ಸಂಜೆವಾಣಿ ದೀಪಾವಳಿ ವಿಶೇಷಾಂಕ ಬಿಡುಗಡೆಗೊಳಿಸಿದ ಸಚಿವ ಚವ್ಹಾಣ

(ಸಂಜೆವಾಣಿ ವಾರ್ತೆ)
ಔರಾದ :ನ.6: ಪಟ್ಟಣದ ಶ್ರೀ ಅಮರೇಶ್ವರ ಮಂದಿರದಲ್ಲಿ ಮಾನ್ಯ ಪಶು ಸಂಗೋಪನಾ ಹಾಗೂ ಬೀದರ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಇಂದಿನ ಸುದ್ದಿಗಳನ್ನು ಇಂದೆ ರಾಜ್ಯದ ಜನತೆಗೆ ಸುದ್ದಿಗಳನ್ನು ಉಣಬಡಿಸುವ ಅತ್ಯಂತ ನಿಸ್ಪಕ್ಷಪಾತ ಪತ್ರಿಕೆ ಸಂಜೆವಾಣಿ ದಿನಪತ್ರಿಕೆಯ ದೀಪಾವಳಿ ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ.ಕಲ್ಲಪ್ಪ ಉಪ್ಪೆ, ತಹಸಿಲ್ದಾರ್ ಮಲಶೆಟ್ಟಿ ಚಿದ್ರೆ, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ಪೆÇೀಕಲವಾರ್, ಶರಣಪ್ಪ ಪಂಚಾಕ್ಷರಿ, ಧೊಂಡಿಬಾ ನರೋಟೆ, ಬಸವರಾಜ ದೇಶಮುಖ, ಪ್ರಕಾಶ ಘೂಳೆ, ಪ್ರಾಣಿ ದಯಾ ಸಂಘದ ಸದಸ್ಯರಾದ ಬಂಡೆಪ್ಪ ಕಂಟೆ, ಶಿವಾಜಿ ಕಾಳೆ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ತಾಲ್ಲೂಕು ವರದಿಗಾರ ಅಮರಸ್ವಾಮಿ ಸ್ಥಾವರಮಠ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.