ಸಂಜೀವರಾಯನಕೋಟೆಯಲ್ಲಿ: ವಾಲ್ಮೀಕಿ ಜಯಂತಿ

ಬಳ್ಳಾರಿ ಅ 31 : ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರವು ದೇಶ ವಿದೇಶಗಳಿಗೆ ಮಾದರಿ ಎಂದು ತಮ್ಮ ರಾಮಾಯಣ ಮ‌ಹಾಕಾವ್ಯದಲ್ಲಿ ಪ್ರಸ್ತುತ ಪಡಿಸಿದವರು ಶ್ರೀ ವಾಲ್ಮೀಕಿ ಮಹರ್ಷಿ ಗಳೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆಯ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಅಭಿಪ್ರಾಯ ಪಟ್ಪರು. ಅವರು ತಾಲೂಕಿನ‌
ಸಂಜೀವರಾಯನಕೋಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ‌ ಇಂದು ಹಮ್ಮಿಕೊಂಡಿದ್ದ
ಕೊಂಡಿದ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡು ಮೇಲಿನಂತೆ ಹೇಳಿದರು. ಶಾಲೆಯ ಬಡ್ತಿ ಮುಖ್ಯ ಗುರು ಕೆ.ಕೃಷ್ಣವೇಣಿ ಹಾಗೂ ಶಿಕ್ಷಕರ ವೃಂದ ಉಪಸ್ಥಿತರಿದ್ದರು.