ಸಂಜೀವರಾಯನಕೋಟೆಯಲ್ಲಿ: ರಾಜ್ಯೋತ್ಸವ

ಬಳ್ಳಾರಿ ನ 01 : ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ರಾಷ್ಟ್ರಕವಿ ಕುವೆಂಪುರವರ ವಾಣಿ ಯಂತೆ ನಾವೆಲ್ಲರೂ ಕನ್ನಡ ನಾಡಿನ ನೆಲ,ಜಲ,ಭಾಷೆ ಯನ್ನು ಗೌರವಿ,ರಕ್ಷಿಸುವ ಜವಾಬ್ದಾರಿ ಇದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು. ಅವರು ತಾಲೂಕಿನ ಸಂಜೀವರಾಯನಕೋಟೆಯ ಸ.ಹಿ.ಪ್ರಾ.ಶಾಲೆಯಲ್ಲಿ ಹಮ್ಮಿಕೊಂಡಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಲೆಯ ಬಡ್ತಿ ಮುಖ್ಯ ಗುರು ಧ್ವಜಾರೋಹಣ ನೆರವೇರಿಸಿದರು.ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.