ಸಂಜೀವರಾಯನಕೋಟೆಯಲ್ಲಿ ಹುಲ್ಲಿನ‌ ಬಣವೆಗಳು ಭಸ್ಮ

ಬಳ್ಳಾರಿ ಮಾ 25 : ತಾಲೂಕಿನ ಸಂಜೀವರಾಯನಕೋಟೆ ಗ್ರಾಮದಲ್ಲಿ ಇಂದು ಸಂಜೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ 50 ಕ್ಕೂ ಹೆಚ್ಚು ಬಣವೆಗಳು ಸುಟ್ಟು ಭಸ್ಮವಾಗಿವೆ.

ರೈತರು ಗ್ರಾಮದ ಹೊರ ವಲಯದಲ್ಲಿ ತಮ್ಮ‌ ಜಾನುವಾರುಗಳಿಗಾಗಿ ಸಂಗ್ರಹಿಸಿ‌ ಇಡಲಾಗಿದ್ದ ಹುಲ್ಲಿನ‌ ಬಣವಿಗೆ ಯಾರೋ ದಾರಿ ಹೋಕರು ಬೀಡಿ ಸೇದಿ ಎಸದಿರಬೇಕು. ಇದರಿಂದ ಬೆಂಕಿಹೊತ್ತಿಕೊಂಡು ಈ‌ ಮೊದಲೇ ಬಿಸಿಲಿಗೆ ಒಣಗಿದ್ದ ಹುಲ್ಲಿನ ಬಣವೆಗಳಿಗೆ ಬೆಂಕಿ ಆವರಿಸಿ ಕ್ಷಣಾರ್ಧಲ್ಲಿ ಎಲ್ಲಡೆ ವ್ಯಾಪಿಸಿತು.
ರೈತರು ತಮ್ಮ ಬಣವೆಗಳು ಬೆಂಕಿಗೆ ಆಹುತಿಯಾಗುವುದನ್ನು ಕಂಡು ಮರುಗಿದರು. ಗ್ರಾಮದಲ್ಲಿದ್ದ ನೀರಿನ‌ ಟ್ಯಾಂಕರ್ ಮೂಲಕ ಒಂದಿಷ್ಟು ವ್ಯಾಪಿಸುವುದನ್ನು ತಡೆಯಲು ಪ್ರಯತ್ನಿಸಿದರು.
ಬಳ್ಳಾರಿ ನಗರದಿಂದ ಅಗ್ನಿ ಶಾಮಕವಾಹನ ಬರುವ ವೇಳೆಗೆ ಬಹುತೇಕ ಹುಲ್ಲಿನ ಬಣವೆಗಳು ಸುಟ್ಟಿದ್ದವು. ವ್ಯಾಪಿಸುವುದನ್ನು ತಡೆಯಲಾಯಿತು.