಒಳಗಡೆ ಕಸದ ರಾಶಿ ಮತ್ತು ಪ್ರಯಾಣಿಕರಿಗೆ ಮೂತ್ರವಿಸರ್ಜನೆಯ ದುರ್ವಾಸನೆ ಕುರಿತು ಹಾಗೂ ವಿದ್ಯುತ್ ಟಿಸಿಗಳಿಂದ ಚಾಹ ಅಂಗಡಿ ಹಾಗೂ ಪಾನಿಪುರಿ ಬಂಡೆಗಳಿಂದ ಚಾಹ,ಆಹಾರ ಸೇವಿಸಲು ಬರುವ ಸಾರ್ವಜನಿಕರಿಗೆ ಅಪಾಯವಾಗುವ ಕುರಿತು ಡಿಸೆಂಬರ್ 28 ನೇ ತಾರೀಕು ಸಂಜೆವಾಣಿ ಪತ್ರಿಕೆ ವರದಿ ಮಾಡಲಾಗಿತ್ತು. ಸುದ್ದಿಗೆ ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಮುಧೋಳ ಬಸ್ ಸ್ಟ್ಯಾಂಡ್ ನಲ್ಲಿ ಕಸದ ರಾಶಿ ತೆಗೆದು ಸ್ವಚ್ಛ ಗೊಳಿಸಿದ್ದು ಹಾಗೂ ವಿದ್ಯುತ್ ನಿಗಮದ ಅಧಿಕಾರಿಗಳು ವಿದ್ಯುತ್ ಟಿಸಿಯ ಸುತ್ತಮುತ್ತ ಮುಳ್ಳು ಕಟ್ಟಿ ಸ್ವಚ್ಛಗೊಳಿಸಿ ಮತ್ತು ಸುರಕ್ಷತೆಯ ಹೊಸ ತಂತಿ ಬೇಲಿ ನಿರ್ಮಿಸಿ ಕೊಟ್ಟಿರುವಂತಹ ವಿದ್ಯುತ್ ನಿಗಮಕೂ ಹಾಗೂ ಪತ್ರಿಕೆಗೂ ಗ್ರಾಮಸ್ಥರು ಧನ್ಯವಾದಗಳು ತಿಳಿಸಿದ್ದಾರೆ.

ಸಂಜೆವಾಣಿ ಪತ್ರಿಕಾ ವರದಿಗೆ ಎಚ್ಚೆತ್ತುಕೊಂಡು ಕೆಲಸ ಮಾಡಿದ ಬಸ್ಟಾಂಡ್ ಅಧಿಕಾರಿಗಳಿಗೂ ಹಾಗೂ ವಿದ್ಯುತ್ ನಿಗಮ ಅಧಿಕಾರಿಗಳಿಗೂ ಸಂಜೆವಾಣಿ ಪತ್ರಿಕೆಗೂ ಅನಂತ ಅನಂತ ಧನ್ಯವಾದಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ವಿದ್ಯುತ್ ಟಿಸಿಯ ಪಕ್ಕದಲ್ಲಿ ಚಹಾ ಅಂಗಡಿ ಹಾಗೂ ಪಾನಿಪುರಿ ಬಂಡೆಗಳಿಗೆ ಅನುಮತಿ ನೀಡಬಾರದು.
ಮನೋಹರ್ ಮುಧೋಳ ಗ್ರಾಮಸ್ಥ.