ಸಂಜೆವಾಣಿ ಕ್ಯಾಲೆಂಡರ್ ಬಿಡುಗಡೆ

ಚಿಂಚೋಳಿ:ಡಿ.29: ಪಟ್ಟಣದ ಚಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಸಂಜೆವಾಣಿ ಪತ್ರಿಕೆಯ 2024ನೇ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಚಿಂಚೋಳಿಯ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಬಿಡುಗಡೆ ಮಾಡಿ ಮಾತನಾಡಿ ಪ್ರತಿಯೊಂದು ಯುವಕರು ಯುವತಿಯರು ಪತ್ರಿಕೆ ಕಡ್ಡಾಯವಾಗಿ ಓದಬೇಕು ಏಕೆಂದರೆ ಪತ್ರಿಕೆಯಲ್ಲಿ ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ತಾಲೂಕಿನಲ್ಲಿ ಆಗುಹೋಗುಗಳ ವಿಷಯಗಳ ಬಗ್ಗೆ ಹಾಗೂ ಪತ್ರಿಕೆಯಲ್ಲಿ ಕ್ರೀಡಾ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ಓದಿಕೊಳ್ಳಬೇಕು ಅದೇ ರೀತಿ ವಿದ್ಯಾರ್ಥಿಗಳು ಈಗಿನ ಯುಗದಲ್ಲಿ ಬೆಳಗ್ಗೆ ಆದರೆ ಸಾಕು ಮೊಬೈಲ್ ನಲ್ಲೆ ಕಾಲ ಕಳೆದಿದ್ದಾರೆ ಅದಕ್ಕಾಗಿ ವಿದ್ಯಾರ್ಥಿಗಳು ಪತ್ರಿಕೆಯನ್ನು ಓದಬೇಕು ಮತ್ತು ಯಾವ ಪತ್ರಿಕೆಯವರು ಕೂಡ ಯಾವುದೇ ಒಂದು ಅಧಿಕಾರಿಗಳಲ್ಲಿ ಪರವಾಗಿ ಬರೀಬಾರದು ಮತ್ತು ಇಂದಿನ ಯುವಕರು ಪತ್ರಿಕೆ ಓದುವ ಅಭ್ಯಾಸವನ್ನು ಮಾಡಿಕೊಂಡು ಅದರ ಜೊತೆ ನಿಮ್ಮ ವಿದ್ಯಾಭ್ಯಾಸವು ಕೂಡ ಓದಿ ಮುಂಬರುವ ದಿನಗಳಲ್ಲಿ ತಾವು ಕೂಡ ಒಳ್ಳೆಯ ಅಧಿಕಾರಿಗಳ ಆಗಬೇಕೆಂದು ಹೇಳಿದರು ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಕ ಅಧಿಕಾರಿಗಳಾದ ಶಂಕರ್ ರಾಠೋಡ್, ಸಿಪಿಐ ಗಳದ ಅಂಬಾರಾಯ ಕಮಾನಮನಿ, ಶಿಶು ಅಭಿವೃದ್ಧಿ ಅಧಿಕಾರಿಗಳಾದ ಗುರುಪ್ರಸಾದ್ ಕವಿತಾಳ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ್ ಪಾಲಾಮೂರ್, ಅಕ್ಷರ ದಾಸೋಹದ ಅಧಿಕಾರಿಗಳಾದ ಜಯಪ್ಪ ಚಪ್ಪಲ್, ಚಿಂಚೋಳಿ ಹಿರಿಯ ಮುಖಂಡರಾದ ಗೋಪಾಲರಾವ್ ಕಟ್ಟಿಮನಿ, ಕೆಎಂ ಬಾರಿ, ಕಿಷ್ಟಪ್ಪ ಪೂಜಾರಿ ಮಿರಿಯಾಣ, ಶರಣು ಪಾಟೀಲ್ ಮೋತಕಪಲ್ಲಿ, ಸಂಜೆವಾಣಿ ಪತ್ರಿಕೆಯ ವರದಿಗಾರರಾದ ಸಂಜೀವ ಕುಮಾರ್ ಪಾಟೀಲ್, ಇದ್ದರು