ಸಂಜೀವರಾಯನಕೋಟೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ

ಬಳ್ಳಾರಿ ಜ 12 : ತಾಲೂಕಿನ‌ ಸಂಜೀವರಾಯನಕೋಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ‌ ಇಂದು ಸ್ವಾಮಿ ವಿವೇಕಾನಂದರ 158 ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಅವರು, 1893ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಭಾರತದ ಉತ್ಕೃಷ್ಟ ಹಿಂದೂ ಸಂಸ್ಕೃತಿಯನ್ನು ತಮ್ಮ ಭಾಷಣದ ಮೂಲಕ ವಿಶ್ವಕ್ಕೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು ಎಂದು ಬಣ್ಣಿಸಿದರು.
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ಮಲಗದಿರಿ ಎಂದು ಯುವ ಸಮೂಹವನ್ನು ಪ್ರೇರೇಪಿಸಿದರು.
ಶಾಲೆಯ ಬಡ್ತಿ ಮುಖ್ಯ ಗುರುಗಳಾದ ಕೃಷ್ಣ ವೇಣಿ ಅಧ್ಯಕ್ಷತೆ ವಹಿಸಿದ್ದರು. ಪಿ.ಡಿ.ಓ ಸುಮಲತ, ಮಿಂಚೇರಿ ಶಾಲೆಯ ಮುಖ್ಯ ಗುರು ಓಬಳೇಶಪ್ಪ‌,ಬಸವಪ್ರಕಾಶ, ಶಿ.ಸಂಘದ ಖಜಾಂಚಿ ಮೃತ್ಯುಂಜಯ, ಸಿ.ಆರ್. ಪಿ.ಗಳಾದ ಬಸವರಾಜ, ತಿಮ್ಮಾರೆಡ್ಡಿ,ಕುಭೇರ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.