ಸಂಜೀವಿನಿ ಪಶುಸಖಿಯರಿಗೆ ಕಿಟ್ ವಿತರಣೆ, ತರಬೇತಿ ಕಾರ್ಯಗಾರ

ಲಿಂಗಸೂಗೂರುಸೆ.೧೦ – ಪಟ್ಟಣದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್ ರಾಯಚೂರು ತಾಲೂಕು ಪಂಚಾಯತ್ ಲಿಂಗಸಗೂರು ಪಶುವೈಧ್ಯಕೀಯ ಸೇವಾ ಇಲಾಖೆಯ ಹಾಗೂ ಎನ್‌ಆರ್ ಎಲ್‌ಎಂ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಪಶುಸಖಿಯರಿಗೆ ಜಾನುವಾರಗಳಲ್ಲಿ ಅನುಸರಿಸಬೇಕಾದ ಪ್ರಥಮ ಚಿಕಿತ್ಸೆ ಪದ್ಧತಿಗಳ ಕುರಿತು ಕಾರ್ಯಾಗಾರ ಮತ್ತು ಪಶುಸಖಿ ಕಿಟ್ ವಿತರಣೆ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕ ಪಂಚಾಯತ ಕಾರ್ಯನಿರ್ವಾಹಕಾಧಿಕಾರಿ ಅಮರೇಶ ಯಾದವ್ ಅವರು ಪ್ರತಿದಿನ ಸಂಜೀವಿನಿ ಪಶುಸಖಿಗಳು ತಮ್ಮ ದಿನಾಚರಿಯನ್ನು ಕಡ್ಡಾಯವಾಗಿ ಬರೆದು ಇಲಾಖೆಯ ಸೌಲಭ್ಯಗಳನ್ನು ಗ್ರಾಮಮಟ್ಟದಲ್ಲಿ ತಲುಪಿಸುವ ನಿಟ್ಟಿನಲ್ಲಿ ಜಾನುವಾರು ಸೇವೆಯನ್ನು ಆಸಕ್ತಿಯಿಂದ ಮಾಡಬೇಕೆಂದು ಎಂದರು.
ತಾಲೂಕ ಪಶು ಸಹಾಯಕ ನಿರ್ದೇಶಕರು ಡಾ. ರಾಚಪ್ಪ ಪ್ರಸ್ತಾವಿಕ ಮಾತನಾಡಿ ತಾಲೂಕಿನ ಎಲ್ಲಾ ಸಂಜೀವಿನಿ ಒಕ್ಕೂಟದ ಪಶುಸಖಿಗಳು ಇಲಾಖೆಯ ಮಾರ್ಗಸೂಚಿ ತಕ್ಕಂತೆ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಪಶು ಸಂಗೋಪನೆ ಇಲಾಖೆಯ ಪ್ರಾಮುಖ್ಯತೆ ತಿಳಿಸುತ್ತಾ ಪಶು ಸಖಿಯರು ನಿರ್ವಹಿಸಬೇಕಾದ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಎಲ್ಲಾ ಪಶುಸಖಿಯರಿಗೆ ಮಾಹಿತಿ ಪುಸ್ತಕ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಮಾತನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಸ್ತರಣೆ ಕೇಂದ್ರದ ಮುಖ್ಯಸ್ಥರು ವಾಣಿಶ್ರೀ ಅವರು ಪಶು ಸಂಗೋಪನೆಯಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿದರು.
ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪ್ರಭು ಅವರು ಜಾನುವಾರು ತಳಿಗಳ ಕುರಿತು ಮಾಹಿತಿ ನೀಡಿದರು. ಡಾ. ಪ್ರಶಾಂತ ಪ್ರಥಮ ಚಿಕಿತ್ಸೆ ಕುರಿತು ಡಾ. ದೇವರಾಜ ಸಂರಕ್ಷಣಾ ವಿಧಾನ ಕುರಿತು ತರಬೇತಿಯಲ್ಲಿ ತಿಳಿಸಿದರು, ತಾ ಪಂ.ಸಹಾಯಕ ನಿರ್ದೇಶಕರು(ಪಂ.ರಾ) ಮಂಜುನಾಥ ಜಾವೂರು, ಜಿಲ್ಲಾ ವ್ಯವಸ್ಥಾಪಕರು ಶ್ರೀಕಾಂತ ಬನ್ನಿಗೋಳ ಇವರು ಮಾತನಾಡಿದರು.
ಪಶು ವೈದ್ಯಾಧಿಕಾರಿಗಳು, ಟಿಪಿಎಂ ಈರಪ್ಪ, ಬಿಎಂ-ಕೃಷಿ ಮಲ್ಲಪ್ಪ ಗಾಳಪೂಜಿ, ಸ್ಕಿಲ್ ಸಿಎಸ್ ಬಸವರಾಜ ಕಟ್ಟಿಮನಿ, ಸಿಎಸ್ ಹೊನ್ನಮ್ಮ, ರೇಣುಕಾ ಹಾಗೂ ಎಲ್ಲಾ ಪಶುಸಖಿಯವರು ಭಾಗವಹಿಸಿದ್ದರು.