ಸಂಜೀವಿನಿ ಯೋಜನೆಯಡಿ ಅರಿವು ಕಾರ್ಯಕ್ರಮ ಉದ್ಘಾಟನೆ

ಕೋಲಾರ,ಜ.೯: ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳ ನಿಯಮಿತ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ಮತ್ತು ತಾಲ್ಲೂಕಿನ ಗಾಂಧಿನಗರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನ ಕೋಚಿಮುಲ್ ನಿರ್ದೇಶಕ ಡಿ.ವಿ. ಹರೀಶ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳನ್ನು ಸ್ಥಾಪನೆ ಮಾಡುವುದರಿಂದ ಸಂಘಗಳು ಉತ್ತಮವಾಗಿ ಬೆಳೆಯುತ್ತದೆಂದು ಹಾಗೂ ಈ ಯೋಜನೆಗೆ ಸಂಘವನ್ನು ಅಳವಡಿಸಿ ಮೊದಲ ಅದ್ಯತೆಗೆ ೧೦ ಪಲಾನುಭವಿಗಳಿಗೆ ರಾಸಗುಳನ್ನು ಖರೀದಿಸಲು ಸುತ್ತು ನಿಧಿಯಾಗಿ ರೂ.೨೫೦೦೦೦/-ಗಳ ಚೆಕ್ ವಿತರಣೆ ಮಾಡಿದರು. ಜೊತೆಗೆ ಗುಣಮಟ್ಟ ಹಾಲು ಶೇಖರಣೆಗೆ ಒತ್ತು ನೀಡಲು ತಿಳಿಸಿದರು.
ಮಹಿಳಾ ನಂದಿನಿ ಸ್ವ-ಸಹಾಯ ಸಂಘಗಳ ಬಲವರ್ಧನೆಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ನೀಡುವುದರ ಮೂಲಕ ಹಾಲು ಉತ್ಪಾದಕರ ಮತ್ತು ಸಂಘಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆಂದು ತಿಳಿಸಿದರು. ತಾಲ್ಲೂಕಿನಲ್ಲಿ ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳನ್ನು ಮಾತ್ರ ಸ್ಥಾಪಿಸಲಾಗುವುದು, ಮಹಿಳಾ ಸಂಘಗಳನ್ನು ಪ್ರಾರಂಭಿಸುವುದರಿಂದ ಪ್ರತಿ ಸಂಘಕ್ಕೆ ೩ ರಿಂದ ೪ ಲಕ್ಷ ಅನುಧಾನ ಬರುತ್ತದೆ.
ತಾಲ್ಲೂಕಿನ ಉಪವ್ಯಸ್ಥಾಪಕ ಡಾ.ಎ.ಸಿ. ಶ್ರೀನಿವಾಸಗೌಡರವರು ಮಾತನಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಸ್ಥಾಪನೆಯಿಂದ ಅರ್ಥಿಕವಾಗಿ ಹಿಂದುಳಿದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಹಕಾರಿಯಾಗುತ್ತದೆಂದು ತಿಳಿಸಿದರು. ಹಾಗೂ ವೈಜ್ಞಾನಿಕ ಪದ್ಧತಿಯಲ್ಲಿ ರಾಸುಗಳ ಸಕಾಣಿಕೆ ಮಾಡುವುದರಿಂದ ಹಾಲು ಶೇಖರಣೆ, ಹಾಲಿ ಗುಣಮಟ್ಟ ಉತ್ತಮವಾಗುತ್ತದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಸ್ಟೆಪ್ ವಿಭಾಗದ ಉಪ ವ್ಯವಸ್ಥಾಪಕಿ ವಿಜಯಲಕ್ಷ್ಮೀ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಮುಖಂಡರಾದ ಗೀತಾ, ವಿಸ್ತರಣಾಧಿಕಾರಿಗಳಾದ ವಿ.ರಾಜಬಾಬು, ಅಣ್ಣಪ್ಪ ತಡಕೋಡ, ನಳಿನ, ಸಿಬ್ಬಂದಿ ವರ್ಗ ಹಾಗೂ ಹಾಲು ಉತ್ಪಾದಕರು ಉಪಸ್ಥಿತಿದ್ದರು.