ಸಂಜೆವಾಣಿ ಪತ್ರಿಕೆಯ ದಾವಣಗೆರೆ ಆವೃತ್ತಿಯ ಕ್ಯಾಲೆಂಡರ್ ಬಿಡುಗಡೆ ಮಾಡಿದ ಶಾಸಕ ಶಾಮನೂರು ಶಿವಶಂಕರಪ್ಪ


ಸಂಜೆವಾಣಿ ವಾರ್ತೆ
ದಾವಣಗೆರೆ. ಜ.೨; ಇಂದಿನ‌ಸುದ್ದಿಯನ್ನು ಇಂದೇ ಓದಿ ಎಂಬ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಸಂಜೆವಾಣಿ ಪತ್ರಿಕೆಯಲ್ಲಿ ಎಲ್ಲಾ ಸುದ್ದಿಗಳು ಉತ್ತಮವಾಗಿ ಬರುತ್ತಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಬಣ್ಣಿಸಿದರು.ದಾವಣಗೆರೆಯ ತಮ್ಮ ಗೃಹ ಕಚೇರಿಯಲ್ಲಿ ಸಂಜೆವಾಣಿ ದಾವಣಗೆರೆ ಆವೃತ್ತಿಯ ಕ್ಯಾಲೆಂಡರ್ ಬಿಡುಗಡೆ ಮಾಡಿ ಶುಭಹಾರೈಸಿದ ಅವರು ಸಂಜೆವಾಣಿ ಪತ್ರಿಕೆ ಅಂದಿನ ಸುದ್ದಿಯನ್ನು ಅಂದೇ ಪ್ರಕಟಿಸಿ ಬಿತ್ತರಿಸುತ್ತಾ ಬಂದಿದೆ ಇದು ಶ್ರಮದ ಕೆಲಸ ಆದರೂ ಉತ್ತಮವಾಗಿ ಪ್ರಕಟಗೊಳ್ಳುತ್ತಿದೆ ಎಂದರು.ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮನೆಗೆ ಬಂದಾಗ ಆ ಕಾರ್ಯಕ್ರಮದ ಸುದ್ದಿ ಆಗಲೇ ಸಂಜೆವಾಣಿ ಪತ್ರಿಕೆಯಲ್ಲಿ ಮೂಡಿಬಂದಿರುತ್ತದೆ ಅಂದಿನ‌ಸುದ್ದಿ ಅಂದೇ ಓದುತ್ತೇವೆ ಇತ್ತೀಚೆಗೆ ಆನ್ ಲೈನ್ ನಲ್ಲಿ ಪತ್ರಿಕೆಯಲ್ಲಿ ಕ್ಷಣಮಾತ್ರದಲ್ಲೇ ಸುದ್ದಿ ಪ್ರಕಟವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ವಿನಾಯಕ ಪೈಲ್ವಾನ್,ಪಾಲಿಕೆ ಆಯುಕ್ತರಾದ ರೇಣುಕಾ,ಪಾಲಿಕೆ ಸದಸ್ಯ ಎ..ಬಿ ರಹೀಂ,ಮುಖಂಡರಾದ ಮಂಜುನಾಥ್ ಇಟ್ಟಿಗುಡಿ,ಸಂಜೆವಾಣಿ ದಾವಣಗೆರೆ ಆವೃತ್ತಿಯ ಬಿ.ಎಂ ಶಿವಕುಮಾರ್, ತೇಜಸ್ವಿನಿ‌ಪ್ರಕಾಶ್ ಮತ್ತಿತರರಿದ್ದರು.