ಸಂಜೀವರಾಯನಕೋಟೆಯಲ್ಲಿ ಬಿಜೆಪಿ ಕಾಂಗ್ರೆಸ್ ಘರ್ಷಣೆ ಓರ್ವನಿಗೆ ಗಾಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.10: ತಾಲೂಕಿನ ಸಂಜೀವರಾಯನಕೋಟೆಯಲ್ಲಿ ಮತದಾರರಿಗೆ ಮತಗಟ್ಟೆ ಮುಂದೆ ಮತ  ಚಲಾಯಿಸುವಂತೆ ಹೇಳುವ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಅದು ಘರ್ಷಣೆಗೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತನ ತಲೆಗೆ ಪೆಟ್ಟಾಗಿರುವ ಘಟನೆ ನಡೆದಿದೆ.
ಬಿಜೆಪಿ ಮುಖಂಡ ಸೋಮನಗೌಡ ಮತ್ತು ಹೇಮಣ್ಣ ಮತ್ತವರ ಬೆಂಬಲಿಗರು ಕಾಂಗ್ರೆಸ್ ನ ಉಮೇಶಗೌಡ ಮೊದಲಾದವರ ಮೇಲೆ ನುಗ್ಗಿ  ಕಲ್ಲಿನಿಂದ ಹೊಡೆದಿದ್ದು ತಲೆಗೆ ಪೆಟ್ಟಾಗಿದೆ‌   ರಕ್ತ ಸ್ರಾವ ಆಗಿದೆ. ನಂತರ
ಎಸ್ಪಿ  ರಂಜಿತ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ  ನಾಗೇಂದ್ರ ಭೇಟಿ ಗ್ರಾಮಕ್ಕೆ ಹೆಚ್ಚಿನ ಪೊಲೀಸ್ ಬಂದು ಒದಗಿಸಿ  ಪರಿಸ್ಥಿತಿಯ‌ನ್ನು ನಿಯಂತ್ರಸಿದ್ದಾರೆ.
ಬಿಜೆಪಿಯವರ ಮೇಲೆ ಕ್ರಮಕ್ಕೆ ಒತ್ತಾಯಿಸಲಾಗಿದೆ.