ಸಂಜೆಯೊಳಗೆ ನೀರು
ಹೊಸ ಸೇತುವೆಗೆ 400 ಕೋಟಿ ಬೇಕು: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.02: ಪೈಪೋಟಿಗೆ ಬಿದ್ದವರಂತೆ  ತಾಲೂಕಿನ ಮೋಕಾ ಬಳಿಯ ಎಲ್ ಎಲ್ ಸಿ ಕಾಲುವೆಯ  ದುರಸ್ಥಿ ಸ್ಥಳದಲ್ಲಿ ‌ ಶಾಸಕ ಸಚಿವರು ರಾತ್ರಿ ಮೊಕ್ಕಾಂ‌ ಹೂಡಿದ್ದರು.
ಹಗರಿ ನದಿಯಲ್ಲಿಯೇ ಇಂದಿನ‌ ಸ್ನಾನ, ಪೂಜೆ ಮೊದಲಾದ ನಿತ್ಯ ಕರ್ಮಗಳನ್ನು  ಮುಗಿಸಿದ ಸಚಿವ ಶ್ರೀರಾಮುಲು ಅವರು ಸ್ಥಳಕ್ಕೆ ಭೇಟಿ‌ ನೀಡಿದ ಮಾಧ್ಯಮಗಳೊಂದಿಗೆ ಮಾತನಾಡಿ, ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರೋ ಕಾಲುವೆಯ ಪಿಲ್ಲರ್ ಕುಸಿದಿದೆ.
ನದಿಯ ಭಾಗದಲ್ಲಿ ಮಣ್ಣು ತೆಗೆದು ಪಿಲ್ಲರ್ ರೆಡಿ ಮಾಡುತ್ತಿದೆ. ಇದು  1953ರಲ್ಲಿ ನಿರ್ಮಿಸಿದ ಸೇತುವೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅತಿಹೆಚ್ಚು ನದಿಯಲ್ಲಿ ನೀರು ಬಂದಿರುವುದು ಅವಘಡಕ್ಕೆ ಕಾರಣವಾಗಿದೆ. ನದಿ ಭಾಗವೂ ಒತ್ತುವಾರಿಯಾಗಿದೆ. ಇದರಿಂದ ನೀರಿನ‌ಒತ್ತಡ ಹೆಚ್ಚಿದೆ. 15ನೇ ಪಿಲ್ಲರ್ ಕೊಚ್ಚಿ ಹೋಗಿದೆ.
ಕಳೆದ 23 ದಿನದಿಂದ ಕಾಲುವೆಗೆ  ನೀರು ಬಂದಾಗಿದೆ. ನೂತನ ಸೇತುವೆಗೆ 400 ಕೋಟಿ ಅನುದಾನಬೇಕು. ಶೇ 70 ಆಂದ್ರ ಸರಕಾರ ಕೊಡಬೇಕು, ಶೇ 30 ಅನುದಾನ ರಾಜ್ಯ ಕೊಡಬೇಕು. ಕಾಲೂವೆಗೆ ನೀರು ಬಿಡದೇ ಇದ್ರೇ ಎರಡು ರಾಜ್ಯದ  ಲಕ್ಷಾಂತರ  ಎಕರೆ ಬೆಳೆ ಒಣಗುವ ಸಾಧ್ಯತೆ ಇದೆ. ಬರುವ ಮೂರು ದಿನದಲ್ಲಿ ನೀರು ಬಾರದಿದ್ದರೆ ಬೆಳೆ ಒಣಗುತ್ತದೆ. ಅದಕ್ಕಾಗಿ ಸ್ಥಳದಲ್ಲಿ ಮೊಕ್ಕಾಂ ಹೂಡಿ
ಅಧಿಕಾರಿಗಳಿಗೆ  ಒತ್ತಡ ಮತ್ತು ಸಹಕಾರ ನೀಡುತ್ತಿದೆ.
ಇಂದು  ಸಂಜೆ ಒಳಗೆ ನೀರು ಬಿಡುತ್ತೇವೆ. ನೀರು ಬಿಟ್ಟ ಮೇಲೆ ನಾವು ಇಲ್ಲಿಂದ ಹೋಗುತ್ತೇವೆ ಎಂದರು.
 ಈ ವಿಷಯದಲ್ಲಿ  ರಾಜಕಾರಣ ಮಾಡುವ ಅಗತ್ಯ ನನಗೆ ಇಲ್ಲ ಜಿಲ್ಲಾ ಉಸ್ತುವಾರಿ ಸಚಿವನಾಗಿ ನನ್ನ ಕರ್ತವ್ಯ ಮಾಡುತ್ತಿರುವೆ ಎಂದರು.