ಸಂಜೀವಿನಿ ಟ್ರಸ್ಟ್ ನಿಂದ ಪರಿಸರ ದಿನಾಚರಣೆ

ಹಿರಿಯೂರು, ಜೂನ್ 06::ಹಿರಿಯೂರಿನ ಸಂಜೀವಿನಿ ಜೀವರಕ್ಷಕ ಟ್ರಸ್ಟ್ ವತಿಯಿಂದ ನಗರಸಭೆ ಸದಸ್ಯರಾದ ಗುಂಡೇಶ್ ಕುಮಾರ್ ರವರ ನೇತೃತ್ವದಲ್ಲಿ  ಪರಿಸರ ದಿನಾಚರಣೆ ಅಂಗವಾಗಿ  ಸಸಿ ನೆಡುವ  ಕಾರ್ಯಕ್ರಮ ಆಚರಿಸಿದರು .   ಈ ಕಾರ್ಯಕ್ರಮದಲ್ಲಿ  ನಗರಸಭೆಯ ಅಧ್ಯಕ್ಷರಾದ ಶಂಸುನ್ನೀಸಾ, ಉಪಾಧ್ಯಕ್ಷರಾದ ಬಿ.ಎನ್ ಪ್ರಕಾಶ್,  ಪೌರಾಯುಕ್ತರಾದ  ಲೀಲಾವತಿ  ಕಂದಾಯ ಅಧಿಕಾರಿ ಜಯಣ್ಣ,ಮುಖಂಡರಾದ  ಪಿ.ಎಸ್.ಸಾದತ್ ಉಲ್ಲಾ, ಸದಸ್ಯರಾದ ಸಮೀ ಉಲ್ಲಾ , ಟ್ರಸ್ಟ್ ಅಧ್ಯಕ್ಷರಾದ ಧನುಷ್ ಎಸ್,  ಉಪಾಧ್ಯಕ್ಷರಾದ ಗಿರೀಶ್, ಪ್ರಧಾನ ಕಾರ್ಯದರ್ಶಿ ರಕ್ಷಿತ್, ಕಾರ್ಯದರ್ಶಿ ನಾಗಚೈತನ್ಯ ಪಾಲ್ಗೊಂಡಿದ್ದರು.